ವಿಡಿಯೋ: ಟ್ರಾಫಿಕ್‌ ಪೊಲೀಸ್‌ನ್ನು ಬಾನೆಟ್‌ ಮೇಲೆ ಎಳೆದೊಯ್ದ ಚಾಲಕ

Recommended Video

      Man Drags Traffic police in his Car's Bonnet | Traffic Police | Delhi | Oneindia Kannada

      ನವದೆಹಲಿ, ಫೆಬ್ರವರಿ 3: ರಸ್ತೆ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ತಡೆದಿದ್ದ ಟ್ರಾಫಿಕ್ ಪೊಲೀಸರ ಮೇಲೆಯೇ ಚಾಲಕನೋರ್ವ ಕಾರು ಹತ್ತಿಸಲು ಮುಂದಾದ ಘಟನೆ ದೆಹಲಿಯಲ್ಲಿ ನಡೆದಿದೆ.

      ಈ ಘಟನೆ ನಡೆದಿದ್ದು ನವೆಂಬರ್‌ನಲ್ಲಿ ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಮೂಲಗಳ ಪ್ರಕಾರ ಸುನಿಲ್ ಎಂಬ ಟ್ರಾಫಿಕ್ ಪೊಲೀಸ್ ದೆಹಲಿ ಹೊರವಲಯದ ನಗ್ಲೋಯ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

      ಈ ವೇಳೆ ತಪ್ಪು ದಾರಿಯಲ್ಲಿ ಕಾರೊಂದು ಆಗಮಿಸಿದ್ದು, ಕೂಡಲೇ ಇದನ್ನು ಗಮನಿಸಿದ ಪೇದೆ ಸುನಿಲ್ ಕಾರನ್ನು ನಿಲ್ಲಿಸಿದ್ದಾರೆ. ಅಲ್ಲದೆ ಕಾರಿನಿಂದ ಇಳಿದು ದಾಖಲೆ ತೋರಿಸುವಂತೆ ಚಾಲಕನನ್ನು ಕೇಳಿದ್ದಾರೆ.

      Man Drags Delhi Traffic Police On Cars Bonnet Video Goes Viral

      ಇದಕ್ಕೆ ಸೊಪ್ಪು ಹಾಕದ ಚಾಲಕ ಕಾರಿನಲ್ಲಿಯೇ ಕುಳಿತು ಕಾರು ಚಾಲನೆಗೆ ಮುಂದಾದಾಗ ಪೇದೆ ಸುನಿಲ್ ಕೂಡಲೇ ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರು ಚಾಲಕ ವೇಗವಾಗಿ ಕಾರು ಚಲಾಯಿಸಿದ್ದಾನೆ.

      ಬರೊಬ್ಬರಿ 2 ತಿಂಗಳ ನಂತರ ಈ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ನಡೆಸಿದ್ದಾರೆ.

      ಸುಮಾರು 2 ಕಿ.ಮೀ ದೂರದವರೆಗೇ ಪೇದೆ ಸುನಿಲ್ ನನ್ನು ಹೊತ್ತೊಯ್ದ ಚಾಲಕ ಬಳಿಕ ಪೇದೆಯನ್ನು ಕೆಳಗಿಳಿಸಿ ಪರಾರಿಯಾಗಿದ್ದಾನೆ. ಇವಿಷ್ಟೂ ಘಟನೆಯನ್ನು ಕಾರಿನಲ್ಲಿ ಕುಳಿತಿದ್ದ ಸಹ ಪ್ರಯಾಣಿಕ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+