• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿರೋಧಗಳ ನಡುವೆಯೇ ಲೋಕಸಭೆಯಲ್ಲಿ ಆಧಾರ್ ಮಸೂದೆ ಮಂಡನೆ

|

ನವದೆಹಲಿ, ಜುಲೈ 05: ಹಲವು ವಿರೋಧಗಳ ನಡುವೆಯೇ ಲೋಕಸಭೆಯಲ್ಲಿ ಗುರುವಾರ ಆಧಾರ್ ಮಸೂದೆಯನ್ನು ಮಂಡಿಸಲಾಯಿತು. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಆಧಾರ್ ಮಂಡನೆಯ ಕುರಿತು ಲೋಕಸಭೆಯಲ್ಲಿ ಪ್ರಸ್ತಾಪಿಸಿದರು.

ಆಧಾರ್ ನಿಂದಾಗಿ ಖಾಸಗೀತನಕ್ಕೆ ಧಕ್ಕೆಯಾಗುತ್ತದೆ ಎಂಬ ಆರೋಪ ಸುಳ್ಳು. ಇದನ್ನು ಜನರ ಉಪಯೋಗಕ್ಕಾಗಿ ಮಂಡಿಸಲಾಗುತ್ತಿದೆ. ಇದು ಜನಸ್ನೇಹಿಯಾಗಿದ್ದು, ಸ್ವಚ್ಛೆಯಿಂದ ಜನರು ಆಧಾರ್ ಹೊಂದಬಹುದು, ಸುಪ್ರೀಂ ಕೋರ್ಟ್ ನ ಆದೇಶದಂತೆ ಎಲ್ಲಾ ಸೇವೆಗಳಿಗೂ ಅದು ಕಡ್ಡಾಯವಲ್ಲ ಎಂದು ರವಿಶಂಕರ್ ಪ್ರಸಾದ್ ಹೇಳಿದರು.

ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಈಗಾಗಲೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಆಧಾರ್ ಬಗ್ಗೆ ಜನ ಸಾಮಾನ್ಯರಲ್ಲೂ ತಕರಾರಿಲ್ಲ. ಅವರೂ ಒಪ್ಪಿಕೊಂಡಿದ್ದಾರೆ. ಸಂತೋಷವಾಗಿದ್ದಾರೆ, ಹೀಗಿರುವಾಗ ನೀವ್ಯಾಕೆ ದುಃಖಿತರಾಗಿದ್ದೀರಿ ಎಂದು ಅವರು ವಿಪಕ್ಷಗಳನ್ನು ಪ್ರಶ್ನಿಸಿದರು.

ಸಾರ್ವತ್ರಿಕ ಗುರುತಿನ ಚೀಟಿಯಾದ ಆಧಾರ್ ನಿಂದ ಖಾಸಗೀತನಕ್ಕೆ ಧಕ್ಕೆಯುಂಟಾಗುತ್ತಿದೆ ಎಂಬ ಕೂಗು ಎದ್ದಿದ್ದ ಸಮಯದಲ್ಲಿ ಕಳೆದ ಸೆಪ್ಟೆಂಬರ್ 26 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಮಹತ್ವದ ತೀರ್ಪಿನಲ್ಲಿ ಆಧಾರ್ ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿಯಲಾಗಿತ್ತು. ಆಧಾರ್ ಕಾರ್ಡ್ ಅನ್ನು ಎಲ್ಲಾ ಸರ್ಕಾರಿ ಯೋಜನೆಗಳಿಗೆ ಕಡ್ಡಾಯವಾಗಿ ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ

ಆದರೆ ಬ್ಯಾಂಕ್ ಖಾತೆ ತೆರೆಯಲಿ, ಮೊಬೈಲ್ ಸಿಮ್ ಪಡೆಯಲು ಸೇರಿದಂತೆ ಇನ್ನಿತರ ಕೆಲವು ಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದೂ ಅದು ತೀರ್ಪು ನೀಡಿತ್ತು.

English summary
The Lok Sabha on Thursday unanimously passed the Aadhaar and Other Laws (Amendment) Bill, 2019, which aims to impose strict penalties for violation of norms set for the use of Aadhaar and violation of privacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X