ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಕೊರೊನಾದ ಎರಡನೇ ಅಲೆ: ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ದೆಹಲಿಯಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಲು ಪರೀಕ್ಷೆಯೇ ಕಾರಣ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Recommended Video

Ragini ರಿಲೀಸ್ ಗೆ ಒತ್ತಡ, ಕಥೆಗೆ CT Ravi ಟ್ವಿಸ್ಟ್ | Oneindia Kannada

ದೆಹಲಿಯಲ್ಲಿ ಕೊರೊನಾ ಪರೀಕ್ಷೆ ಹೆಚ್ಚಿಸಲಾಗಿದ್ದು, ಅದರಿಂದ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ದೆಹಲಿಯಲ್ಲಿ ಶೇ.90ರಷ್ಟು ರೋಗಿಗಳು ಕೊರೊನಾದಿಂದ ಗುಣಮುಖ ದೆಹಲಿಯಲ್ಲಿ ಶೇ.90ರಷ್ಟು ರೋಗಿಗಳು ಕೊರೊನಾದಿಂದ ಗುಣಮುಖ

ದೆಹಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ ಎಂದಿದ್ದಾರೆ. ಕಳೆದ 50 ದಿನಗಳ ಬಳಿಕ ಮತ್ತೆ 2 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

Kejriwal Says The Covid-19 Situation In Delhi Is Under Control

ಕೊರೊನಾ ಸೋಂಕನ್ನು ಕಡಿಮೆ ಮಾಡಲು ದೆಹಲಿಯನ್ನು ಮಾದರಿಯಾಗಿ ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದರು, ಕೊರೊನಾ ಎರಡನೇ ಅಲೆಗೆ ದೆಹಲಿಯ ಉದಾಹರಣೆಯನ್ನು ನೀಡಲು ಆರಂಭಿಸಿದ್ದಾರೆ.

ಆದರೆ ಇದೆಲ್ಲಕ್ಕೂ ಉತ್ತರ ನೀಡಿರುವ ಕೇಜ್ರಿವಾಲ್, ದಿನ ಹೆಚ್ಚೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ ಹೀಗಾಗಿ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕಿನಿಂದ ಸಾಯುವವರ ಸಂಖ್ಯೆ ಶೇ.0.5 ಅಷ್ಟಿದೆ. ಸರ್ಕಾರವು ಕೊರೊನಾ ಸಂಬಂಧಿತ ಸಾವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಡುತ್ತಿದೆ.

ಶುಕ್ರವಾರ 15 ಮಂದಿ ಸಾವನ್ನಪ್ಪಿದ್ದಾರೆ. ಇದು ಸಣ್ಣ ಅಂಕಿಯಾಗಿದ್ದರೂ ಕೂಡ ಓರ್ವ ವ್ಯಕ್ತಿಯೂ ಸಾವನ್ನಪ್ಪಬಾರದು, ಜೂನ್ ತಿಂಗಳಲ್ಲಿ ನಿತ್ಯ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದರು.

ದೆಹಲಿಯಲ್ಲಿರುವ ಆಸ್ಪತ್ರೆಗಳಲ್ಲಿ ಶೇ.70ರಷ್ಟು ಹಾಸಿಗೆಗಳು ಖಾಲಿ ಇವೆ, ಶೇ.30ರಷ್ಟು ಹಾಸಿಗೆಗಳನ್ನು ಮಾತ್ರ ಆಕ್ರಮಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

English summary
Delhi Chief Minister Arvind Kejriwal Said that "The numbers of Covid Cases are rising because more and more tests are being done every day in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X