ನಾನೇನು ಯಾವೋಳ ಹಿಂದೇನೂ ಓಡಿಹೋಗ್ಲಿಲ್ಲ: ಕೇಜ್ರಿವಾಲ್
ನವದೆಹಲಿ, ಏಪ್ರಿಲ್ 7: ಆಮ್ ಆದ್ಮಿ ಪಕ್ಷದ ಅಧಿನಾಯಕ ಅರವಿಂದ್ ಕೇಜ್ರಿವಾಲ್ ಅವರ ಎಡವಟ್ಟುಗಳು ಇನ್ನೂ ಮುಂದುವರಿದಿದೆ. 49ನೇ ದಿನವೇ ಕೊಟ್ಟ ಕುದುರೆಯನೇರಲಾಗದೆ ತಾವಿನ್ನೂ ರಾಜಕೀಯದಲ್ಲಿ ಅಪ್ರಬುದ್ಧವೆಂಬುದನ್ನು ಜಗಜ್ಜಾಹೀರು ಮಾಡಿದ್ದ ಅರವಿಂದ್ ಇನ್ನೂ ಆ ಗುಂಗಿನಿಂದ ಹೊರಬಂದಿಲ್ಲ.
ತಾವಿನ್ನೂ ಎಳಸು ಎಂಬುದನ್ನು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಾಬೀತುಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿರುವ ಅವರು 'ದಿಲ್ಲಿ ಮುಖ್ಯಮಂತ್ರಿಯಾಗಿ ನೀವು ಪಲಾಯನ ಮಾಡಿ ಬಿಟ್ಟಿರಿ, ಯಾಕೆ ಹಾಗೆ ಮಾಡಿದಿರಿ? ಎಂದು ಹೋದಲ್ಲೆಲ್ಲಾ ಜನ ಪ್ರಶ್ನೆ ಕೇಳುತ್ತಿದ್ದಾರೆ' ಎಂದು ಸಾರ್ವಜನಿಕ ಸಭೆಯೊಂದರಲ್ಲಿ ಸ್ವಗತಃ ಹೇಳಿಕೊಂಡ ಅರವಿಂದ್ ಅದಕ್ಕೆ ಸ್ವಾರಸ್ಯಕರ ಉತ್ತರ/ಸಮಜಾಯಿಷಿಯನ್ನೂ ನೀಡಿದ್ದಾರೆ.

'ಥೂ ನಾನೇನು ಯಾರದೋ ಮಗಳ ಹಿಂದೆ ಓಡಿಹೋಗಲಿಲ್ಲ' ಎಂದಿದ್ದಾರೆ ಅರವಿಂದ್! ಇದನ್ನು ಕೇಳಿಸಿಕೊಂಡ ಜನ 'ಇದು ಪ್ರಬುದ್ಧ ರಾಜಕೀಯ ನಾಯಕನೊಬ್ಬ ಆಡುವ ಮಾತಾ? ಅಥವಾ ಬೇಜವಾಬ್ದಾರಿ ಪಡಪೋಷಿ ಯುವಕನು ಹೇಳುವಂಥಾ ಮಾತಾ? ಎಂದು ಮುಸಿಮುಸಿ ನಗತೊಡಗಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಅರವಿಂದ್ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿದಿದ್ದರ ಬಗ್ಗೆ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ: 'Mr. Kejriwal Dont RUN; Run the govt' [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ದಿಲ್ಲಿಯ ಪ್ರತಿಷ್ಠಿತ ಚಾಂದಿನಿ ಚೌಕ್ ನಲ್ಲಿ ನಿನ್ನೆ ಭಾನುವಾರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಅರವಿಂದ್ ಕೇಜ್ರಿವಾಲ್ ಅವರು 'ಭ್ರಷ್ಟಾಚಾರ ವಿರುದ್ಧ ಹೋರಾಡುವುದೇ ನನ್ನ ಗುರಿ. ಅದಕ್ಕಾಗಿ ಕೊನೆಯುಸಿರಿರುವವರೆಗೂ ಹೋರಾಡುವೆ. ನಾನೇನು ಯಾವುದೋ ಹುಡುಗಿಯ ಹಿಂದೆ ಓಡಿಹೋಗಿಲ್ಲ ಅಲ್ವಾ?' ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
'ಜನ ನನ್ನನ್ನು ಕಂಡು ಅಧಿಕಾರದಿಂದ ಓಡಿಹೋದ ಎಂದು ಹೀಗಳೆಯುತ್ತಿದ್ದಾರೆ. ಆದರೆ ನಾನು ಇಲ್ಲೇ ನಿಮ್ಮ ಕಣ್ಣೆದುರಿಗೇ ಇದ್ದೇನೆ. ನಾನು ಯಾರದೋ ಮಗಳ ಹಿಂದೆ ಓಡಿಹೋಗಿಲ್ಲ. ಅಷ್ಟಕ್ಕೂ ನಾನೇನೂ ಪಾಕಿಸ್ತಾನಕ್ಕೆ ಹೋಗಿಲ್ಲ' ಎಂದು ಬಾಲಿಶವಾಗಿ ಹೇಳುತ್ತಾ, ಮಧ್ಯೆ ಪಾಕಿಸ್ತಾನದ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.












Click it and Unblock the Notifications