• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಣರಾಜ್ಯೋತ್ಸವ ಫ್ಲೈಪಾಸ್ಟ್‌ನಲ್ಲಿ ವಿಶೇಷ ಸಾಧನೆಗೈದ ಮಹಿಳಾ ಪೈಲಟ್

|

ನವದೆಹಲಿ, ಜನವರಿ 26: ಲೆಫ್ಟಿನೆಂಟ್ ಸ್ವಾತಿ ರಾಥೋಡ್ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ ನಲ್ಲಿ ನಡೆದ ಭಾರತೀಯ ವಾಯುಪಡೆಯ ಫ್ಲೈಪಾಸ್ಟ್‌ ಗಣರಾಜ್ಯೋತ್ಸವ ಪರೇಡ್‌ನ ನೇತೃತ್ವ ವಹಿಸಿದ್ದರು.

ಭಾರತೀಯ ವಾಯುಪಡೆ ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಕೊಯ್-30 ಯುದ್ಧ ವಿಮಾನಗಳ ಪ್ರದರ್ಶನವನ್ನು ಏರ್ಪಡಿಸಿತ್ತು. ಫ್ಲೈಪಾಸ್ಟ್‌ನ ನೇತೃತ್ವವಹಿಸಿದ ಮೊದಲ ಮಹಿಳೆ ಎನ್ನುವ ಖ್ಯಾತಿಗೆ ಸ್ವಾತಿ ರಾಥೋಡ್ ಪಾತ್ರರಾಗಿದ್ದಾರೆ.

ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್ಗಣರಾಜ್ಯೋತ್ಸವ ದಿನದ ಫ್ಲೈಪಾಸ್ಟ್ ನೇತೃತ್ವ ವಹಿಸಲಿದ್ದಾರೆ ಸ್ವಾತಿ ರಾಥೋಡ್

ಇಂದು ಮಹಿಳೆಯರು ಕೂಡ ದೇಶದ ಮಿಲಿಟರಿಯ ಮೂರೂ ಪಡೆಗಳಲ್ಲಿ ತಮ್ಮ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಎನ್ ಸಿಸಿ ಹೆಣ್ಣುಮಕ್ಕಳು ಮಹಾರಾಷ್ಟ್ರದ ಎನ್ ಸಿಸಿ ನಿರ್ದೇಶನಾಲಯದ ಹಿರಿಯ ಅಧೀನ ಅಧಿಕಾರಿ ಸಮೃದ್ಧಿ ಹರ್ಷಲ್ ಸಂತ್ ನೇತೃತ್ವದಲ್ಲಿ ಪಥ ಸಂಚಲನ ಸಾಗಿದರು.

ದೇಶದ ಮೂವರು ಮಹಿಳಾ ಯುದ್ಧ ಪೈಲಟ್ ಗಳಲ್ಲಿ ಒಬ್ಬರಾದ ಲೆಫ್ಟಿನೆಂಟ್ ಭಾವನಾ ಕಾಂತ್ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಪಥ್ ನಲ್ಲಿ ನಡೆದ ಭಾರತೀಯ ವಾಯುಪಡೆಯ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಾಕ್ಷಿಯಾದರು.

ಭಾರತೀಯ ವಾಯುಪಡೆ ಹಗುರ ಯುದ್ಧವಿಮಾನ, ಹಗುರ ಯುದ್ಧ ಹೆಲಿಕಾಪ್ಟರ್ ಮತ್ತು ಸುಕೊಯ್-30 ಯುದ್ಧ ವಿಮಾನಗಳ ಪ್ರದರ್ಶನವನ್ನು ಏರ್ಪಡಿಸಿತ್ತು.

Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮRepublic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ

ಬಿಹಾರದ ದರ್ಬಾಂಗ್ ನವರಾದ ಭಾವನಾ ಕಾಂತ್, ಬೆಗುಸರೈಯಲ್ಲಿ ಬೆಳೆದಿದ್ದರು. ಅಲ್ಲಿ ಅವರ ತಂದೆ ಐಒಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬಾರೌನಿ ರಿಫೈನರಿ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ವೈದ್ಯಕೀಯ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.

ವಿಮಾನ ಹಾರಾಟ ನಡೆಸುವುದು ಮಾತ್ರವಲ್ಲದೆ ಬ್ಯಾಡ್ಮಿಂಟನ್ ಆಡುವುದು, ವಾಲಿಬಾಲ್, ಸಾಹಸ ಕ್ರೀಡೆಗಳು, ಫೋಟೋಗ್ರಫಿ, ಅಡುಗೆ ಮಾಡುವುದು, ಈಜು ಮತ್ತು ಪ್ರವಾಸ ಹೋಗುವ ಹವ್ಯಾಸವನ್ನು ಭಾವನ ಕಾಂತ್ ಹೊಂದಿದ್ದಾರೆ.

ಇನ್ನು 140 ವಾಯು ರಕ್ಷಣಾ ರೆಜಿಮೆಂಟ್ ನ ಸುಧಾರಿತ ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕ್ಯಾಪ್ಟನ್ ಪ್ರೀತಿ ಚೌಧರಿ ಮುನ್ನಡೆಸಿದ್ದಾರೆ.ಇಂದು ಪಥಸಂಚಲನದಲ್ಲಿ ಭಾಗವಹಿಸಿದ ಏಕೈಕ ಮಹಿಳಾ ರೆಜಿಮೆಂಟ್ ಕಮಾಂಡರ್ ಕ್ಯಾಪ್ಟನ್ ಪ್ರೀತಿ ಚೌಧರಿ ಆಗಿದ್ದಾರೆ.

ಸ್ಚಿಲ್ಕ ಶಸ್ತ್ರಾಸ್ತ್ರ ವ್ಯವಸ್ಥೆ ಆಧುನಿಕ ರಾಡಾರ್ ಮತ್ತು ಡಿಜಿಟಲ್ ಅಗ್ನಿ ನಿಯಂತ್ರಣ ಕಂಪ್ಯೂಟರ್ ನ್ನು ಹೊಂದಿದೆ.

English summary
Flight Lieutenant Swati Rathore is Created history by becoming the first woman Pilot Who Led Republic day flypast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X