ಸದ್ಯದಲ್ಲೇ 3 ಹೈಸ್ಪೀಡ್ ರೈಲ್ವೆ ಹಳಿ ನಿರ್ಮಾಣ ಆರಂಭ
ನವದೆಹಲಿ, ಸೆಪ್ಟೆಂಬರ್, 25 : ಭಾರತೀಯ ರೈಲ್ವೆ ಇಲಾಖೆಯು 'ವಜ್ರ ಚುತಷ್ಪಥ ಯೋಜನೆ' ಅಡಿ ದೇಶದಲ್ಲಿ ಮೂರು ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಮೂರು ರಾಷ್ಟ್ರಗಳ ಕಂಪೆನಿಯನ್ನು ಆಯ್ದುಕೊಳ್ಳಲಾಗಿದ್ದು, ಈ ಕಾರಿಡಾರ್ ಬರೋಬ್ಬರಿ 2ಲಕ್ಷ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಹೈಸ್ಪೀಡ್ ರೈಲ್ವೆ ಹಳಿ ನಿರ್ಮಾಣ ಯೋಜನೆಗೆ ಚೀನಾ, ಫ್ರಾನ್ಸ್, ಸ್ಪೇನ್ ರಾಷ್ಟ್ರಗಳ ಕಂಪನಿಗಳು ಸಮ್ಮತಿ ಸೂಚಿಸಿವೆ. ರೈಲ್ವೆಹಳಿ ದೆಹಲಿ-ಮುಂಬೈ, ಮುಂಬೈ-ಚೆನ್ನೈ ಹಾಗೂ ದೆಹಲಿ-ಕೊಲ್ಕತ್ತಾ ನಡುವೆ ನಿರ್ಮಿತವಾಗಲಿದೆ. ಇದರ ಕುರಿತಾದ ನೀಲನಕ್ಷೆ ತಯಾರಿಕೆಗಾಗಿ 30ಕೋಟಿ ರೂ ತಗುಲಬಹುದೆಂದು ಅಂದಾಜು ಮಾಡಲಾಗಿದೆ.[ಬೆಂಗಳೂರಲ್ಲಿ ರೈಲ್ವೆ ಮುಂಗಡ ಟಿಕೆಟ್ ಬುಕಿಂಗ್ ಗಾಗಿ ಹೊಸ ವ್ಯವಸ್ಥೆ]

ದೆಹಲಿ-ಮುಂಬೈ ಕಾರಿಡಾರ್ ಅಧ್ಯಯನ ನಡೆಸಲು ಚೀನಾದ ಡಿಸೈನ್ ಇನ್ಸ್ ಟಿಟ್ಯೂಟ್ , ಫ್ರಾನ್ಸ್ ನ ಸಿಸ್ಟ್ರಾ ಕಂಪೆನಿ ಮುಂಬೈ-ಚೆನ್ನೈ ಕಾರಿಡಾರ್ ಅಧ್ಯಯನ ಕೈಗೊಳ್ಳಲಿದೆ. ಸ್ಪೇನ್ ನ ಇನ್ ಇಕೋ ಕಂಪೆನಿ ದೆಹಲಿ-ಕೊಲ್ಕತ್ತಾ ಕಾರಿಡಾರ್ ಬಗ್ಗೆ ಅಧ್ಯಯನ ಕೈಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹೈಸ್ಪೀಡ್ ರೈಲುಗಳು ಗಂಟೆಗೆ 300ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಪ್ರಸ್ತುತ ಭಾರತದಲ್ಲಿ ಮುಂಬೈ-ದೆಹಲಿ ನಡುವೆ ಸಂಚರಿಸುತ್ತಿರುವ ರಾಜಧಾನಿ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ಮುಂಬೈಗೆ 16ಗಂಟೆಯಲ್ಲಿ ತಲುಪುತ್ತದೆ.
ಆದರೆ ಈಗ ಚತುಷ್ಪಥ ಯೋಜನೆ ಅಡಿ ರೂಪುಗೊಳ್ಳುತ್ತಿರುವ ಹೈಸ್ಪೀಡ್ ರೈಲು ಯೋಜನೆಯು ಯಶಸ್ವಿಯಾದರೆ ದೆಹಲಿಯಿಂದ ಮುಂಬೈಗೆ ಕೇವಲ 8 ಗಂಟೆಯಲ್ಲಿ ತಲುಪಬಹುದಾಗಿದೆ. ಈಗಾಗಲೇ ಚೀನಾ ಈ ಯೋಜನೆಯ ಅಧ್ಯಯನವನ್ನು ಕೈಗೆತ್ತಿಕೊಂಡಿದ್ದು, ಅತಿಶೀಘ್ರದಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದೆ.












Click it and Unblock the Notifications