ಒಂದೇ ದಿನ 28,498 ಕೇಸ್, ಭಾರತದಲ್ಲಿ 9 ಲಕ್ಷ ಗಡಿ ದಾಟಿದ ಕೊರೊನಾ

ದೆಹಲಿ, ಜುಲೈ 14: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 9 ಲಕ್ಷ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 28,498 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,06,752ಕ್ಕೆ ಏರಿಕೆಯಾಗಿದೆ.

ಈ ಮೂಲಕ ಜಗತ್ತಿನಲ್ಲಿ 9 ಲಕ್ಷ ಕೊವಿಡ್ ಪ್ರಕರಣಗಳನ್ನು ದಾಖಲಿಸಿದ ಮೂರನೇ ದೇಶ ಭಾರತ. ಇದಕ್ಕೂ ಮುಂಚೆ ಅಮೆರಿಕ ಮತ್ತು ಬ್ರೆಜಿಲ್ ದೇಶದಲ್ಲಿ 9 ಲಕ್ಷಕ್ಕಿಂತ ಹೆಚ್ಚು ಕೇಸ್ ವರದಿಯಾಗಿದೆ.

9 ಲಕ್ಷ ಪ್ರಕರಣಗಳ ಪೈಕಿ 5,71,460 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 3,11,565 ಜನರು ಇನ್ನೂ ಕೊವಿಡ್ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನು 24 ಗಂಟೆಯಲ್ಲಿ 553 ಮಂದಿ ಕೊರೊನಾಗೆ ಬಲಿಯಾಗಿದ್ದು, ಇದುವರೆಗೂ 23,727 ಜನರು ಕೊವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

Indias COVID19 case tally crosses 9 lakh mark with 28,498 new cases

ನಿನ್ನೆ ಸಂಜೆವರೆಗೂ ರಾಜ್ಯಗಳ ಅಂಕಿ ಅಂಶ ನೋಡುವುದಾರೆ, ಮಹಾರಾಷ್ಟ್ರದಲ್ಲಿ 6497 ಕೊರೊನಾ ಕೇಸ್ ಪತ್ತೆಯಾಗಿದೆ. ತಮಿಳುನಾಡಿನಲ್ಲಿ 4328 ಕೇಸ್ ದಾಖಲಾಗಿದೆ. ದೆಹಲಿಯಲ್ಲಿ 1246 ಪ್ರಕರಣ, ಕರ್ನಾಟಕದಲ್ಲಿ 2738 ಪ್ರಕರಣ ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+