ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ

By Mahesh
|
Google Oneindia Kannada News

ನವದೆಹಲಿ, ಫೆ.10: 'ದೆಹಲಿ ಸಿಎಂ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭ ಕೋರಿದ ಪ್ರಧಾನಿ ಮೋದಿ' ಎಂಬಲ್ಲಿಗೆ ಆಮ್ ಆದ್ಮಿ ಪಕ್ಷದ ದೆಹಲಿಯಲ್ಲಿ ಮತ್ತೊಮ್ಮೆ ದರ್ಬಾರ್ ನಡೆಸುವುದು ಖಾತ್ರಿಯಾಗಿದೆ. ಸಮೀಕ್ಷೆಗಳ ಫಲಿತಾಂಶಗಳಿಗೆ ಸೆಡ್ಡು ಹೊಡೆದು ಅಂಕಿ ಸಂಖ್ಯೆಗಳೇ ಮುಖ್ಯವಾದ ಪ್ರಜಾಪ್ರಭುತ್ವದಲ್ಲಿ ಎಎಪಿ ಹೊಸ ವಿಕ್ರಮ ಸಾಧಿಸಿದೆ

ಯಾರೂ ಊಹಿಸದ ರೀತಿಯಲ್ಲಿ ಮ್ಯಾಜಿಕ್ ನಂಬರ್ ದಾಟಿರುವ ಎಎಪಿ ಟ್ರೆಂಡಿಂಗ್ ನೋಡಿದರೆ ದೆಹಲಿಯಲ್ಲಿ ವಿರೋಧ ಪಕ್ಷವೇ ಇಲ್ಲದ್ದಂತಾದರೂ ಅಚ್ಚರಿಪಡಬೇಕಿಲ್ಲ. 65ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ.[ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಅಪ್ಡೇಟ್ಸ್]

ಕರ್ನಾಟಕದ ಆಮ್ ಆದ್ಮಿ ಪಕ್ಷದ ಘಟಕ ಬೆಂಗಳೂರಿನ ಜೈನ ಭವನದಲ್ಲಿ ಬೀಡುಬಿಟ್ಟಿದ್ದು, ದೆಹಲಿ ವಿಜಯವನ್ನು ಕೊಂಡಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯ ಮತ್ತೊಮ್ಮೆ ಎತ್ತಿ ಹಿಡಿಯಲಾಗುವುದು ಎಂದು ಸಾರಿದ್ದಾರೆ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳು ಕೇಳಿ ಬರುತ್ತಿದೆ. [ನೆಗಟಿವ್ ಪಬ್ಲಿಸಿಟಿ ಬಿಜೆಪಿ ಸೋಲಿಗೆ ಕಾರಣ: ಎಎಪಿ]

ಮರುಕಳಿಸಿದ ದೆಹಲಿ ಫಲಿತಾಂಶ

ಮರುಕಳಿಸಿದ ದೆಹಲಿ ಫಲಿತಾಂಶ

2013ರ ಫಲಿತಾಂಶ
* ಬಿಜೆಪಿ 31 ಸ್ಥಾನ (ಶೇ 33.1ರಷ್ಟು ಮತ ಪಾಲು)
* ಕಾಂಗ್ರೆಸ್ 8 ಸ್ಥಾನ ( ಶೇ24.6ರಷ್ಟು ಮತ ಪಾಲು)
* ಆಮ್ ಆದ್ಮಿ ಪಕ್ಷ 28 ಸ್ಥಾನ ( ಶೇ 29.5 ಮತ ಪಾಲು)

ದೆಹಲಿಯಲ್ಲಿ ಆಪ್ ಸರ್ಕಾರ ರಚನೆ ಮಾಡಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಹೇಳಿರುವುದು ಬಿಜೆಪಿ ಪಾಳೆಯದಲ್ಲಿ ಆತಂಕ ಮೂಡಿಸಿತ್ತು. ಅದರೆ, ಸಮೀಕ್ಷೆಗಳ ನಿರೀಕ್ಷೆ ಮೀರಿ ಎಎಪಿ ವಿಜಯ ಸಾಧಿಸಿದೆ.
ಕರ್ನಾಟಕದ ಎಎಪಿ ಕಾರ್ಯಕರ್ತರಲ್ಲಿ ಸಂಭ್ರಮ

