2017 - ಜ್ಞಾನಪೀಠ ಪ್ರಶಸ್ತಿ ಪಡೆದ ಹಿಂದಿ ಲೇಖಕಿ ಕೃಷ್ಣ ಸೋಬ್ತಿ
ನವದೆಹಲಿ, ನವೆಂಬರ್ 04: ಪ್ರಖ್ಯಾತ ಹಿಂದಿ ಸಾಹಿತಿ ಕೃಷ್ಣ ಸೋಬ್ತಿ(92) ಅವರಿಗೆ 2017 ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಸೋಬ್ತಿ ಅವರು ಒಬ್ಬ ಅನನ್ಯ ಕಾದಂಬರಿಕಾರ್ತಿ, ಹಿಂದಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಅವರು ಪ್ರಮುಖರು ಎಂದು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ.
ನ.03 ಶುಕ್ರವಾರದಂದು ಈ ಬಾರಿಯ ಜ್ಞಾನಪೀಠ ಪ್ರಶಸ್ತಿಗೆ ಸಾಬ್ತಿ ಅವರನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ ಸಮಿತಿ, ಸಬ್ತಿ ಅವರು ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸುವಲ್ಲಿ ತೋರಿದ ಧೈರ್ಯವನ್ನು ಶ್ಲಾಘಿಸಿತು.

ದಾರ್ ಸೆ ಬಿಚ್ಚುಡಿ, ಮಿತ್ರೋ ಮರ್ಜಾನಿ, ಜಿಂದಗಿನಾಮ, ದಿಲ್ ಒ ದನಿಶ್ ಸೇರಿದಂತೆ ಅವರು ಹಲವು ಪ್ರಮುಖ ಕೃತಿಗಳು ಇಂಗ್ಲಿಷ್ ಭಾಷೆಗೂ ಅನುವಾದವಾಗಿವೆ. ಸೋಬ್ತಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಭಾರತೀಯ ಸರಕಾರವು ಈ ಮೊದಲೇ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದ್ದನ್ನೂ ಇಲ್ಲಿ ಸ್ಮರಿಸಬಹುದು.












Click it and Unblock the Notifications