• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ 2 ರೂ ಹೆಚ್ಚಳ

|

ನವದೆಹಲಿ, ನವೆಂಬರ್ 9: ಸಬ್ಸಿಡಿ ಸಹಿತ ಅಡುಗೆ ಅನಿಲ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 2 ರೂ ಹೆಚ್ಚಳವಾಗಿದೆ.

ಸರ್ಕಾರವು ಎಲ್‌ಪಿಜಿ ಗ್ಯಾಸ್ ವಿತರಕರಿಗೆ ನೀಡಲಾಗುವ ಕಮಿಷನ್ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ದೇಶೀಯ ಅಡುಗೆ ಅನಿಲ ಬೆಲೆಯಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ 14.2 ಕೆ.ಜಿ.ಸಬ್ಸಿಡಿ ಸಹಿತ ಸಿಲೆಂಡರ್ ಬೆಲೆ ರೂ 505.34ರಿಂದ ರೂ. 507.42 ಆಗಿದೆ.ಕೇಂದ್ರ ಇಂಧನ ಸಚಿವಾಲಯದ ಆದೇಶವನ್ನು ಅನುಸರಿಸಿ ಈ ಹೆಚ್ಚಳ ಮಾಡಲಾಗಿದೆ.

ಮಧ್ಯರಾತ್ರಿಯಿಂದ ಮತ್ತೆ ಮೇಲೇರಿತು ಅಡುಗೆ ಇಂಧನ ದರ

2017 ರ ಸೆಪ್ಟೆಂಬರ್ ನಲ್ಲಿ 14.2 ಕೆ.ಜಿ ಸಿಲಿಂಡರ್ ಮತ್ತು 5 ಕೆಜಿ ಸಿಲಿಂಡರ್ ಗಳಿಗೆ ಗೆ ಸ್ಥಳೀಯ ಎಲ್ ಪಿಜಿ ವಿತರಕರು ಕ್ರಮವಾಗಿ 48.89 ರೂ. ಮತ್ತು 24.20 ರೂ. ಕಮಿಷನ್ ಪಡೆಯಲಿದ್ದಾರೆ. ಇನ್ನು ಮುಂಬೈನಲ್ಲಿ 14.2 ಕೆ.ಜಿ. ಅಡಿಗೆ ಅನಿಲ ಸಿಲೆಂಡರ್ ಬೆಲೆ ಈಗ 505.05 ರೂ. ಆಗಿದ್ದರೆ ಕೋಲ್ಕತಾದಲ್ಲಿ 510.70 ರೂ. ಚೆನ್ನೈನಲ್ಲಿ 495.39 ರೂ ಇದೆ. ತೆರಿಗೆಗಳು ಹಾಗೂ ಸಾರಿಗೆ ವೆಚ್ಚದ ಆಧಾರದ ಮೇಲೆ ಪ್ರತಿ ರಾಜ್ಯ ರಾಜ್ಯಕ್ಕೂ ವ್ಯತ್ಯಾಸ ಕಂಡುಬರಲಿದೆ.

ಗೃಹ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ

ಎರಡನೇ ಬಾರಿಗೆ ನವೆಂಬರ್ ನಲ್ಲಿ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತಿದೆ. ಇದಕ್ಕೆ ಹಿಂದೆ ಮೂಲ ಬೆಲೆಗೆ ತೆರಿಗೆ ಹೆಚ್ಚಳವಾಗಿದ್ದ ಕಾರಣ ನವೆಂಬರ್ 1ರಂದು ಸಿಲೆಂಡರ್ ಒಂದಕ್ಕೆ 2.94 ರೂ. ಹೆಚ್ಚಳ ಮಾಡಲಾಗಿತ್ತು. ಜಿಎಸ್ಟಿ ತೆರಿಗೆ ದರ ಹೆಚ್ಚಳವಾಗಿರುವ ಕಾರಣ ಜೂನ್ ನಿಂದ ಎಲ್ ಪಿಜಿ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ಪ್ರತಿ ತಿಂಗಳೂ ಏರಿಕೆಯಾಗಿದೆ. ಇದುವರೆಗೆ ಒಟ್ಟು ಬೆಲೆ 16.21 ರೂ.ಏರಿಕೆ ದಾಖಲಾಗಿದೆ.

English summary
Domestic cooking gas LPG prices have been hiked by over Rs 2 per cylinder after the government increased the commission paid to LPG dealers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X