ದೆಹಲಿ ಚುನಾವಣೆ ಫಲಿತಾಂಶ : ಕ್ಷಣ-ಕ್ಷಣದ ಮಾಹಿತಿ
ನವದೆಹಲಿ, ಫೆ. 10 : ದೆಹಲಿಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮೂರು ಸ್ಥಾನ ಪಡೆದ ಬಿಜೆಪಿ ರಾಜಧಾನಿಯಲ್ಲಿ ಮುಗ್ಗರಿಸಿದೆ. ಎಎಪಿ ಸ್ಪಷ್ಟಬಹುಮತ ಪಡೆದು ಎರಡನೇ ಬಾರಿ ಅಧಿಕಾರಕ್ಕೇರಲಿದೆ. ಅರವಿಂದ್ ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿಯಾಗಲಿದ್ದಾರೆ.
ಫೆಬ್ರವರಿ 7ರಂದು ನಡೆದ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದೆ. 70 ಕ್ಷೇತ್ರಗಳ ಪೈಕಿ ಆಮ್ ಆದ್ಮಿ ಪಕ್ಷ 67 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಬಿಜೆಪಿ 3 ಸ್ಥಾನಗಳಿಸಿದೆ. ಕಾಂಗ್ರೆಸ್ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಖಾತೆ ತೆರೆಯಲು ವಿಫಲಗೊಂಡಿದೆ. ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಇಲ್ಲಿ ಲಭ್ಯವಿದೆ. [ಚಿತ್ರಗಳಲ್ಲಿ: ನೆಲಕಚ್ಚಿದ ಕಮಲ, ಎಎಪಿಗೆ ಅಭೂತಪೂರ್ವ ಜಯ]
ಸಮಯ 5 ಗಂಟೆ : ಎಎಪಿ ಮುಂಖಡ ಕುಮಾರ್ ವಿಶ್ವಾಸ್ ಆಮ್ ಆದ್ಮಿ ಪಕ್ಷದ ಶಾಸಕರಿಗೆ ಇಂದು ರಾತ್ರಿ ಔತಣಕೂಟ ಆಯೋಜಿಸಿದ್ದಾರೆ. ಇಂದು ಕುಮಾರ್ ವಿಶ್ವಾಸ್ ಅವರ ಹುಟ್ಟುಹಬ್ಬ ಅದರ ಜೊತೆಗೆ ದೆಹಲಿ ಫಲಿತಾಂಶ ಪ್ರಕಟಗೊಂಡಿದ್ದು, ಪಕ್ಷ ಭರ್ಜರಿ ಜಯ ದಾಖಲಿಸಿದೆ.
ಸಮಯ 4 ಗಂಟೆ : ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಝೆಡ್ ಪ್ಲಸ್ ಭದ್ರತೆ ನೀಡಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.
ಸಮಯ 3.30 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲವು ದಾಖಲಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಫೆಬ್ರವರಿ 14ರಂದು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸಮಯ 2.33 : ರಾಷ್ಟ್ರ ರಾಜಧಾನಿಯಲ್ಲಿ ಖಾತೆ ತೆರೆಯದ ಕಾಂಗ್ರೆಸ್. ಬಿಜೆಪಿ, ಕಾಂಗ್ರೆಸ್ ಗುಡಿಸಿ ಹಾಕಿದ ಆಪ್ ಪೊರಕೆ. ಎಎಪಿಗೆ 67, ಬಿಜೆಪಿಗೆ 3 ಸ್ಥಾನ. ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 36.
ಸಮಯ 1.15 : ಸದ್ಯದ ಮಾಹಿತಿ ಪ್ರಕಾರ ಆಮ್ ಆದ್ಮಿ ಪಕ್ಷ 67, ಬಿಜೆಪಿ 3 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ.
ಸಮಯ 12.57 : ಸಂಜೆ 5 ಗಂಟೆಗೆ ಆಮ್ ಆದ್ಮಿ ಪಕ್ಷದ ಶಾಸಕರ ಸಭೆ, ಶಾಸಕಾಂಗ ನಾಯಕನಾಗಿ ಅರವಿಂದ್ ಕೇಜ್ರಿವಾಲ್ ಆಯ್ಕೆ. ಫೆ.14ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ.
