ಜಾಟ್ ಹಿಂಸಾಚಾರ ಬಿಸಿ, ಭಾರತದ ರಾಜಧಾನಿಯಲ್ಲಿ ನೀರಿಗೆ ಬರ!

Posted By:
Subscribe to Oneindia Kannada

ನವದೆಹಲಿ, ಫೆ. 21: ಹಿಂದುಳಿತ ವರ್ಗ ಮೀಸಲಾಗಿ ಆಗ್ರಹಿಸಿ ಜಾಟ್ ಸಮುದಾಯದವರು ನಡೆಸಿರುವ ಹಿಂಸಾಚಾರ, ಪ್ರತಿಭಟನೆಯ ಬಿಸಿ ದೇಶದ ರಾಜಧಾನಿ ನವದೆಹಲಿಗೆ ಬಲವಾಗಿ ತಟ್ಟಿದೆ. ಹರಿಯಾಣದ ಬಹುತೇಕ ಕಡೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದರೆ, ದೆಹಲಿಯಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿದ್ದು, ಸೋಮವಾರ ರಜಾ ದಿನ ಅನಿವಾರ್ಯವಾಗಿದೆ.

ಹರಿಯಾಣದಲ್ಲಿ ಬಸ್, ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಐದು ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಪ್ರತಿಭಟನಾಕಾರರು ದೆಹಲಿಗೆ ನೀರು ಪೂರೈಕೆ ಮಾಡುತ್ತಿದ್ದ ಮುನಕ್ ಕಾಲುವೆಯನ್ನು ಬಂದ್ ಮಾಡಿದ್ದಾರೆ. ಹೀಗಾಗಿ ಶನಿವಾರದಿಂದಲೇ ನೀರಿನ ಪೂರೈಕೆ ಇಲ್ಲದೆ ದೆಹಲಿ ಪರಿತಪಿಸುತ್ತಿದೆ. [ಮೋದಿ ಆಪ್ತ ಹರ್ಯಾಣದ ನೂತನ ಸಿಎಂ ಮನೋಹರ್ ಲಾಲ್]

ಸುಮಾರು 719 ಕ್ಯೂಸೆಕ್ಸ್ ನೀರು ದೆಹಲಿಗೆ ಪೂರೈಕೆ ಆಗಬೇಕಿತ್ತು. ಆದರೆ, ದೆಹಲಿಯ ಏಳು ಜಲಮಂಡಲಿ ಪೂರೈಕೆ ಘಟಕಗಳಲ್ಲಿ ನೀರಿನ ಶೇಖರಣೆ ಇಲ್ಲದ್ದಂತಾಗಿದೆ. ಪ್ರತಿದಿನ 820 ಮಿಲಿಯನ್ ಗ್ಯಾಲನ್ಸ್ ನೀರು ಸಿದ್ಧಪಡಿಸುತ್ತಿದ್ದ ಜಲಮಂಡಳಿಯ ಘಟಕಗಳು ಶನಿವಾರ 240 ಎಂಜಿಡಿ ಪೂರೈಸುವಲ್ಲಿ ಸುಸ್ತಾಗಿವೆ. [ಹರ್ಯಾಣ ಆಳ್ವಿಕೆ ಮಾಡಿದ ಪಕ್ಷಗಳು]

ಶಾಲೆ ಕಾಲೇಜಿಗೆ ರಜೆ ಘೋಷಿಸಿದ ಕೇಜ್ರಿವಾಲ್

ಶಾಲೆ ಕಾಲೇಜಿಗೆ ರಜೆ ಘೋಷಿಸಿದ ಕೇಜ್ರಿವಾಲ್

ಶಾಲೆ ಕಾಲೇಜಿಗೆ ರಜೆ: ನೀರಿನ ಪೂರೈಕೆ ವ್ಯತ್ಯಯಗೊಂಡಿರುವುದರಿಂದ ಸೋಮವಾರ (ಫೆಬ್ರವರಿ 22) ರಂದು ದೆಹಲಿಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳಿಗೆ ವ್ಯವಸ್ಥೆ ಒದಗಿಸಲು ಹರಸಾಹಸ ಪಡಬೇಕಿದೆ.

ಮುನಾಕ್ ಕಾಲುವೆ ವಿವಾದ ವಿಚಾರಣೆ ಮುಂದಕ್ಕೆ

ಮುನಾಕ್ ಕಾಲುವೆ ವಿವಾದ ವಿಚಾರಣೆ ಮುಂದಕ್ಕೆ

ಹರ್ಯಾಣದ ಮುನಾಕ್ ಕಾಲುವೆ ಮೂಲಕ ನೀರು ಪೂರೈಕೆ ಸಮರ್ಪಕವಾಗಿ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ವಿಚಾರಣೆಯನ್ನು ದೆಹಲಿ ಕೋರ್ಟಿಗೆ ವರ್ಗಾಯಿಸಿರುವ ಸುಪ್ರೀಂಕೋರ್ಟ್ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಳ್ಳುವಂತೆ ಸೂಚಿಸಿದೆ.

800ಕ್ಕೂ ಅಧಿಕ ರೈಲುಗಳ ಸಂಚಾರ ಸ್ಥಗಿತ

800ಕ್ಕೂ ಅಧಿಕ ರೈಲುಗಳ ಸಂಚಾರ ಸ್ಥಗಿತ

ಜಮ್ಮುವಿನಿಂದ ಹರಿಯಾಣದ ಮೂಲಕ ದೇಶದ ಇತರೆಡೆಗಳಿಗೆ ಸಾಗುವ 15-20 ರೈಲುಗಳ ಸಂಚಾರ ರದ್ದುಗೊಂಡಿದೆ. ಸುಮಾರು 800 ರೈಲುಗಳ ಸಂಚಾರ ಅಸ್ತವ್ಯಸ್ತವಾಗಿದೆ. 213 ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸದಿರುವುದು ದೆಹಲಿ ಸರ್ಕಾರಕ್ಕೆ ತಲೆನೋವಾಗಿದೆ.

ಮಾತುಕತೆಗೆ ಮುಂದಾಗದ ಜಾಟ್ ಸಮುದಾಯ

ಜಾಟ್ ಸಮುದಾಯದವರ ಪ್ರತಿಭಟನೆಗೆ ನಿರ್ದಿಷ್ಟ ನಾಯಕನೇ ಇಲ್ಲ, ಸಮಸ್ಯೆ ಬಗೆಹರಿಸಲು ಮಾತುಕತೆ ನಡೆಸಲು ಯಾರು ಮುಂದೆ ಬಂದಿಲ್ಲ ಎಂದು ಹರಿಯಾಣ ಸಿಎಂ ಖಟ್ಟರ್ ಹೇಳಿದ್ದಾರೆ. ಒಬಿಸಿ ವರ್ಗಕ್ಕೆ ಜಾಟ್ ಸಮುದಾಯವನ್ನು ಸೇರಿಸುವ ತನಕ ಪ್ರತಿಭಟನೆ ನಿಲ್ಲಿಸದಿರುವ ಜಾಟ್ ಪಂಗಡ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Jat agitation in Haryana: Taps ran dry in large parts of the Capital on Saturday and Sunday after protesters in Haryana forced shut the gates at the inlet of the Munak Canal — one of the main sources of raw water to Delhi. Delhi govt forced to shut down schools on Monday due to water crisis.
Please Wait while comments are loading...