ಕರ್ನಾಟಕದ ಎಎಪಿ ಕಾರ್ಯಕರ್ತರಲ್ಲಿ ಸಂಭ್ರಮ

ಕರ್ನಾಟಕದ ಎಎಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರು ಸೇರಿದಂತೆ ವಿವಿಧೆಡೆ ಪಾದಯಾತ್ರೆ ಹಮ್ಮಿಕೊಂಡು ಜನತೆ ಧನ್ಯವಾದ ಅರ್ಪಿಸಲಾಗುವುದು ಎಂದು ಎಎಪಿ ವಕ್ತಾರರು ಹೇಳಿದ್ದಾರೆ.

ದೆಹಲಿಯಲ್ಲಿ ಪೊರಕೆ ಹಿಡಿದ ಕೈಗೆ ರಂಗೋ ರಂಗು

ದೆಹಲಿಯಲ್ಲಿ ಪೊರಕೆ ಹಿಡಿದ ಕೈಗೆ ರಂಗೋ ರಂಗು

ದೆಹಲಿಯಲ್ಲಿ ಪೊರಕೆ ಹಿಡಿದ ಕೈಗಳು ಎಲ್ಲೆಡೆ ವಿಜಯೋತ್ಸವ ಆಚರಿಸುತ್ತಿರುವುದು ಕಂಡು ಬಂದಿದೆ. ನಿರೀಕ್ಷೆಗೂ ಮೀರಿದ ಗೆಲುವು ಎಎಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತಂದಿದೆ.

ಎಲ್ಲೆಡೆ ಗೆದ್ದ ನಾಯಕರಿಗೆ ಸಂಭ್ರಮದ ಸ್ವಾಗತ

ಎಲ್ಲೆಡೆ ಗೆದ್ದ ನಾಯಕರಿಗೆ ಸಂಭ್ರಮದ ಸ್ವಾಗತ

ದೆಹಲಿಯಲ್ಲಿ ಎಎಪಿಯಿಂಡ ಸಿಹಿ ಹಂಚಿಕೆ ಸಂಭ್ರಮ ಮನೆ ಮಾಡಿದ್ದು, ದೆಹಲಿ ಪೊಲೀಸರು ಎಲ್ಲೆಡೆ ಬಿಗಿ ಬಂದೋ ಬಸ್ತ್ ಮಾಡಿದ್ದಾರೆ.

ವಿರೋಧ ಪಕ್ಷವೇ ಇಲ್ಲದಂಥ ವಾತಾವರಣ

ವಿರೋಧ ಪಕ್ಷವೇ ಇಲ್ಲದಂಥ ವಾತಾವರಣ

ದೆಹಲಿಯಲ್ಲಿ ವಿರೋಧ ಪಕ್ಷವೇ ಇಲ್ಲದಂಥ ವಾತಾವರಣ ಕಂಡು ಬಂದಿದ್ದು, ಬಿಜೆಪಿ 7 ಸ್ಥಾನವನ್ನು ಗೆಲ್ಲದಿದ್ದರೆ ವಿಪಕ್ಷವೇ ಇಲ್ಲದ್ದಂತಾಗುತ್ತದೆ.

ನಾಗಪುರದಲ್ಲಿ ಸಂಭ್ರಮ

ನಾಗಪುರದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಸಂಭ್ರಮ ಹೀಗಿತ್ತು

ಭೋಪಾಲ್ ನಲ್ಲಿ ಎಎಪಿ ಸಂಭ್ರಮ

ಭೋಪಾಲ್ ನಲ್ಲಿ ಎಎಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮ ಆಚರಿಸಿದ್ದಾರೆ

ದೆಹಲಿ ಎಎಪಿ ಕಚೇರಿ ಚಿತ್ರ ಹೀಗಿದೆ

ದೆಹಲಿ ಎಎಪಿ ಕಚೇರಿ ಬಳಿ ಟೋಪಿ ತೊಟ್ಟ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಚಿತ್ರ ಹೀಗಿದೆ

