ಭಾರತದಲ್ಲಿ ಒಂದು ಕೊರೊನಾ ಪ್ರಕರಣ ಪತ್ತೆಯಾದರೆ 90 ಅಗೋಚರ
ನವದೆಹಲಿ, ಡಿಸೆಂಬರ್ 18: ಭಾರತದಲ್ಲಿ ಒಂದು ಪ್ರಕರಣ ಪತ್ತೆಯಾದರೆ 90 ಪ್ರಕರಣಗಳು ಅಗೋಚರವಾಗಿಯೇ ಉಳಿದಿದೆ. ದೇಶದಲ್ಲಿ ಶೇ.60ರಷ್ಟು ಮಂದಿ ಕೊರೊನಾ ಸೋಂಕಿಗೆ ತೆರೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 22,890 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 338 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ತಪಾಸಣೆ ವೇಳೆ ಪತ್ತೆಯಾಗದೇ ಇರುವ ಕಾರಣದಿಂದಲೇ ಭಾರತದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪತ್ತೆಯಾಗದೇ ಉಳಿದ ಪ್ರಕರಣಗಳ ಸಂಖ್ಯೆ ದೆಹಲಿ ಹಾಗೂ ಕೇರಳದಲ್ಲಿ ಅತ್ಯಂತ ಕಡಿಮೆ ಇದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ.
ದೇಶದಲ್ಲಿ ಪತ್ತೆಯಾಗದೇ ಇರುವ ಪ್ರಕರಣಗಳಷ್ಟೇ ಪ್ರಕರಣಗಳು ಕರ್ನಾಟಕದಲ್ಲೂ ಪತ್ತೆಯಾಗದೇ ಹೋಗಿವೆ. ಅಗತ್ಯ ಪ್ರಮಾಣದಷ್ಟು ತಪಾಸಣೆಯನ್ನು ನಡೆಸದೇ ಇರುವ ಕಾರಣದಿಂದಾಗಿ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಮೂರನೇ ಹಂತದ ಸೆರೊ ಸಮೀಕ್ಷೆ ಸಿದ್ಧತೆ ನಡೆಸುತ್ತಿದೆ.

ಭಾರತದಲ್ಲಿ 90 ಪತ್ತೆಯಾಗದ ಪ್ರಕರಣ
ಭಾರತದಲ್ಲಿ ಒಂದು ಕೊರೊನಾ ಪ್ರಕರಣ ಪತ್ತೆಯಾದರೆ , 90 ಪ್ರಕರಣಗಳು ಪತ್ತೆಯಾಗದೇ ಹೋಗಿವೆ. ಇಟಲಿ ಮತ್ತು ಬ್ರಿಟನ್‌ನಲ್ಲಿ ಪತ್ತೆಯಾಗದೇ ಹೋದ ಪ್ರಕರಣಗಳ ಸಂಖ್ಯೆ 10-15 ಮಾತ್ರ. ಹೀಗೆ ಪತ್ತೆಯಾಗದೇ ಇರುವ ಜನರಲ್ಲಿ ಯಾವತ್ತೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ದೆಹಲಿ ಕೇರಳದ ಪರಿಸ್ಥಿತಿ ಹೇಗಿದೆ?
ಭಾರತದ ಎಲ್ಲಾ ರಾಜ್ಯಗಳ ತಪಾಸಣೆಗಳು ಮತ್ತು ಪತ್ತೆಯಾಗದೇ ಇರುವ ಪ್ರಕರಣಗಳ ಸಂಖ್ಯೆಯನ್ನು ವಿಶ್ಲೇಷಿಸಲಾಗಿದೆ. ಪ್ರತಿ ರಾಜ್ಯಗಳಲ್ಲಿ ಪತ್ತೆಯಾಗದೇ ಇರುವ ಪ್ರಕರಣಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ. ನವೆಂಬರ್ ಮಧ್ಯದವರೆಗೆ ದೆಹಲಿ ಮತ್ತು ಕೇರಳದಲ್ಲಿ 25 ಪ್ರಕರಣಗಳು ಪತ್ತೆಯಾಗದೇ ಹೋಗಿವೆ. ಆರದೆ ಉತ್ತರ ಪ್ರದೇಶ, ಬಿಹಾರದಲ್ಲಿ ಪತ್ತೆಯಾಗದೆ ಹೋದ ಪ್ರಕರಣಗಳು 300ಕ್ಕಿಂತಲೂ ಹೆಚ್ಚಿದೆ. ಕೆಲವು ರಾಜ್ಯಗಳಲ್ಲಿ ಅದರ ಸಂಖ್ಯೆ 70-120ರಷ್ಟಿದೆ.

ಕೊವಿಡ್‌ನ ಮೂರನೆಯ ಅಲೆ ದೊಡ್ಡದು
ದೆಹಲಿಯಲ್ಲಿ ಕೊರೊನಾ ಹರಡುವಿಕೆಯ ಮೂರನೇ ಅಲೆ ಅತ್ಯಂತ ದೊಡ್ಡದು, ಆದರೆ ಪ್ತತೆಯಾದ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಎರಡನೇ ಅಲೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಒಂದು ಪ್ರಕರಣ ಪತ್ತೆಯಾದರೆ 43 ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಮೂರನೆಯ ಅಲೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಪತ್ತೆಯಾಗದೆ ಹೋದ ಪ್ರಕರಣಗಳ ಸಂಖ್ಯೆ 21 ಮಾತ್ರವಾಗಿತ್ತು.

2021ರ ಬಳಿಕ ಕಡಿಮೆಯಾಗಲಿದೆ ಕೊರೊನಾ ಸೋಂಕು
ಭಾರತದಲ್ಲಿ ಪತ್ತೆಯಾದ ಈವರೆಗಿನ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಗಣಿತಶಾಸ್ತ್ರೀಯ ಮಾದರಿಗೆ ಅನ್ವಯಿಸಿ ವಿಜ್ಞಾನಿಗಳ ತಂಡವು ಈ ವರದಿ ಸಿದ್ಧಪಡಿಸಿದೆ. 2021ರ ನಂತರ ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗಲಿದೆ ಎಂದು ಹೇಳಿದ್ದ ತಜ್ಞರೇ ಈ ಅಧ್ಯಯನವನ್ನು ಕೂಡ ನಡೆಸಿದ್ದಾರೆ.











Click it and Unblock the Notifications