ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಕಾಲದಲ್ಲಿ ಜೆಎನ್‌ಯು ಸೆಕ್ಯೂರಿಟಿ ಈಗ ಅದೇ ಕಾಲೇಜಿನ ವಿದ್ಯಾರ್ಥಿ

|
Google Oneindia Kannada News

ನವದೆಹಲಿ, ಜುಲೈ 16: ವಿದ್ಯೆಗೆ ಜಾತಿ, ಧರ್ಮ, ಬಡವ, ಶ್ರೀಮಂತನೆಂಬ ಬೇಧವಿಲ್ಲ ಎಂಬುದಕ್ಕೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯೇ ಸಾಕ್ಷಿ.

ಹೌದು ಜೆಎನ್‌ಯು ವಿಶ್ವವಿದ್ಯಾಲಯಕ್ಕೆ 2014ರಲ್ಲಿ ಭದ್ರತಾ ಸಿಬ್ಬಂದಿಯಾಗಿ ಸೇರಿಕೊಂಡ ರಾಜ್‌ಮಲ್ ಮೀನಾ ಅವರು ಈಗ ಜೆಎನ್‌ಯು ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿದ್ದಾರೆ.

ಮೂಲ ಸೌಕರ್ಯಗಳ ಕೊರತೆಯ ನಡುವೆಯೂ 624 ಅಂಕ ಪಡೆದು ಸಾಧನೆಗೈದ ಕೃಪಾ ಮೂಲ ಸೌಕರ್ಯಗಳ ಕೊರತೆಯ ನಡುವೆಯೂ 624 ಅಂಕ ಪಡೆದು ಸಾಧನೆಗೈದ ಕೃಪಾ

ಅವರು ಸೆಕ್ಯುರಿಟಿಯಾಗಿ ಅಲ್ಲಿ ಕೆಲಸಕ್ಕೆ ಸೇರುವಾಗ ಮುಂದೊಂದು ದಿನ ತಾನು ಅದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಬಹುದು ಎಂದು ಕನಸಿನಲ್ಲೂ ಅವರು ಎಣಿಸಿರಲಿಲ್ಲ.

JNU guard passed entrance exam

ಆದರೆ ಕಳೆದ ವರ್ಷ ರಾಜಸ್ಥಾನದದಿಂದ ಕರೌಲಿ ಮೂಲದ ಈತ ಜೆಎನ್‌ಯುನಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಬಿಎ ರಷ್ಯನ್ ಪದವಿಗೆ ಪ್ರವೇಶ ಪಡೆದಿದ್ದಾನೆ. ಇಲ್ಲಿನ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಈಗ ಎಲ್ಲರೂ ನನ್ನನ್ನು ಅಭಿನಂದಿಸುತ್ತಿದ್ದಾರೆ. ರಾತ್ರಿ ಬೆಳಗಾಗುವುದರೊಳಗಾಗಿ ಖ್ಯಾತಿಪಡೆದಿದ್ದೇನೆಂದು ಅನಿಸುತ್ತಿದೆ ಎಂದು ಮೀನಾ ಖುಷಿಯಿಂದ ಹೇಳಿಕೊಂಡಿದ್ದಾರೆ.

ಮೂರು ಪುತ್ರಿಯರ ತಂದೆಯೂ ಆಗಿರುವ ರಾಜ್‌ಮಲ್ ಮರ್ನಿಕಾ ಎಂಬಲ್ಲಿ ಒಂದು ಕೊಠಡಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಅವರ ಕಲಿಯುವ ಉತ್ಸಾಹ ಇನ್ನೂ ಬತ್ತಿಲ್ಲ. ವಿದೇಶಿ ಭಾಷೆ ಕಲಿತರೆ ವಿದೇಶಗಳಿಗೆ ಹೋಗಬಹುದೆನ್ನುವ ಯೋಚನೆಯೇ ರಷ್ಯ ಭಾಷೆಯನ್ನು ಕಲಿಯಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.

ದಿನಗೂಲಿ ಕಾರ್ಮಿಕರೊಬ್ಬರ ಪುತ್ರನಾಗಿರುವ ಮೀನಾ ತನ್ನ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರೂ ಹತ್ತಿರದ ಕಾಲೇಜು ಗ್ರಾಮದಿಂದ 28 ರಿಂದ 30 ಕಿ.ಮೀ ದೂರವಿದ್ದುದರಿಂದ ಹಾಗೂ ತಂದೆಗೆ ಸಹಾಯ ಮಾಡಬೇಕಿದ್ದದರಿಂದ ಆತ ಶಿಕ್ಷಣ ಕೋರ್ಸ್‌ಗೆ ದಾಖಲಾತಿ ಪಡೆದು ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಹಿಂದಿ ವಿಷಯಗಳನ್ನಾರಿಸಿ ಪದವಿ ಪಡೆದಿದ್ದರು.

English summary
JNU guard passed entrance exam, 34-year-old first-generation learner from Rajasthan’s Karauli passed the JNU entrance examination for admission into BA Russian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X