ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಜೆಪಿ ನಡ್ಡಾ ಅವಿರೋಧ ಆಯ್ಕೆ

Recommended Video

      ಅವಿರೋಧವಾಗಿ ಆಯ್ಕೆಯಾದ ಜೆಪಿ ನಡ್ಡಾ | Jagat Prakash Nadda Nadda | BJP | INDIA | Oneindia Kannada

      ನವದೆಹಲಿ, ಜನವರಿ 20: ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದ ಜೆಪಿ ನಡ್ಡಾ ನೂತನ ರಾಷ್ಟ್ರಾಧ್ಯಕ್ಷರಾಗಿ ನೇಮಕಗೊಂಡಿದ್ದು ಅಮಿತ್ ಶಾ ಸ್ಥಾನವನ್ನು ಅಲಂಕರಿಸಿದ್ದಾರೆ.

      ಜೆಪಿ ನಡ್ಡಾ ಅವರು ಮಾಡಿರುವ ಕೆಲಸಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಈ ಸ್ಥಾನ ನೀಡಿದ್ದಾರೆ.

      ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರಥಮ ಆಯ್ಕೆಯಾಗಿರುವ ನಡ್ಡಾ ಮುಂದಿನ ಮೂರು ವರ್ಷದ ವರೆಗೆ ಪಕ್ಷದ ಉನ್ನತ ಜವಾಬ್ದಾರಿಯನ್ನು ಹೊತ್ತಿದ್ದಾರೆ.

      JP Nadda Takes Over As National President Of Bharatiya Janata Party

      ಆದರೆ ಮೂಲಗಳ ಪ್ರಕಾರ ಹಾಲಿ ಅಧ್ಯಕ್ಷ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ,ಬಿಜೆಪಿ ಸಂಸದೀಯ ಮಂಡಳಿ ಎಲ್ಲಾ ರಾಜ್ಯ ಘಟಕದ ಅಧ್ಯಕ್ಷರು ನಡ್ಡಾ ಹೆಸರನ್ನು ಸೂಚಿಸಿದ್ದಾರೆ.

      ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾಗಿರುವ ಎಬಿವಿಪಿಯಿಂದ ಸಾರ್ವಜನಿಕ ಬದುಕುಆರಂಭಿಸಿರುವ ಜೆಪಿ ನಡ್ಡಾ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಘಟನೆಯಲ್ಲಿ ಮೊದಲಿನಿಂದಲೂ ತೊಡಗಿಕೊಂಡಿದ್ದವರು. ನರೇಂದ್ರ ಮೋದಿಯವರ ಮೊದಲ ಅವಧಿಯ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ನಡ್ಡಾ ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರೂ ಆಗಿದ್ದರು.

      ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪ್ರಭಾರಿಯಾಗಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೋದಿ, ಶಾ ತಂಡದ 'ಗೋ ಮ್ಯಾನ್' ಎಂದೇ ಖ್ಯಾತರಾಗಿರುವ ಮೃದು ಸ್ವಭಾವಿ ನಡ್ಡಾ ಸಂಘಟನೆ ಹಾಗೂ ಚುನಾವಣಾ ರಣತಂತ್ರದಲ್ಲಿ ಚತುರರೂ ಎನಿಸಿಕೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+