ಬಿಜೆಪಿಗೆ ಬಹುಮತ ಸಿಗೋದು ಡೌಟು ಎಂದ ಬಿಜೆಪಿಯ ಪ್ರಮುಖ ನಾಯಕ

ನವದೆಹಲಿ, ಮೇ 06: ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಿಗಬೇಕೆಂದರೆ ಮೈತ್ರಿ ಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಬಹುದು ಎಂದು ಬಿಜೆಪಿ ನಾಯಕ ರಾಮ್ ಮಾಧವ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, "ಅಕಸ್ಮಾತ್ 271 ಕ್ಷೇತ್ರಗಳಲ್ಲಿ ಗೆದ್ದರೆ ನಾವು ನಿಜಕ್ಕೂ ಸಂತಸ ಪಡುತ್ತೇವೆ. ಇಲ್ಲವೆಂದರೂ ನಾವು ಎನ್ ಡಿಎ ಜೊತೆ ಸೇರಿ ಆಡಳಿತ ನಡೆಸುತ್ತೇವೆ" ಎಂದು ರಾಮ್ ಮಾಧವ್ ಹೇಳಿದರು.

2014 ರ ಚುನಾವಣೆಯಲ್ಲಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದ ಬಿಜೆಪಿ ಈ ಬಾರಿ ಹಲವು ಕ್ಷೇತ್ರಗಳಲ್ಲಿ ಸೋಲಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಆದರೂ ಸರ್ಕಾರದ ಪರ ಅಲೆ ಇರುವುದರಿಂದ ಬಿಜೆಪಿ, ಎನ್ ಡಿಎ ಮೈತ್ರಿ ಕೂಟದ ಇತರ ಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಲಿದೆ ಎಂದು ಅವರು ಹೇಳಿದ್ದಾರೆ.

LS polls: BJP may need other parties for majority: Ram Madhav

ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು, '2014 ರಲ್ಲಿ ಮೋದಿ ಅಲೆ ಇತ್ತು. ಈ ಬಾರಿ ಮೋದಿ ಸುನಾಮಿ ಇದೆ. ಬಿಜೆಪಿಗೆ ಒಂದು ಮತ ಹಾಕಿದರೆ, ಉಗ್ರ ಶಿಬಿರದ ಮೇಲೆ ಸಾವಿರ ಕೆಜಿ ಬಾಂಬ್ ಹಾಕಿದಂತೆ' ಎಂಬ ಹೇಳಿಕೆ ನೀಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+