ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕೋಪಯೋಗಿ ಇಲಾಖೆ ಹಗರಣ: ಕೇಜ್ರಿವಾಲ್ ಸಂಬಂಧಿ ಬಂಧನ

|
Google Oneindia Kannada News

ನವದೆಹಲಿ, ಮೇ 10: ಲೋಕೋಪಯೋಗಿ ಇಲಾಖೆಯಲ್ಲಿ ನಡೆದಿರುವ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿ ವಿನಯ್ ಬನ್ಸಾಲ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.

ವಿನಯ್ ಬನ್ಸಾಲ್ ಅವರು ಕೇಜ್ರಿವಾಲ್ ಅವರ ಸೋದರ ಸಂಬಂಧಿ ಸುರೇಂದರ್ ಬನ್ಸಾಲ್ ಅವರ ಮಗ. ಅವರನ್ನು ಗುರುವಾರ ಬೆಳಿಗ್ಗೆ ಬಂಧಿಸಿರುವುದನ್ನು ಎಸಿಬಿ ಮುಖ್ಯಸ್ಥ ಅರವಿಂದ್ ದೀಪ್ ಸ್ಪಷ್ಟಪಡಿಸಿದ್ದಾರೆ.

ಆಪ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೇಜ್ರಿವಾಲ್, ಸಿಸೋಡಿಯಾಆಪ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕೇಜ್ರಿವಾಲ್, ಸಿಸೋಡಿಯಾ

ತಂದೆ ಪಾಲುದಾರಿಕೆ ಹೊಂದಿರುವ ಕಂಪೆನಿಯನ್ನು ತಾವು ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ ವಿನಯ್ ಬನ್ಸಾಲ್, ನಿರ್ಮಾಣ ಕಾಮಗಾರಿಗೆ ಬಳಕೆ ಮಾಡುವ ಸಲಕರಣೆಗಳನ್ನು ಖರೀದಿಸುವ ಸಲುವಾಗಿ ಹಣ ಬಿಡುಗಡೆ ಮಾಡಿಸಿಕೊಳ್ಳಲು ನಕಲಿ ಬಿಲ್‌ಗಳನ್ನು ಸಲ್ಲಿಸಿದ್ದರು. ಅಂತಹ ಯಾವುದೇ ಕಂಪೆನಿ ಇಲ್ಲದಿರುವುದು ತನಿಖೆ ವೇಳೆ ತಿಳಿದುಬಂದಿತ್ತು. ಬಿಲ್‌ಗಳು ಸಹ ನಕಲಿ ಎಂಬುದು ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.

kejriwal kin arrested in pwd scam

ಸುರೇಂದರ್ ಬನ್ಸಾಲ್ ಅವರು ನಡೆಸುತ್ತಿರುವ ಕಂಪೆನಿ ಸೇರಿದಂತೆ ಮೂರು ಎಫ್‌ಐಆರ್‌ಗಳನ್ನು ಎಸಿಬಿ ಕಲೆದ ವರ್ಷದ ಮೇ 9ರಂದು ದಾಖಲಿಸಿತ್ತು.

Sorry ನಂಬರ್ 3 : ಅರುಣ್ ಜೇಟ್ಲಿಯನ್ನು ಕ್ಷಮೆ ಕೇಳಿದ ಕೇಜ್ರಿವಾಲ್ Sorry ನಂಬರ್ 3 : ಅರುಣ್ ಜೇಟ್ಲಿಯನ್ನು ಕ್ಷಮೆ ಕೇಳಿದ ಕೇಜ್ರಿವಾಲ್

ರಸ್ತೆ ಭ್ರಷ್ಟಾಚಾರ ವಿರೋಧಿ ಸಂಘಟನೆ (ಆರ್‌ಎಸಿಒ) ಸಂಸ್ಥಾಪಕ ರಾಹುಲ್ ಶರ್ಮಾ ಅವರು, ಕೇಜ್ರಿವಾಲ್ ಮತ್ತು ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಬನ್ಸಾಲ್ ಅವರಿಗೆ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಿಲ್ಲ.

ದೆಹಲಿಯ ಬಾಕೋಲಿ ಮತ್ತು ಇಂದಿರಾ ನೆಹರು ಕ್ಯಾಂಪ್‌ ಪ್ರದೇಶದಲ್ಲಿರುವ ಎರಡು ನಿವೇಶನಗಳಲ್ಲಿ ಕಟ್ಟಡ ಕಾಮಗಾರಿಗಾಗಿ 6 ಕೋಟಿ ಮೌಲ್ಯದ ನಕಲಿ ಬಿಲ್‌ಗಳನ್ನು ಸೃಷ್ಟಿಸಿದ್ದರು ಎನ್ನಲಾಗಿದೆ.

English summary
Delhi chief minister Arvind Kejriwal's kin Vinay Bansal was arrested by Anti Corruption Bureau in connection with the pwd scam on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X