ಭಾರತದಲ್ಲಿ ಮೋಡದ ಹಿಂದೆ ಮರೆಯಾದಾನು ಗ್ರಹಣಗ್ರಸ್ತ ರಕ್ತಚಂದ್ರ!

ನವದೆಹಲಿ, ಜುಲೈ 27: ಶತಮಾನದ ಕೌತುಕವನ್ನು ನೋಡಲು ವಿಶ್ವದಾದ್ಯಂತ ಜನರು ಕೌತುಕದಿಂದ ಕಾಯುತ್ತಿದ್ದಾರೆ. ಜುಲೈ 27 ರಂದು ಸಂಭವಿಸುವ ಚಂದ್ರಗ್ರಹಣ 21 ನೇ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಸುಮಾರು ಮೂರು ಮುಕ್ಕಾಲು ತಾಸು ಚಂದ್ರ ಗ್ರಹಣಗ್ರಸ್ತವಾಗಲಿದ್ದಾನೆ.

ಆದರೆ ಭಾರತದಲ್ಲಿ ಎಲ್ಲೆಲ್ಲೂ ಮಳೆ ಸುರಿಯುತ್ತಿರುವುದರಿಂದ ಈ ಖಗೋಳ ವಿಸ್ಮಯವನ್ನು ನೋಡುವುದಕ್ಕೆ ಸಾಧ್ಯವಾಗದೆ ಇರಬಹುದು ಎನ್ನಲಾಗುತ್ತಿದೆ.

ಭಾರತೀಯ ಖಗೋಳ ಸಂಸ್ಥೆಯು ಜು.27 ಶುಕ್ರವಾರದಂದು ರಾತ್ರಿ 11:54 ರಿಂದ ಆರಂಭವಾಗಿ ನಂತರ ಜು.28 ರ ಬೆಳಗ್ಗಿನ ಜಾವ 3.47 ರವರೆಗೂ ಕಂಡುಬರುವ ಈ ಗ್ರಹಣವನ್ನು ನೋಡಲು ವ್ಯವಸ್ಥೆ ಮಾಡಿದೆ. ರಾತ್ರಿ 1 ಗಂಟೆಯಿಂದ 2.43 ರವರೆಗೆ ಚಂದ್ರ ಸಂಪೂರ್ಣ ಮರೆಯಾಗಲಿದ್ದು, ಮತ್ತೆ ಇಂಥ ಖಗ್ರಾಸ ಚಂದ್ರಗ್ರಹಣ ನೋಡಲು 2036 ರವರೆಗೆ ಕಾಯಬೇಕು.

Lunar eclipse: Red blood moon may not be seen in India due to cloudy weather

ಭಾರತೀಯ ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ ಜೂನ್ 19 ರಿಂದ ಆರಂಭವಾಗಿರುವ ಮಳೆ, ಆಗಸ್ಟ್ 1 ರವರೆಗೂ ನಿರಂತರವಾಗಿ ಸುರಿಯಲಿದೆ. ಆದ್ದರಿಂದ ಈ ರಕ್ತ ಚಂದ್ರಗ್ರಹಣವನ್ನು ನೋಡಲು ಸಾಧ್ಯವಾಗದಿರಬಹುದು.

ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ದಕ್ಷಿಣ ಅಮೆರಿಕಗಳಲ್ಲಿ ಚಂದ್ರಗ್ರಹಣ ಕಾಣಿಸಿಕೊಳ್ಳಲಿದೆ. ಚಂದ್ರ ಕೆಂಪುಬಣ್ಣದಲ್ಲಿ ಕಾಣಲಿರುವ ಕಾರಣ ಈ ಚಂದ್ರಂಗೆ ರಕ್ತಚಂದ್ರ, ಬ್ಲಡ್ ಮೂನ್ ಎಂದು ಹೆಸರು. ಈ ದಿನ ಮಂಗಳ ಗ್ರಹವೂ ಭೂಮಿಗೆ ತೀರಾ ಹತ್ತಿರ ಬರುವುದು ಇನ್ನೋದು ವಿಸ್ಮಯ ಎನ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+