ಸಮಯ 12.49 : ಕೃಷ್ಣಾ ನಗರ ಕ್ಷೇತ್ರದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿಗೆ ಸೋಲು ಅನುಭವಿಸಿದ್ದಾರೆ. 1,150 ಮತಗಳ ಅಂತರದಿಂದ ಆಪ್ ಅಭ್ಯರ್ಥಿ ಎಸ್.ಕೆ. ಬಗ್ಗಾ ವಿರುದ್ಧ ಕಿರಣ್ ಬೇಡಿ ಸೋಲು ಅನುಭವಿಸಿದ್ದಾರೆ.

ಸಮಯ 12.36 : ನವದೆಹಲಿ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್‌ಗೆ ಜಯಗಳಿಸಿದ್ದಾರೆ. 26 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ನೂಪುರ್ ಶರ್ಮಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಸಮಯ 12.25 : ಜನಕ್‌ಪುರಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್ ಮುಖಿಗೆ ಮುಖಭಂಗ ಆಪ್ ಅಭ್ಯರ್ಥಿ ರಾಜೇಶ್ ರಿಷಿಗೆ ಗೆಲುವು
ಸಮಯ 12 ಗಂಟೆ : ರೋಹಿಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜೇಂದರ್ ಗುಪ್ತಾ ಗೆಲುವು ಸಾಧಿಸಿದ್ದಾರೆ
ಸಮಯ 11.40 : ಈ ಗೆಲುವು ನಮ್ಮ ಜವಾಬ್ದಾರಿ ಹೆಚ್ಚಿಸಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಐತಿಹಾಸಿನ ಗೆಲುವಿಗೆ ಮತ ನೀಡಿದ ದೆಹಲಿ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ಅಹಂಕಾರವೇ ಬಿಜೆಪಿ ಮತ್ತು ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಕೇಜ್ರಿವಾಲ್ ವಿಶ್ಲೇಷಿಸಿದ್ದಾರೆ.
ಸಮಯ 11.29 : ಸದ್ಯದ ಮಾಹಿತಿ ಪ್ರಕಾರ ಆಮ್ ಆದ್ಮಿ ಪಕ್ಷ 64, ಬಿಜೆಪಿ 5 ಮತ್ತು ಇತರರು 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಸಮಯ 11.05 : ಇಂತಹ ಅಭೂತಪೂರ್ವ ಗೆಲುವು ನಿರೀಕ್ಷಿಸಿರಲಿಲ್ಲ, ದೆಹಲಿಯ ತೀರ್ಪು ಐತಿಹಾಸಿಕ ತೀರ್ಪು ಎಂದು ಚುನಾವಣೆ ಫಲಿತಾಂಶದ ಬಗ್ಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. [ಭ್ರಷ್ಟಾಚಾರ ವಿರುದ್ಧ ಹೋರಾಡಿ, ಕೇಜ್ರಿಗೆ ಅಣ್ಣಾ ಕಿವಿಮಾತು]
ಸಮಯ 10.55 : ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಹೊಣೆ ಹೊತ್ತ ಅಜಯ್ ಮಾಕೇನ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿ ಚುನಾವಣೆಯಲ್ಲಿ ಅಜಯ್ ಮಾಕೇನ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು.

ಸಮಯ 10.51 : ಅರವಿಂದ್ ಕೇಜ್ರಿವಾಲ್ ಅವರಿಗೆ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಅಭಿನಂದನೆ ಸಲ್ಲಿಸಿದ್ದಾರೆ. ದೆಹಲಿಯನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದಾರೆ.
Full marks to Arvind. Congratulations. Now take Delhi to the heights it belongs to. Make it a world class city..
