ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಪ್ಪು ಹಣ ರವಾನೆ : ಭಾರತಕ್ಕೆ 5ನೇ ಸ್ಥಾನ

By Mahesh
|
Google Oneindia Kannada News

ವಾಷಿಂಗ್ಟನ್, ಡಿ.13: ವಿದೇಶಕ್ಕೆ ಕಪ್ಪು ಹಣ ಸಾಗಾಣಿಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ 5ನೆ ಸ್ಥಾನ ಬಂದಿದೆ. 2002-11ರ ವೇಳೆಯಲ್ಲಿ ಭಾರತದಿಂದ ಸುಮಾರು 343.04 ಮಿಲಿಯನ್ ಅಮೆರಿಕನ್ ಡಾಲರ್ (4 ಲಕ್ಷ ಕೋಟಿ) ಕಪ್ಪು ಹಣ ವಿದೇಶಕ್ಕೆ ರವಾನೆಯಾಗಿದೆ ಎಂದು ಸಂಶೋಧನಾ ಸಂಸ್ಥೆಯೊಂದು ಪತ್ತೆ ಮಾಡಿದೆ.

ವಿದೇಶಕ್ಕೆ ಸಾಗಾಣಿಕೆಯಾಗಿರುವ ಕಪ್ಪುಹಣ ಬಜೆಟ್ ನ ಒಟ್ಟು ಶೇ.25ರಷ್ಟು ಆಗಿದ್ದು, ಇದರಲ್ಲಿ ಶಿಕ್ಷಣ, ಸಾರಿಗೆ, ವಿದ್ಯುತ್, ನೀರಾವರಿ, ಕೈಗಾರಿಕೆ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ರೀತಿಯ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ. ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ರಾಷ್ಟ್ರಗಳ ನಡುವೆ ಭಾರತ ದಿಂದಲೇ ಅತಿ ಹೆಚ್ಚು ಕಪ್ಪು ಹಣ ವಿದೇಶಕ್ಕೆ ಹೊರಹೋಗುತ್ತಿದೆ.

2002-11ರಲ್ಲಿ ಅಮೆರಿಕದಿಂದ 5.9 ಟ್ರಿಲಿಯನ್ ಡಾಲರ್ ವಿದೇಶಕ್ಕೆ ರವಾನೆಯಾದರೆ ಇದೇ ವೇಳೆ ಭಾರತದಿಂದ 832.4 ಬಿಲಿಯನ್ ಕಪ್ಪು ಹಣ ಹೊರಹೋಗಿದೆ ಎಂದು ಅಂದಾಜಿಸಲಾಗಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ ಅಮೆರಿಕ ಅತಿ ಹೆಚ್ಚು ಕಪ್ಪು ಹಣ ಸಾಗಾಣಿಕೆ ಮಾಡುತ್ತಿರುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನ ಪಡೆದರೆ, ಹೊಂದುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ 5ನೆ ಸ್ಥಾನ ಬಂದಿದೆ.

India 5th largest exporter of black money between 2002-11: Report

ಹೆಚ್ಚು ಹೆಚ್ಚು ಹಣ ವಿದೇಶಕ್ಕೆ ಹೋದಂತೆ ಅಭಿವೃದ್ಧಿ ಕುಂಠಿತವಾಗುತ್ತಿದ್ದು, ಆರ್ಥಿಕ ಹಿನ್ನಡೆಗೂ ಕಾರಣವಾಗಿದೆ. ಇದನ್ನು ತಡೆಗಟ್ಟಲು ಪ್ರಬಲ ಕಾಯ್ದೆ ಜಾರಿಗೆ ತರುವ ಅಗತ್ಯವಿದೆ ಎಂದು ಸಂಸ್ಥೆಯ ಪ್ರಮುಖರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

2011ರಲ್ಲಿ 946.7 ಬಿಲಿಯನ್ ಡಾಲರ್ ಹೊರಹೋದರೆ ಇದು ಅಮೆರಿಕದ ವಾರ್ಷಿಕ ಬಜೆಟ್‌ನ 13.7ರಷ್ಟಾಗಿದೆ. ವಿಶೇಷವೆಂದರೆ ಅತಿ ಹೆಚ್ಚು ಕಪ್ಪು ಹಣ ಹೊರಹೋಗುತ್ತಿರುವ ಖಂಡಗಳಲ್ಲಿ ಏಷ್ಯಾ ಖಂಡಕ್ಕೆ ಪ್ರಥಮ ಸ್ಥಾನ ಬಂದಿದೆ. ಏಷ್ಯಾ ಖಂಡದಲ್ಲಿ 15 ರಾಷ್ಟ್ರಗಳು ಈ ಪಟ್ಟಿಗೆ ಸೇರ್ಪಡೆಯಾಗಿವೆ.

ಚೀನಾ, ಮಲೇಷಿಯಾ, ಭಾರತ, ಇಂಡೋನೇಷಿಯಾ, ಥೈಲ್ಯಾಂಡ್, ಪಿಲಿಪ್ಪೈನ್ಸ್ ಬಂದರೆ, ಆಫ್ರಿಕಾ ಖಂಡದಿಂದ ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ, ಯೂರೋಪ್ ಖಂಡದಿಂದ ರಷ್ಯಾ, ಬೆಲೋರಸ್, ಪೋಲ್ಯಾಂಡ್, ಸರ್ಬಿಯಾ, ಮೆಕ್ಸಿಕೋ ಮತ್ತು ಬ್ರೆಜಿಲ್ ರಾಷ್ಟ್ರಗಳು ಸ್ಥಾನ ಪಡೆದಿವೆ. ಕಳೆದ 10 ವರ್ಷಗಳ ಅವಧಿಯಲ್ಲಿ ಚೀನಾ 1.08 ಡಾಲರ್ ಟ್ರಿಲಿಯನ್ ಹಣವನ್ನು ವಿದೇಶಕ್ಕೆ ಸಾಗಿಸಿದ್ದರೆ, ರಷ್ಯಾ 880 ಬಿಲಿಯನ್, ಮೆಕ್ಸಿಕೋ 461 ಬಿಲಿಯನ್, ಮಲೇಷಿಯಾ 370 ಬಿಲಿಯನ್ ಹಣವನ್ನು ವಿದೇಶಕ್ಕೆ ರಫ್ತು ಮಾಡಿವೆ.

English summary
India ranked fifth largest exporter of black money between 2002-2011, with a total of USD 343.04 billion, and in 2011 it was placed third when USD 84.93 billion was sent abroad, according to a new report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X