ರಾಯಭಾರ ಅಧಿಕಾರಿಗಳಿಗೆ ಕಿರುಕುಳ: ಪಾಕ್ ವಿರುದ್ಧ ಭಾರತದ ಪ್ರತಿಭಟನೆ
ನವದೆಹಲಿ, ನವೆಂಬರ್ 23: ಇಸ್ಲಾಮಾಬಾದ್‌ನಲ್ಲಿ ಭಾರತದ ಹೈಕಮಿಷನ್ ಅಧಿಕಾರಿಗಳಿಗೆ ಕಿರುಕುಳ ನೀಡಿದ್ದಕ್ಕೆ ಮತ್ತು ಸಿಖ್ ಯಾತ್ರಿಕರ ಭೇಟಿಗೆ ಪ್ರವೇಶಾವಕಾಶ ನಿರಾಕರಿಸಿದ್ದಕ್ಕೆ ಪಾಕಿಸ್ತಾನದ ವಿರುದ್ಧ ಭಾರತ ಪ್ರತಿಭಟನೆ ವ್ಯಕ್ತಪಡಿಸಿದೆ.
ನವೆಂಬರ್ 21 ಮತ್ತು 22ರಂದು ಗುರುದ್ವಾರ ನಂಕನಾ ಸಾಹಿಬ್ ಮತ್ತು ಗುರುದ್ವಾರ ಸಚ್ಚಾ ಸೌಧದಲ್ಲಿ ಭಾರತೀಯ ಯಾತ್ರಿಕರನ್ನು ಭೇಟಿ ಮಾಡಲು ಬಯಸಿದ್ದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಪ್ರವೇಶ ನಿರಾಕರಿಸಿದ್ದಲ್ಲದೆ ಕಿರುಕುಳ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಈ ಮೊದಲೇ ಪ್ರಯಾಣ ಅನುಮತಿ ನೀಡಿದ್ದರೂ ಅವರಿಗೆ ಪ್ರವೇಶಾವಕಾಶ ನಿರಾಕರಿಸಿಲಾಗಿತ್ತು.

ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಭಾರತದ ಉದ್ದೇಶಕ್ಕೆ ಹಿನ್ನಡೆಯುಂಟು ಮಾಡುವಂತೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ, ಅಸಹಿಷ್ಣುತೆಯ ನಡೆ ಅನುಸರಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಪಾಕಿಸ್ತಾನದ ಯಾತ್ರಾಸ್ಥಳಕ್ಕೆ ಭೇಟಿ ನೀಡಿರುವ ಭಾರತದ ಯಾತ್ರಿಕರಿಗೆ ಖಲಿಸ್ತಾನ ಪರ ಬ್ಯಾನರ್‌ಗಳನ್ನು ಪ್ರದರ್ಶಿಸಲಾಯಿತು ಎಂದು ಸಹ ವರದಿಯಾಗಿದೆ.












Click it and Unblock the Notifications