— Kiran Bedi (@thekiranbedi) February 10, 2015 ಸಮಯ 10.48 : ಆಮ್ ಆದ್ಮಿ ಪಕ್ಷ ಮೊದಲ ಗೆಲುವು ದಾಖಲಿಸಿದೆ. ಬದರ್‌ಪುರ್ ಕ್ಷೇತ್ರದಲ್ಲಿ ನಾರಾಯಣ ದತ್ತ ಅವರು 60 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಸಮಯ 10.42 : ಆಮ್ ಆದ್ಮಿ ಪಕ್ಷ 65, ಬಿಜೆಪಿ 4 ಮತ್ತು ಬಿಎಸ್ಪಿ ಅಭ್ಯರ್ಥಿ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ದೆಹಲಿಯಲ್ಲಿ ಅಧಿಕೃತ ಪ್ರತಿಪಕ್ಷವೇ ಇಲ್ಲದಂತಾಗಿದೆ. ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಕನಿಷ್ಠ 7 ಸ್ಥಾನಗಳಲ್ಲಿ ಜಯಗಳಿಸಿರಬೇಕು. ಕಾಂಗ್ರೆಸ್ ದೆಹಲಿಯಲ್ಲಿ ಖಾತೆಯನ್ನೇ ತೆರೆದಿಲ್ಲ.
ಸಮಯ 10.40 : ಬಿಜೆಪಿ ಸೋಲಿಗೆ ಸಾಮೂಹಿಕ ಹೊಣೆ ಹೊರುತ್ತೇವೆ. ಆಪ್ ವಿಜಯಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್ ಉಪಾಧ್ಯಾಯ ಹೇಳಿದ್ದಾರೆ.
ಸಮಯ 10.30 : ಆಮ್ ಆದ್ಮಿ ಪಕ್ಷ 63, ಬಿಜೆಪಿ 7 ಇತರೆ ಅಭ್ಯರ್ಥಿ 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ
ಸಮಯ 10.25 : 'ಪ್ರಧಾನಿ ಮೋದಿ ಅವರ ಗೆಲುವಿನ ನಾಗಾಲೋಟಕ್ಕೆ ಹಿನ್ನಡೆ ಉಂಟಾಗಿದೆ' ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿ ಜನರು ಆಪ್ ಮೇಲೆ ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳು ಆಪ್‌ಗೆ ಹೋಗಿವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.

ಸಮಯ 10.18 : ದೆಹಲಿ ಚುನಾವಣೆಯಲ್ಲಿ ಗೆಲವು ಸಾಧಿಸಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ದೂರವಾಣಿ ಕರೆ ಮಾಡಿ ಕೇಜ್ರಿವಾಲ್ ಅವರನ್ನು ಅಭಿನಂದಿಸಿದ್ದಾರೆ. ನಿಮ್ಮನ್ನು ವೈಯಕ್ತಿಕವಾಗಿ ಬಂದು ಭೇಟಿಯಾಗುತ್ತೇನೆ ಎಂದು ಕೇಜ್ರಿವಾಲ್ ಮೋದಿ ಅವರಿಗೆ ತಿಳಿಸಿದ್ದಾರೆ.
Spoke to @ArvindKejriwal & congratulated him on the win. Assured him Centre's complete support in the development of Delhi.
— Narendra Modi (@narendramodi) February 10, 2015 ಸಮಯ 10.15 : ದೆಹಲಿಯಲ್ಲಿ ಗೆಲುವು ಸಾಧಿಸಿದ ಅರವಿಂದ್ ಕೇಜ್ರಿವಾಲ್‌ಗೆ ಅಣ್ಣಾ ಹಜಾರೆ ಅಭಿನಂದನೆ ಸಲ್ಲಿಸಿದ್ದಾರೆ. ಮೊದಲಿನಿಂದಲೂ ನಮ್ಮ ಜೊತೆ ಹೋರಾಟ ಮಾಡಿದ್ರು, ಈಗ ದೆಹಲಿ ಜನರು ವಿಶ್ವಾಸಗಳಿಸಿದ್ದಾರೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಸಮಯ 10.03 : 'ನಾನು ಜನರ ಸಿಎಂ ಆಗಿರುತ್ತೇನೆ. ಯಾವುದೇ ಕ್ಷಣದಲ್ಲೂ ಗಾಬರಿ ಆಗಿರಲಿಲ್ಲ, ದೆಹಲಿ ಜನರು ನಮ್ಮೊಂದಿಗಿದ್ದಾರೆ ಎಂಬ ನಂಬಿಕೆ ಇತ್ತು' ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ಸಮಯ 10 ಗಂಟೆ : ಬಿಜೆಪಿಯ ಎಲ್ಲಾ ನಾಯಕರು ಪಕ್ಷದ ಸೋಲಿನ ಹೊಣೆಯನ್ನು ಹೊರುತ್ತೇವೆ ಎಂದು ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಹೇಳಿದ್ದಾರೆ
