ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಜ ದೋಷ ಸರಿಪಡಿಸುವುದಾಗಿ ನಾಲ್ಕು ವರ್ಷ ನಿರಂತರ ಅತ್ಯಾಚಾರ

|
Google Oneindia Kannada News

ನವದೆಹಲಿ, ಅಕ್ಟೋಬರ್ 2: ಕುಜ ದೋಷ ನಿವಾರಣೆ ಮಾಡುವುದಾಗಿ ನಾಲ್ಕು ವರ್ಷದಿಂದ ಸೋದರ ಸಂಬಂಧಿ ಮಹಿಳೆ ಮೇಲೆ ಅತ್ಯಾಚಾರ ನಡೆಸುತ್ತಿದ್ದ ಆರೋಪದಲ್ಲಿ ಇಲ್ಲಿನ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಒಂದು ವೇಳೆ ದೋಷ ನಿವಾರಣೆ ಆಗದಿದ್ದರೆ 'ನಿನ್ನ ತಂದೆ ಬದುಕುವುದಿಲ್ಲ' ಎಂದು ಆತ 23 ವರ್ಷದ ಮಹಿಳೆಯನ್ನು ಹೆದರಿಸಿದ್ದ.

ಕಳೆದ ವರ್ಷಗಳಲ್ಲಿ ನಿರಂತರವಾಗಿ ಅತ್ಯಾಚಾರ ನಡೆದಿದೆ. ಮಹಿಳೆಗೆ ಮದುವೆ ಆದ ನಂತರ ಕೂಡ ಆಕೆ ಮೇಲಿನ ದೌರ್ಜನ್ಯ ನಿಂತಿಲ್ಲ. ಕೊನೆಗೆ ಮಹಿಳೆಯು ಈ ವಿಚಾರವನ್ನು ತನ್ನ ಪತಿಯ ತಂದೆಗೆ ತಿಳಿಸಿದ್ದಾರೆ. ಆ ನಂತರ ಅವರು ನರೇಲಾ ಪೊಲೀಸ್ ಠಾಣೆಗೆ ಬಂದು, ದೂರು ದಾಖಲಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

Man rapes niece for 4 years on pretext of treating manglik dosh: Delhi police

ಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರುಅತ್ಯಾಚಾರ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವರು

ಆರೋಪಿಯು ಮಹಿಳೆಯ ತಂದೆ ಕಡೆಯಿಂದ ಸಂಬಂಧಿ. ಎಫ್ ಐಆರ್ ದಾಖಲಾದ ದಿನದಂದೇ ಆತನನ್ನು ಬಂಧಿಸಲಾಗಿದೆ. ಸದ್ಯಕ್ಕೆ ಪೊಲೀಸರು ದೆಹಲಿ ಮಹಿಳಾ ನಿಯೋಗವನ್ನು ಸಂಪರ್ಕಿಸಿದ್ದು, ಸಂತ್ರಸ್ತೆಗೆ ಕೌನ್ಸೆಲಿಂಗ್ ಮಾಡುವಂತೆ ಕೇಳಿಕೊಂಡಿರುವುದಾಗಿ ತಿಳಿದುಬಂದಿದೆ. ಇನ್ನು ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರು ನೀಡಿಲ್ಲ.

English summary
A man has been arrested for allegedly raping his niece for over four years under the pretence of treating her manglik dosh, police said Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X