'3 ದಿನದಲ್ಲಿ ಸಮಸ್ಯೆ ಸರಿಪಡಿಸಿ, ಇಲ್ಲದಿದ್ದರೆ ಸುಮ್ನೆ ಬಿಡಲ್ಲ'

Posted By:
Subscribe to Oneindia Kannada

ನವದೆಹಲಿ, ನವೆಂಬರ್ 17: ಇದು ಒಂಥರಾ ಬೆಂಕಿ-ಬಿರುಗಾಳಿ ಒಂದಾದಂಥ ಜೋಡಿ. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಟ್ಟೊಟ್ಟಿಗೆ ಕೇಂದ್ರ ಸರಕಾರದ ನೋಟು ರದ್ದು ನಿರ್ಧಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಂದು ವೇಳೆ ಈ ನೋಟು ರದ್ದು ನಿರ್ಧಾರ ವಾಪಸ್ ತಗೊಳ್ಳಲಿಲ್ಲ ಅಂದರೆ ವ್ಯಾಪಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇವತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಹೋಗಿ ಹೊಸ ನೋಟುಗಳ ಮುದ್ರಣ ಕಾರ್ಯ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಿದ್ದೀವಿ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಮೂರು ದಿನದೊಳಗೆ ನೋಟು ರದ್ದು ನಿರ್ಧಾರ ವಾಪಸ್ ತಗೊಳ್ಳಿ. ಸುಮ್ಮನೆ ಜನರ ತಾಳ್ಮೆ ಪರಿಶೀಲಿಸಬೇಡಿ. ಇಲ್ಲದಿದ್ದರೆ ಜನ ದಂಗೆ ಏಳ್ತಾರೆ' ಎಂದು ಅರವಿಂದ್ ಕೇಜ್ರಿವಾಲ್ ದೇಶದ ಅತಿದೊಡ್ಡ ಸಗಟು ಮಾರಾಟ ಸ್ಥಳವಾದ ದೆಹಲಿಯ ಆಜಾದ್ ಪುರ್ ಮಂಡಿಯಲ್ಲಿ ಹೇಳಿದ್ದಾರೆ.[ಹಣ ಬದಲಾವಣೆ, ವಿಥ್ ಡ್ರಾ ಮಿತಿ ಇಳಿಕೆಗೆ ಕಾರಣ ಏನು?]

Mamatha-kejriwal

ನೋಟು ರದ್ದು ಎಂಬುದು 1947ರ ನಂತರ ದೇಶದಲ್ಲಿ ನಡೆದ ಅತಿ ದೊಡ್ಡ ಹಗರಣ. ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ನಿಯಮಗಳನ್ನು ಮುರಿದಿದ್ದಾರೆ. ಮೊದಲೇ ಈ ಬಗ್ಗೆ ಯಾಕೆ ಸರಿಯಾದ ಯೋಜನೆ ರೂಪಿಸಲಿಲ್ಲ? ಜನ ಸಾಮಾನ್ಯರು ಇದರಿಂದ ತೊಂದರೆ ಅನುಭವಿಸ್ತಿದ್ದಾರೆ. ನಾವು ನಿಮಗೆ ಮೂರು ದಿನ ಸಮಯ ಕೊಡ್ತಿದೀವಿ. ಎಲ್ಲ ಸಮಸ್ಯೆ ನಿವಾರಿಸಲಿಲ್ಲ ಅಂದರೆ ನಿಮ್ಮನ್ನ ಸುಮ್ಮನೆ ಬಿಡಲ್ಲ, ನಾವಿನ್ನೂ ಬದುಕಿದ್ದೀವಿ ಎಂದು ಮಮತಾ ಗುಡುಗಿದ್ದಾರೆ.[ಮೋದಿ ತವರಿನಲ್ಲೇ ಆಯ್ತು ಹೊಸ ನೋಟಿನ ಭ್ರಷ್ಟಾಚಾರ]

ಎಷ್ಟು ಹಣ ಬೇಕಾಗುತ್ತದೆ? ಎಷ್ಟು ಮುದ್ರಣವಾಗಿದೆ? ನೋಟು ಮುದ್ರಣದ ಸಾಮರ್ಥ್ಯ ಏನು? ಇನ್ನೂ ಎಷ್ಟು ದಿನ ಬೇಕಾಗುತ್ತದೆ? ಈ ಎಲ್ಲ ಮಾಹಿತಿಯನ್ನು ಕಲೆ ಹಾಕುವುದಕ್ಕೆ ನಾನು ಹಾಗೂ ಮಮತಾ ಬ್ಯಾನರ್ಜಿ ಅವರು ರಿಸರ್ವ್ ಬ್ಯಾಂಕ್ ಗೆ ಹೋಗಿದ್ದಿವಿ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mamata Banerjee and Arvind Kejriwal made a attack on the government today, warning that there will be intense protests and unrest if it does not withdraw its ban on 500 and 1000 rupee notes.
Please Wait while comments are loading...