Party will collectively take responsibility or credit of victory or defeat: Shazia Ilmi, BJP #DelhiPollResults pic.twitter.com/AXoTNJRVDj
— ANI (@ANI_news) February 10, 2015 ಸಮಯ 9.50 : ಆಮ್ ಆದ್ಮಿ ಪಕ್ಷ 57, ಬಿಜೆಪಿ 11, ಕಾಂಗ್ರೆಸ್ 1 ಮತ್ತು ಇತರ ಅಭ್ಯರ್ಥಿ 1 ಕ್ಷೇತ್ರಗಳಲ್ಲಿ ಮುನ್ನಡೆ
ಸಮಯ 9.44 : ದೆಹಲಿ ಚುನಾವಣೆಯಲ್ಲಿ ಹೀನಾಯ ಸೋಲು, ಕಾಂಗ್ರೆಸ್ ಕಚೇರಿ ಮುಂದೆ ಕಾರ್ಯಕರ್ತರ ಪ್ರತಿಭಟನೆ
Priyanka Lao Party bachao slogans go up, outside Congress HQ in Delhi #DelhiPollResults pic.twitter.com/XWIyiQe0mo
— ANI (@ANI_news) February 10, 2015 ಸಮಯ 9.40 : ಆಮ್ ಆದ್ಮಿ 57, ಬಿಜೆಪಿ 12, ಕಾಂಗ್ರೆಸ್ 0, ಇತರೆ ಅಭ್ಯರ್ಥಿಗಳು 1 ಕ್ಷೇತ್ರದಲ್ಲಿ ಮುನ್ನಡೆ
ಸಮಯ 9.35 : ದೆಹಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿನಂದನೆ ಸಲ್ಲಿಸಿದ್ದಾರೆ.
My congratulations to all the Delhi voters, AAP workers and leaders for big victory. Well done to you. All my best wishes. We are very happy
— Mamata Banerjee (@MamataOfficial) February 10, 2015 ಸಮಯ 9.32 : ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಮುನ್ನಡೆ : ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ ಮುಂತಾದ ನಗರಗಳ ಆಪ್ ಕಚೇರಿಯಲ್ಲಿ ಸಂಭ್ರಮಾಚರಣೆ
ಸಮಯ 9.30 : ಕೃಷ್ಣಾ ನಗರ ಕ್ಷೇತ್ರದಲ್ಲಿ ಕಿರಣ್ ಬೇಡಿಗೆ 1 ಸಾವಿರ ಮತಗಳ ಹಿನ್ನಡೆ, ಆಪ್ ಅಭ್ಯರ್ಥಿ ಎಸ್.ಕೆ.ಬಗ್ಗಾ ಮುನ್ನಡೆ
AAP's SK Bagga leading from Krishna Nagar, Kiran Bedi trailing, margin above 1000 votes #DelhiPollResults
— ANI (@ANI_news) February 10, 2015 ಸಮಯ 9.20 : ಆಮ್ ಆದ್ಮಿ 46, ಬಿಜೆಪಿ 11, ಕಾಂಗ್ರೆಸ್ 3 ಮತ್ತು 1 ಕ್ಷೇತ್ರದಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ
ಸಮಯ 9.16 : 2013ರ ಚುನಾವಣೆಯಲ್ಲಿ 28 ಸ್ಥಾನಗಳಿಸಿದ್ದ ಆಪ್, ಸದ್ಯ 43 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ

ಸಮಯ 9.13 : ದೆಹಲಿ ಫಲಿತಾಂಶ : ಆಮ್ ಆದ್ಮಿ ಪಕ್ಷಕ್ಕೆ ಶುಭಾಶಯ ಕೋರಿದ ಬಿಜೆಪಿ
ಸಮಯ 9.05 : ಕೃಷ್ಣಾ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಅವರಿಗೆ 282 ಮತಗಳ ಹಿನ್ನಡೆ
ಸಮಯ 9 ಗಂಟೆ : ವಿಶ್ವವೇ ನಮ್ಮನ್ನು ಗಮನಿಸುತ್ತಿದೆ, ದೆಹಲಿ ಗೆಲುವು ಅರವಿಂದ್ ಕೇಜ್ರಿವಾಲ್ ಗೆಲುವು ಎಂದ ಆಪ್ ನಾಯಕ ಸೋಮನಾಥ್ ಭಾರ್ತಿ
Celebrations outside AAP office in Delhi #DelhiPollResults pic.twitter.com/1j9Coz6pdg
— ANI (@ANI_news) February 10, 2015 ಸಮಯ 8.55 : ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲುಬೇಕಾದ ಮ್ಯಾಜಿಕ್ ನಂಬರ್ 36
