ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ 'ಬುಲೆಟ್‌ ಟ್ರೈನ್' 2026ರಿಂದ ಸಂಚರಿಸಲಿದೆ: ಅಶ್ವಿನಿ ವೈಷ್ಣವ್

|
Google Oneindia Kannada News

ನವದೆಹಲಿ, ಅಕ್ಟೋಬರ್ 08: ಭಾರತದಲ್ಲಿ ಬುಲೆಟ್ ಟ್ರೈನ್ ತನ್ನ ಮೊದಲ ಸಂಚಾರ ಆರಂಭಿಸುವುದರ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶುಕ್ರವಾರ ಮಹತ್ವ ಘೋಷಣೆಯೊಂದನ್ನು ಮಾಡಿದ್ದಾರೆ.

ಭಾರತ ದೇಶದ ಮೊದಲ ಅತ್ಯಂತ ವೇಗದ 'ಬುಲೆಟ್ ರೈಲು' 2026 ರಲ್ಲಿ ಓಡಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಣೆ ಮಾಡಿದ್ದಾರೆ. ಈ ಘೋಷಣೆ ಜೊತೆಗೆ ಬುಲೆಟ್ ರೈಲು ಯೋಜನೆಯಲ್ಲಿ ಈವರೆಗೆ ಪೂರ್ಣಗೊಂಡಿರುವ ಕಾಮಗಾರಿಯ ಅಂದಾಜು ವೆಚ್ಚವನ್ನು ಸಾರ್ವಜನಿಕವಾಗಿ ಅವರು ಹಂಚಿಕೊಂಡಿದ್ದಾರೆ.

Indias first Bullet Train will be run from 2026, Says Ashwani vaishnaw

Breaking: 2 ದಿನದಲ್ಲಿ 2ನೇ ಬಾರಿ ವಂದೇ ಭಾರತ್ ರೈಲು ಅಪಘಾತBreaking: 2 ದಿನದಲ್ಲಿ 2ನೇ ಬಾರಿ ವಂದೇ ಭಾರತ್ ರೈಲು ಅಪಘಾತ

ಅಹಮದಾಬಾದ್ ಪ್ರವಾಸದಲ್ಲಿರುವ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಘೋಷಣೆ ಮಾಡಿದ್ದಾರೆ. 2026 ರಲ್ಲಿ ದೇಶದ ಮೊದಲ ಬುಲೆಟ್ ರೈಲು ಓಡಲಿದೆ. ಈ ಬುಲೆಟ್ ರೈಲು ಯೋಜನೆಗಾಗಿ ಪ್ರಸ್ತುತದಲ್ಲಿ 92 ಪಿಲ್ಲರ್‌ಗಳಲ್ಲಿ ಮಾರ್ಗ ಸಿದ್ಧಪಡಿಸಲಾಗಿದೆ. ಅಲ್ಲದೇ ಅದಕ್ಕಾಗಿ ವಿಶ್ವದರ್ಜೆಯ ರೈಲು ನಿಲ್ದಾಣ ನಿರ್ಮಿಸಲಿದ್ದೇವೆ. ಇದರೊಂದಿಗೆ 199 ನಿಲ್ದಾಣಗಳನ್ನು ವಿಶ್ವ ದರ್ಜೆಗೆ ತರಲು ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದ್ದೇವೆ ಎಂದು ಅವರು ಹೇಳಿದರು.

ವಿಶ್ವ ದರ್ಜೆಯ ರೈಲು ನಿಲ್ದಾಣ ನಿರ್ಮಾಣ
ಹೊಸ ಮಾಸ್ಟರ್‌ಪ್ಲಾನ್ ಅಡಿಯಲ್ಲಿ ಅಹಮದಾಬಾದ್ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಏರಿಸಲಾಗುವುದು. ಬುಲೆಟ್ ರೈಲಿನ ಈ ಘೋಷಣೆಯ ಜೊತೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಗುರುವಾರ ಟ್ವೀಟ್ ಮಾಡುವ ಮೂಲಕ ಕೆಲವು ಮಾಹಿತಿ ಹಂಚಿಕೊಂಡಿದ್ದರು. ರೈಲ್ವೆ ಸಚಿವಾಲಯವು ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಜನರಿಗೆ ಉಚಿತ, ಸುರಕ್ಷಿತ ಮತ್ತು ಹೆಚ್ಚಿನ ವೇಗದ ವೈಫೈ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಈವರೆಗೆ 6,105 ರೈಲು ನಿಲ್ದಾಣಗಳಲ್ಲಿ ಜನರಿಗೆ ವೈಫೈ ಸೌಲಭ್ಯ ಕಲ್ಪಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Indias first Bullet Train will be run from 2026, Says Ashwani vaishnaw

508ಕಿ.ಮೀ. ವ್ಯಾಪ್ತಿ ರೈಲು ಯೋಜನೆ
ದೇಶದಲ್ಲಿ ಮೊದಲ ಹೈಸ್ಪೀಡ್ ಬುಲೆಟ್ ರೈಲು ಮುಂಬೈ- ಅಹಮದಾಬಾದ್ ನಡುವೆ ಸಂಚರಿಸಲಿದೆ. ಈ ರೈಲು ಯೋಜನೆಯು 508.17 ಕಿಲೋ ಮೀಟರ್ ದೂರು ಒಳಗೊಂಡಿದೆ. ಇದರ ಒಟ್ಟು ಅಂದಾಜು ವೆಚ್ಚ 1.08 ಟ್ರಿಲಿಯನ್ ರೂ. ಎಂದು ಹೇಳಲಾಗಿದೆ. ಅಂದರೆ ಪ್ರತಿ ಕಿಲೋ ಮೀಟರ್ ಮಾರ್ಗ ನಿರ್ಮಾಣಕ್ಕಾಗಿ 213 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಈ ಮೊದಲು ಯೋಜನೆಯು ಡಿಸೆಂಬರ್ 2023 ಒಳಗೆ ಕಾರ್ಯಾರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ವಿವಿಧ ಕಾರಣಗಳಿಂದಾಗಿ ಬುಲೆಟ್‌ ರೈಲು ಸಂಚಾರದ ಅವಧಿ ವಿಸ್ತರಣೆಯಾಗಿದೆ. ಬುಲೆ ಟ್ ರೈಲು ಯೋಜನೆ ಮೊದಲ ಹಂತವು 2026ರಲ್ಲಿ ಪೂರ್ಣಗೊಳ್ಳಲಿದ್ದು, ಅಂದು ದೇಶದ ಮೊದಲಬುಲೆಟ್ ಟೈಲು ಸಂಚಾರ ಆರಂಭಿಸಲಿದೆ. ಯೋಜನೆಗೆ ಅಗತ್ಯವಾಗಿದ್ದ 1,396 ಹೆಕ್ಟೇರ್ ಪೈಕಿ ಶೇ. 90ರಿಂದ 95ರಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

English summary
India's first Bullet Train will be run from 2026, Says Ashwini vaishnaw.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X