ಲಿಂಗ ಸಮಾನತೆ ಸಾಧಿಸಲು ಬೇಕು ಇನ್ನೂ 100 ವರ್ಷ!

Posted By: Manjunatha
Subscribe to Oneindia Kannada

ನವದೆಹಲಿ, ನವೆಂಬರ್ 06 : ಲಿಂಗ ಅಸಮಾನತೆಯಲ್ಲಿ ಭಾರತದ ಕಳಪೆ ಪ್ರದರ್ಶನ ಮುಂದುವರೆದಿದೆ. ಡಬ್ಲು.ಇ.ಎಪ್ (ವಿಶ್ವ ಆರ್ಥಿಕ ವೇದಿಕೆ) ಗುರುವಾರ ನವೆಂಬರ್ 2ರಂದು ಪ್ರಕಟಿಸಿರುವ ವರದಿಯಲ್ಲಿ ಭಾರತ 21 ಸ್ಥಾನಗಳ ಕುಸಿತ ಕಂಡು 108ನೇ ರ್ಯಾಂಕ್ ಪಡೆದುಕೊಂಡಿದೆ.

ನೆರೆಯ ರಾಷ್ಟ್ರಗಳಾದ ಚೀನಾ, ಬಾಂಗ್ಲಾದೇಶಗಳು ಭಾರತಕ್ಕಿಂತ ಮೇಲಿರುವುದು ಆಶ್ಚರ್ಯ ಸೃಷ್ಟಿಸಿದೆ. ಪ್ರತಿ ವರ್ಷ ಕುಸಿತ ಕಾಣುತ್ತಿರುವ ಭಾರತದ ರ್ಯಾಂಕಿಂಗ್ ಲಿಂಗ ಸಮಾನತೆ ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ.

India Slips 21 Slots on WEFGender gap Index

ಭಾರತದಲ್ಲಿ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಆಗಿರುವುದರಿಂದ ಹಾಗೂ ಹಾಗೂ ಅವರಿಗೆ ಕಡಿಮೆ ಸಂಬಳ ನೀಡುತ್ತಿರುವುದರಿಂದ ಲಿಂಗ ಸಮಾನತೆ ಸಾಧ್ಯವಾಗುತ್ತಿಲ್ಲ ಎಂದು ಡಬ್ಲು.ಇ.ಎಫ್ ಹೇಳಿದೆ.

ಮಹಿಳೆಯರು ಇಂದು ಟ್ವಿಟ್ಟರ್ ನಿಂದ ದೂರ ಉಳಿದಿರೋದ್ಯಾಕೆ?!

ಡಬ್ಲು.ಇ.ಎಫ್ ಒಟ್ಟು 144 ದೇಶಗಳಲ್ಲಿ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಚೀನಾ 100ನೇ ರ್ಯಾಂಕ್ ಪಡೆದುಕೊಂಡರೆ, ಬಾಂಗ್ಲಾದೇಶಕ್ಕೆ 47ನೇ ರ್ಯಾಂಕ್ ಪ್ರಾಪ್ತಿಯಾಗಿದೆ.

ಡಬ್ಲು.ಇ.ಎಫ್, ಆರೋಗ್ಯ, ಮಹಿಳೆಯರ ಆರ್ಥಿಕ ಪ್ರಾಬಲ್ಯ, ದೊರಕುತ್ತಿರುವ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ದೊರಕುತ್ತಿರುವ ಅವಕಾಶವನ್ನು ಗಮನದಲ್ಲಿರಿಸಿಕೊಂಡು ಸಮೀಕ್ಷೆ ನಡೆಸಿತ್ತು. ನಾಲ್ಕೂ ವಿಭಾಗದಲ್ಲಿ ಭಾರತದ ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆಂದು ಡಬ್ಲು.ಪಿ.ಎಫ್ ಅಭಿಪ್ರಾಯ ಪಟ್ಟಿದೆ.