ಸಮಯ 8.50 : ಆಮ್ ಆದ್ಮಿ ಪಕ್ಷ 23, ಬಿಜೆಪಿ 11, ಕಾಂಗ್ರೆಸ್ 3 ಮತ್ತು 2 ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಸಮಯ 8.45 : ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಅವರಿಗೆ ಸದರ್ ಬಜಾರ್ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಮತಗಳ ಹಿನ್ನಡೆ
ಸಮಯ 8.42 : ಆರ್.ಕೆ.ಪುರಂ ಕ್ಷೇತ್ರದಲ್ಲಿ ಆಮ್ ಆದ್ಮಿ ಅಭ್ಯರ್ಥಿ ಪರಿಮಳ ಟೋಕಸ್ ಮುನ್ನಡೆ
Counting for Delhi Assembly election underway at counting centre in Gole Market #DelhiPollResults pic.twitter.com/1H2dVMgZGx
— ANI (@ANI_news) February 10, 2015 ಸಮಯ 8.35 : ನವದೆಹಲಿ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಮುನ್ನಡೆ
ಸಮಯ 8.28 : ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಶರ್ಮಿಷ್ಠಾ ಮುಖರ್ಜಿಗೆ ಹಿನ್ನಡೆ, ಬಿಎಸ್‌ಪಿ ಅಭ್ಯರ್ಥಿ ಮುನ್ನಡೆ
ಸಮಯ 8.22 : ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ವಾಲಿಯಾ
ಸಮಯ 8.19 : ಕೃಷ್ಣಾ ನಗರ ಕ್ಷೇತ್ರದಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಮುನ್ನಡೆ
ಸಮಯ 8.15 : ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ರಾಖಿ ಬಿರ್ಲಾಗೆ ಮುನ್ನಡೆ
All the very best Delhiites. Do pray. Prayers are v powerful.
— Arvind Kejriwal (@ArvindKejriwal) February 10, 2015 ಸಮಯ 8.08 : ರೋಹಿಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜೇಂದರ್ ಗುಪ್ತಾಗೆ ಮುನ್ನಡೆ
ಸಮಯ 08.05 : ಈ ಚುಣಾವಣೆಯಲ್ಲಿ ಗೆಲುವು ನಮ್ಮದು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಹೇಳಿಕೆ
We will win today : Dr.Kumar Vishwas,AAP #DelhiPollResults pic.twitter.com/24VqqQ5w5O
— ANI (@ANI_news) February 10, 2015 ಸಮಯ 8 ಗಂಟೆ : ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ.
Counting for Delhi Assembly Election begins #DelhiPollResults
— ANI (@ANI_news) February 10, 2015 ಬಿಜೆಪಿ ಹಾಗೂ ಎಎಪಿ ನಡುವಿನ ಹಣಾಹಣಿಯಿಂದಾಗಿ ದೆಹಲಿ ಕದನ ತೀವ್ರ ಕುತೂಹಲ ಕೆರಳಿಸಿದೆ. ಫೆ.7ರಂದು ನಡೆದ ಚುನಾವಣೆಯಲ್ಲಿ ಶೇ. 67.21ರಷ್ಟು ಮತದಾನವಾಗಿದೆ. ದೆಹಲಿಯಲ್ಲಿ ಆಪ್ ಸರ್ಕಾರ ರಚನೆ ಮಾಡಲಿದೆ ಎಂದು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ. ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ. [ದೆಹಲಿ ಚುನಾವಣೆ: ಚಾಣಕ್ಯ ವರದಿಯಲ್ಲಿ ಯಾರಿಗೆ ಬಹುಮತ?]
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications