ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ಐದನೇ ಹಂತದ ಯೋಜನೆಗೆ ಜಪಾನ್ ಜತೆ ಒಪ್ಪಂದ

|
Google Oneindia Kannada News

ನವದೆಹಲಿ, ಜನವರಿ 24 : ಪ್ರತಿಷ್ಠಿತ ಕಾವೇರಿ ಐದನೇ ಹಂತದ ಯೋಜನೆಯ ಹಣಕಾಸು ಹೂಡಿಕೆಗೆ ಸಂಬಂಧಿಸಿದಂತೆ ಸಾಲದ ಒಡಂಬಡಿಕೆ ಅನುಜ್ಞಾ ತಳಿವಳಿಕೆ ಪತ್ರಕ್ಕೆ ನವದೆಹಲಿಯಲ್ಲಿ ಬುಧವಾರ ಸಹಿ ಹಾಕಲಾಯಿತು.

ಜಪಾನ್ ರಾಯಭಾರಿ ಕೆಂಜಿ ಹಿರಾಮಟ್ಸು, ಜಪಾನ್ ಇಂಟರ್ ನ್ಯಾಷನಲ್ ಕೋ-ಆಪರೇಟಿವ್ ಏಜೆನ್ಸಿಯ ಮುಖ್ಯ ಪ್ರತಿನಿಧಿ ತಕೇಮಾ ಸಕಮೋಟೋ ಹಾಗೂ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್. ಸೆಲ್ವ ಕುಮಾರ್ ಅವರು ಬುಧವಾರ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

ಕುಡಿಯುವ ನೀರಿನ ಕೊರತೆ ಇದೆಯೇ? ಕರೆ ಮಾಡಿಕುಡಿಯುವ ನೀರಿನ ಕೊರತೆ ಇದೆಯೇ? ಕರೆ ಮಾಡಿ

ಕಾವೇರಿ ನದಿಯಿಂದ ಶೇ.7.5 ರಷ್ಟು ಮೊತ್ತವನ್ನು ಪ್ರತಿ ದಿನ 775 ದಶಲಕ್ಷ ಲೀಟರ್ ಕುಡಿಯುವ ನೀಡು ಪೂರೈಕೆ ಮಾಡುವ 5,500ಕೋಟಿ ರೂ ವೆಚ್ಚದ ಮಹತ್ವಾಕಾಂಕ್ಷಿ ಈ ಯೋಜನೆಗೆ ಜಪಾನ್ ಸರ್ಕಾರ ಶೇ.85 ರಷ್ಟು ಸಾಲ ಒದಗಿಸಲಿದೆ. ಉಳಿದ ಶೇ.15 ರಷ್ಟು ಮೊತ್ತದಲ್ಲಿ ಶೇ.7.5 ರಷ್ಟು ಮೊತ್ತವನ್ನು ಕರ್ನಾಟಕ ಸರ್ಕಾರ ಹಾಗೂ ಶೇ.7.5ರಷ್ಟು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಭರಿಸಲಿದೆ.

Japan finds for fifth phase of Cauvery

ಕಾವೇರಿ ಐದನೇ ಹಂತದ ಯೋಜನೆಯು 4,500 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದಕ್ಕೆ ಪ್ರತಿ ದಿನ 775 ದಶಲಕ್ಷ ಲೀಟರ್ ಕುಡಿಯುವ ನೀಡು ಸರಬರಾಜು ಮಾಡಲಿದೆ. ಜತೆಗೆ ಉಳಿದ ಮೊತ್ತದಲ್ಲಿ 225 ಚದರ ಕಿ.ಮೀ ವ್ಯಾಪ್ತಿಯಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪನೆ ಹಾಗೂ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ ೧೧೦ ಗ್ರಾಮಗಳಿಗೆ ಒಳಚರಂಡಿ ಸೌಲಭ್ಯ ಕಲ್ಪಿಸಲಿದೆ.

ಪ್ರಸಕ್ತ ವರ್ಷದಲ್ಲಿಯೇ ಈ ಯೋಜನೆಯ ವಿನ್ಯಾಸ ಮತ್ತು ನೀಲ ನಕ್ಷೆಗಳು ಒಳಗೊಂಡಂತೆ ಎಲ್ಲಾ ಪೂರ್ವ ಸಿದ್ಧತಾ ಕಾರ್ಯಗಳು ಪ್ರಾರಂಭವಾಗಲಿದೆ. ಆದರೆ, 2019 ರಿಂದ ಯೋಜನೆಯ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. 2022 ರ ವೇಳೆಗೆ ಯೋಜನೆ ಅಸ್ತಿತ್ವಕ್ಕೆ ಬರಲಿದೆ. ಒಂದೆಡೆ ಬೆಂಗಳೂರು ಮಹಾ ನಗರಕ್ಕೆ ಅಗತ್ಯವಿರುವ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡುವ ಜೊತೆಗೆ ಮತ್ತೊಂದೆಡೆ ಪರಿಸರಕ್ಕೆ ಸವಾಲೊಡ್ಡುವ ವಿಷಯಗಳನ್ನು ಶಮನ ಮಾಡುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್, ಪ್ರಧಾನ ಮುಖ್ಯ ಅಭಿಯಂತ ಕೆಂಪ ರಾಮಯ್ಯ, ಮುಖ್ಯ ಅಭಿಯಂತ ಡಾ ಪಿ ಎನ್ ರವೀಂದ್ರ ಅವರೂ ಈ ಸಮಾರಂಭದಲ್ಲಿ ಅನುಜ್ಞಾ ತಿಳುವಳಿಕಾ ಪತ್ರಕ್ಕೆ ಸಹಿ ಹಾಕುವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

English summary
Japan International cooperation Agency(JICA) has been signed in Delhi on Wedensday for loan assistance with Government of India for the project of Fifth phase of Cauvery drinking water supply to Bengaluru and other surrounding towns and villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X