ಭಾರತದಲ್ಲಿ ಮಹಿಳೆಯರಿಗೆ ವೇತನ ತಾರತಮ್ಯ ಹೆಚ್ಚಿದೆ, ಭಾರತದಲ್ಲಿ ಕೆಲಸ ಮಾಡುತ್ತಿರುವ 68 ಪ್ರತಿಶತ ಮಹಿಳೆಯರಿಗೆ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತಿದೆ. ಕಡಿಮೆ ಸಂಬಳ ಪಡೆಯುತ್ತಿರುವ ಪುರುಷರ ಸರಾಸರಿ 12 ಪ್ರತಿಷತ ಇದೆ. ಸಂಬಳದ ತಾರತಮ್ಯ ಅಂತ್ಯವಾಗಲು ಭಾರತದ ಮಹಿಳೆಯರು ಇನ್ನೂ 217 ವರ್ಷ ಕಾಯಬೇಕಿದೆ ಎಂದು ಡಬ್ಲು.ಇ.ಎಫ್ ಅಂದಾಜಿಸಿದೆ.

ಭಾರತದ್ದು ಮಾತ್ರವಲ್ಲ ಒಟ್ಟಾರೆ ಜಾಗತಿಕ ಮಟ್ಟದಲ್ಲಿಯೂ ಲಿಂಗ ತಾರತಮ್ಯ ಹಚ್ಚಿದೆ ಎಂಬುದನ್ನು ಸಮೀಕ್ಷೆ ಹೇಳುತ್ತಿದೆ. 2006 ರಿಂದ ಪ್ರಸ್ತುತ ವರ್ಷದ ವರೆಗೂ ಲಿಂಗ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ನಿಧಾನವಾದ ಪ್ರಗತಿ ನಡೆಯುತ್ತಿತ್ತು ಆದರೆ 2017ನೇ ವರ್ಷ ಅದು ಸ್ಥಿರವಾಗಿಬಿಟ್ಟಿದೆ' ಎಂದು ಡಬ್ಲು.ಇ.ಎಪ್ ಆತಂಕಪಟ್ಟಿದೆ.

'ಅಸಮಾನತೆ ನಿವಾರಣೆ ಇಷ್ಟು ನಿಧಾನವಾಗಿ ಸಾಗಿದರೆ ಮಹಿಳೆಯರು ಮತ್ತು ಪುರುಷರ ನಡುವಿನ ಅಸಮಾನತೆ ಹೋಗಲಾಡಿಸಲು ನೂರು ವರ್ಷಗಳೇ ಬೇಕು' ಎಂದು ಡಬ್ಲು.ಇ.ಎಫ್ ಅಂದಾಜು ಮಾಡಿದೆ. ಕಳೆದ ವರ್ಷದ ಅಂಕಿ ಅಂಶಗಳ ಪ್ರಕಾರ 83 ವರ್ಷಗಳ ಬೇಕು ಎಂದು ಅದು ಅಂದಾಜಿಸಿತ್ತು.

ಹೆಚ್ಚು ಲಿಂಗ ಸಮಾನತೆ ಇರುವ ದೇಶಗಳ ಪಟ್ಟಿ
1) ಐಸ್ ಲ್ಯಾಂಡ್, 2) ನಾರ್ವೆ, 3) ಫಿನ್ ಲ್ಯಾಂಡ್, 4) ರುವಾಂಡಾ, 5) ಸ್ವೀಡನ್, 6) ನಿಕರಾಗುವಾ, 7) ಸ್ಲೊವೇನಿಯಾ, 8) ಐರ್ಲೆಂಡ್, 9) ನ್ಯೂಜಿಲೆಂಡ್, 10) ಫಿಲಿಪೇನ್ಸ್,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India slipped 21 places on the World Economic Forum's (WEF) Global Gender Gap index to a lowly 108, behind neighbours China and Bangladesh, primarily due to less participation of women in the economy and low wages. ಲಿಂಗ ಸಮಾನತೆ ಸಾಧಿಸಲು ಬೇಕು ಇನ್ನೂ 100 ವರ್ಷ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