ನ್ಯಾಯಾಲಯದ ತೀರ್ಪು ಸತ್ಯವನ್ನು ಎತ್ತಿ ಹಿಡಿದಿದೆ: ಮನಮೋಹನ್ ಸಿಂಗ್

Posted By:
Subscribe to Oneindia Kannada

ದೆಹಲಿ, ಡಿಸೆಂಬರ್ 21: 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಸಿಲುಕಿದ್ದು ಕನ್ನಿಮೊಳಿ , ರಾಜಾ ಆದರೂ ಅದರಿಂದ ತೀರ್ವ ಟೀಕೆಗೆ ಒಳಗಾದವರು ಆಗಿನ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ ಸಿಂಗ್ ಅವರು.

2ಜಿ ಸ್ಪೆಕ್ಟ್ರಂ, ಏನಿದು ಹಗರಣ? ಇಲ್ಲಿದೆ ಟೈಮ್ ಲೈನ್

ಶಾಂತ ಚಿತ್ತ ಪ್ರಧಾನಿ ಎನಿಸಿಕೊಂಡಿದ್ದ ಮನಮೋಹನ್ ಸಿಂಗ್ ಅವರ ಮೇಲೆ ವಿರೋಧ ಪಕ್ಷಗಳು ಮುಗಿಬಿದ್ದವು. ಹಗರಣಕ್ಕೆ ಮನಮೋಹನ್ ಸಿಂಗ್ ಅವರನ್ನೂ ಹೊಣೆಗಾರರನ್ನಾಗಿಸುವ ಪ್ರಯತ್ನವನ್ನೂ ವಿರೋಧಿಗಳು ಮಾಡಿದ್ದರು. ಆದರೆ ಈಗ ಹಗರಣದ ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದ್ದು, ಮನಮೋಹನ್ ಸಿಂಗ್ ಅವರು ತೀರ್ಪಿನ ಬಗ್ಗೆ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

Manmohan Singh comment on 2G verdict

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು "ನಾವು ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ನ್ಯಾಯಾಲಯವು ಸುಸ್ಪಷ್ಟವಾಗಿ ಯುಪಿಎ ಸರ್ಕಾರದ ಮೇಲೆ ಮಾಡಲಾಗಿದ್ದು ದುರುದ್ದೇಶಪೂರಿತ ಕಲ್ಪಿತ ಪ್ರಚಾರಗಳನ್ನು ಬದಿಗೆ ಸರಿಸಿ ಸತ್ಯವನ್ನು ಮುಂದೆ ಮಾಡಿದೆ' ಎಂದಿದ್ದಾರೆ.

2ಜಿ ಸ್ಪೆಕ್ಟ್ರಂ: ಎಲ್ಲಾ ಆರೋಪಿಗಳು ಖುಲಾಸೆ, ಯಾರು, ಏನು ಹೇಳಿದರು?

2ಜಿ ಪ್ರಕರಣದ ಪ್ರಮುಖ ಆರೋಪಿಗಳಾದ ಎ.ರಾಜಾ, ಕರುಣಾನಿಧಿ ಮಗಳು ಕನ್ನಿಮೊಳಿ ಸೇರಿದಂತೆ 18 ಆರೋಪಿಗಳನ್ನು ಸಾಕ್ಷಾಧಾರದ ಕೊರತೆಯ ಕಾರಣ ನೀಡಿ ಖುಲಸೆಗೊಳಿಸಿ ತೀರ್ಪು ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reacting to the 2G verdict, former prime minister Manmohan Singh said, ' We respect the court's judgement. Court has unambiguously put to rest the propaganda against UPA'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