ಜನತೆಗೆ ಧನ್ಯವಾದ ಅರ್ಪಿಸಿದ ಅರವಿಂದ್

ಜನತೆಗೆ ಧನ್ಯವಾದ ಅರ್ಪಿಸಿದ ಅರವಿಂದ್

ದೆಹಲಿ ಜನತೆಗೆ ಧನ್ಯವಾದ ಅರ್ಪಿಸಿದ ಅರವಿಂದ್ ಕೇಜ್ರಿವಾಲ್ ದಂಪತಿ

ಕಾತುರ ನಿರೀಕ್ಷೆ ಕ್ಷಣ ಬಂದೇ ಬಿಟ್ಟಿತು

ಕಾತುರ ನಿರೀಕ್ಷೆ ಕ್ಷಣ ಬಂದೇ ಬಿಟ್ಟಿತು

ಫೆ.10ರಂದು ಬೆಳಗ್ಗೆ 10 ಸುಮಾರಿಗೆ ಎಎಪಿಗೆ ದಿಗ್ವಿಜಯ ಸಿಗುವ ಮುನ್ಸೂಚನೆ ಸಿಕ್ಕಿತು. ಟಿವಿ ಪರದೆಗಳು ಚುನಾವಣಾ ಆಯೋಗದ ವೆಬ್ ತಾಣದಲ್ಲಿ ಎಎಪಿ ಟ್ರೆಂಡಿಂಗ್ ಬಗ್ಗೆ ಕಾರ್ಯಕರ್ತರಿಂದ ವೀಕ್ಷಣೆ.

ಪೂರಕೆಗೆ ಬೆಲೆ ತಂದುಕೊಟ್ಟ ಎಎಪಿ

ಪೂರಕೆಗೆ ಬೆಲೆ ತಂದುಕೊಟ್ಟ ಎಎಪಿ

ಭ್ರಷ್ಟಾಚಾರವನ್ನು ಪೂರಕೆ ಮೂಲಕ ದೇಶದಿಂದ ಹೊರಕ್ಕೆ ಹಾಕಲಾಗುವುದು ಎಂದು ಎಎಪಿ ಘೋಷಿಸಿದ್ದಲ್ಲದೆ ಮತ್ತೊಮ್ಮೆ ಗೆಲುವು ಸಾಧಿಸಿ ಜನರ ಮುಂದೆ ನಿಂತಿದೆ. ಜನ ಸಾಮಾನ್ಯರಿಗೆ ಕೇಜ್ರಿವಾಲ್ ಹತ್ತಿರವಾಗಿದ್ದರಿಂದ ಎಲ್ಲಾ ವರ್ಗದ ಬೆಂಬಲ ಅವರಿಗೆ ದಕ್ಕಿದೆ.

ಪ್ರತಿ ಪಕ್ಷವೇ ಇಲ್ಲದಂತೆ ಮಾಡಿದ ಎಎಪಿ ಗೆಲುವು

ಪ್ರತಿ ಪಕ್ಷವೇ ಇಲ್ಲದಂತೆ ಮಾಡಿದ ಎಎಪಿ ಗೆಲುವು

ದೆಹಲಿಯ 70 ಕ್ಷೇತ್ರಗಳಲ್ಲಿ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎಎಪಿ ದಿಗ್ವಿಜಯ ಬಾರಿಸಿದೆ. ಬಿಜೆಪಿ 3 ಸೀಟು ಕಷ್ಟಪಟ್ಟು ಗೆದ್ದಿದೆ. ಪ್ರತಿಪಕ್ಷ ಸ್ಥಾನ ದಕ್ಕಲು ಕನಿಷ್ಠ 7 ಸ್ಥಾನವಾದರೂ ಬೇಕು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.

English summary
Aam Aadmi Party has slipped into jubilation mode after the Delhi Assembly Election results hinted at a landslide victory of the party. Karnataka AAP Unit is found distributing sweets and celebrating the victory in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X