ಮಲ್ಯಗೆ ಸಹಾಯ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಸಿಂಗ್ ಹೇಳಿದ್ದೇನು?

Posted By:
Subscribe to Oneindia Kannada

ನವದೆಹಲಿ, ಜನವರಿ 30:ನಾನು ತೆಗೆದುಕೊಂಡ ಕ್ರಮ ಮನಃಪೂರ್ವಕವಾಗಿ ತೆಗೆದುಕೊಂಡದ್ದು. ಕಾನೂನಿಗೆ ವಿರುದ್ಧವಾಗಿ ಏನನ್ನೂ ಮಾಡಿಲ್ಲ ಎಂದು ಮನ್ ಮೋಹನ್ ಸಿಂಗ್ ಹೇಳಿದ್ದಾರೆ. ಕಾನೂನು ಮೀರಿ ವಿಜಯ್ ಮಲ್ಯ ಅವರಿಗೆ ಸಿಂಗ್ ಸಹಾಯ ಮಾಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಅದೊಂದು ಪತ್ರದ ತುಣುಕು. ಸರಕಾರದಲ್ಲಿ ನನ್ನಂತೆ ಜವಾಬ್ದಾರಿ ಹೊತ್ತವರು ಮಾಡುತ್ತಿದ್ದದ್ದೇ ಹೀಗೆ ಎಂದು ಸೋಮವಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ರಿಕಾ ಗೋಷ್ಠಿಯಲ್ಲಿ ಸಮರ್ಥನೆ ನೀಡಿದ್ದಾರೆ.

ಭಾರತದ ಆರ್ಥಿಕತೆ ಸ್ಥಿತಿ ಸರಿಯಾದ ರೂಪದಲ್ಲಿಲ್ಲ ಎಂದು ಆರೋಪಿಸಿ, ಬಜೆಟ್ ಗೂ ಮುನ್ನ ವರದಿಯೊಂದನ್ನು ಬಿಡುಗಡೆ ಮಾಡಿ, ಮಾತನಾಡಿದರು.[ಮಲ್ಯಗೆ ಕೋಟ್ಯಂತರ ರು. ಸಾಲ ಕೊಡಿಸಿದ್ದು ಮನಮೋಹನ್ ಸಿಂಗ್ ?]

Indian economy not in good shape: Man Mohan singh

ಅವರ ಜತೆಗಿದ್ದ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಸಂಶೋಧನೆ-ಅಂಕಿ, ಅಂಶಗಳನ್ನು ಕಲೆ ಹಾಕಿ ದೇಶದ ಆರ್ಥಿಕತೆ ಬಗ್ಗೆ ದಾಖಲೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಉದ್ಯೋಗಗಳು ಎಲ್ಲಿ ಸೃಷ್ಟಿಯಾಗಿವೆ? ಹೊಸ ಬಂಡವಾಳ ಹೂಡಿಕೆ ಎಲ್ಲಿಯಾಗಿದೆ? ಕ್ರೆಡಿಟ್ ಗ್ರೋಥ್ ಎಲ್ಲಾಗಿದೆ ಎಂದು ಚಿದಂಬರಂ ಪ್ರಶ್ನಿಸಿದರು. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಬಂಡವಾಳ ಸೃಷ್ಟಿ ಕುಸಿಯುತ್ತಿದೆ. ಕಳೆದ ಹಲವು ದಶಕಗಳಲ್ಲೇ ಕ್ರೆಡಿಟ್ ಗ್ರೋಥ್ ಕನಿಷ್ಠ ಮಟ್ಟದಲ್ಲಿದೆ ಎಂದು ಅವರು ಹೇಳಿದ್ದಾರೆ.[ಕೇಂದ್ರ ಬಜೆಟ್ ನ 7 ಇಂಟರೆಸ್ಟಿಂಗ್ ಸಂಗತಿಗಳು]

Indian economy not in good shape: Man Mohan singh

ನಾಳೆಯೇನೋ ದೇಶದ ಆರ್ಥಿಕತೆ ಅದ್ಭುತವಾಗಿ ಬಿಡುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ ದೇಶದ ಜನರಿಗೆ ಅದನ್ನು ಪ್ರಶ್ನಿಸುವ ಹಕ್ಕಿದೆ. ಎಲ್ಲ ಸರಕಾರಗಳು ಆಶಾವಾದಿಯಾಗಿರುತ್ತವೆ. ಆದರೆ ಅದರ ಬೇರು ಸನ್ನಿವೇಶದ ವಾಸ್ತವಾಂಶಗಳ ಮೇಲೆ ಇರಬೇಕು ಎಂದು ಚಿದಂಬರಂ ಹೇಳಿದ್ದಾರೆ.

ಎನ್ ಡಿಎ ಸರಕಾರ ಆರ್ಥಿಕತೆಯ ಉತ್ಪ್ರೇಕ್ಷೆ ಮಾಡುತ್ತಿದೆ. ಇಂದು ನಾವು ಬಿಡುಗಡೆ ಮಾಡುತ್ತಿರುವ ಸಂಶೋಧನೆ ದಾಖಲೆಗಳು ನಾಳೆ ಸರಕಾರ ಹೇಳುವ ವಿಚಾರಕ್ಕಿಂತ ಸತ್ಯಕ್ಕೆ ಹತ್ತಿರವಾಗಿವೆ. ಜಿಡಿಪಿ ದರ ಅಷ್ಟು-ಇಷ್ತು ಎಂದು ಅದರ ಹಿಂದೆ ಬಿಜೆಪಿ ಅವಿತಿಟ್ಟುಕೊಳ್ಳುತ್ತಿದೆ. ಆದರೆ ಜನರು ಉದ್ಯೋಗಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಚಿದಂಬರಂ ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian economy not in good shape, alleged by former PM Man Mohan Singh and P.Chidambaram ahead of Union budget in a press meet, New Delhi. They releases document.
Please Wait while comments are loading...