ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳು : ರಾಜಪಥ್‌ನಲ್ಲಿ ಫ್ರಾನ್ಸ್ ಸೈನಿಕರ ತಾಲೀಮು

|
Google Oneindia Kannada News

ಬೆಂಗಳೂರು, ಜನವರಿ 18 : ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 67ನೇ ಗಣರಾಜ್ಯೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ರಾಜಪಥ್‌ನಲ್ಲಿ ವಿದೇಶಿ ಸೈನ್ಯವೊಂದು ಪರೇಡ್ ನಡೆಸಲಿದೆ.

ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಫ್ರಾನ್ಸ್ ಸೇನಾ ತುಕಡಿ ಇದೇ ಸಂದರ್ಭದಲ್ಲಿ ಜಂಟಿ ಸಮರಾಭ್ಯಾಸಕ್ಕಾಗಿ ಭಾರತಕ್ಕೆ ಆಗಮಿಸಲಿದ್ದು, ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. [ಗಣರಾಜ್ಯೋತ್ಸವ ಪರೇಡ್ ನಲ್ಲಿ ಮಹಿಳಾ ಶಕ್ತಿ ಅನಾವರಣ]

ಫ್ರಾನ್ಸ್‌ನ 35ನೇ ಸಶಸ್ತ್ರ ಪಡೆ ರಾಜಪಥ್‌ನಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. 56 ಯೋಧರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಪಡೆ ಹಲವಾರು ಯುದ್ಧಗಳಲ್ಲಿ ಪಾಲ್ಗೊಂಡಿದ್ದು, ಫ್ರಾನ್ಸ್‌ನ ಅತ್ಯಂತ ಹಳೆಯ ಸಶಸ್ತ್ರ ಪಡೆಯಾಗಿದೆ.

35ನೇ ಸಶಸ್ತ್ರ ಪಡೆಯ ಯೋಧರು ದೆಹಲಿಗೆ ಆಗಮಿಸಿದ್ದು, ಪಥಸಂಚಲನದ ತಾಲೀಮಿನಲ್ಲಿ ಪಾಲ್ಗೊಂಡಿದ್ದಾರೆ. ತಾಲೀಮಿನ ಚಿತ್ರಗಳು ಇಲ್ಲಿವೆ...[ಪಿಟಿಐ ಚಿತ್ರಗಳು]

ಗಣರಾಜ್ಯೋತ್ಸವಕ್ಕೆ ಸಿದ್ಧತೆ

ಗಣರಾಜ್ಯೋತ್ಸವಕ್ಕೆ ಸಿದ್ಧತೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 67ನೇ ಗಣರಾಜ್ಯೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೋಲ್ಯಾಂಡ್ ಅವರು ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿದೇಶಿ ಸೇನಾ ತುಕಡಿ ತಾಲೀಮು

ವಿದೇಶಿ ಸೇನಾ ತುಕಡಿ ತಾಲೀಮು

ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ರಾಜಪಥ್‌ನಲ್ಲಿ ವಿದೇಶಿ ಸೈನ್ಯ ಪರೇಡ್‌ನಲ್ಲಿ ಭಾಗವಹಿಸಲಿದೆ.

ರಾಜಪಥ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ ಫ್ರಾನ್ಸ್ ಯೋಧರು

ರಾಜಪಥ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ ಫ್ರಾನ್ಸ್ ಯೋಧರು

ಫ್ರಾನ್ಸ್ ಸೇನಾ ತುಕಡಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ರಾಜಪಥ್‌ನಲ್ಲಿ ಪಥಸಂಚಲನ ನಡೆಸಲಿದೆ. ಗಣರಾಜ್ಯೋತ್ಸವದ ನಂತರ ಭಾರತ ಮತ್ತು ಫ್ರಾನ್ಸ್ ಜಂಟಿ ಸಮರಾಭ್ಯಾಸ ನಡೆಯಲಿದೆ.

56 ಯೋಧರು ಹೆಜ್ಜೆ ಹಾಕಲಿದ್ದಾರೆ

56 ಯೋಧರು ಹೆಜ್ಜೆ ಹಾಕಲಿದ್ದಾರೆ

ಫ್ರಾನ್ಸ್‌ನ 35ನೇ ಸಶಸ್ತ್ರ ಪಡೆ ರಾಜಪಥ್‌ನಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದೆ. 56 ಯೋಧರು ಪರೇಡ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಪಡೆ ಹಲವಾರು ಯುದ್ಧಗಳಲ್ಲಿ ಪಾಲ್ಗೊಂಡಿದ್ದು, ಫ್ರಾನ್ಸ್‌ನ ಅತ್ಯಂತ ಹಳೆಯ ಸಶಸ್ತ್ರ ಪಡೆಯಾಗಿದೆ.

ಭಾರತವೂ ಪಾಲ್ಗೊಂಡಿತ್ತು

ಭಾರತವೂ ಪಾಲ್ಗೊಂಡಿತ್ತು

2009ರಲ್ಲಿ ಭಾರತದ ಸೇನೆ ಫ್ರಾನ್ಸ್‌ನಲ್ಲಿ ಇಂತಹ ಪಥಸಂಚಲನ ನಡೆಸಿತ್ತು. ಫ್ರೆಂಚ್ ಕ್ರಾಂತಿ ಆರಂಭವಾದ ನೆನಪಿನಲ್ಲಿ ನಡೆದ ಬ್ಯಾಸ್ಟಿಲೆ ಡೇ ಎಂಬ ಕಾರ್ಯಕ್ರಮದಲ್ಲಿ ಭಾರತದ ಅತಿ ಹಳೆಯ ರೆಜಿಮೆಂಟ್ ದಿ ಮರಾಠಾ ಲೈಟ್ ಇನ್‌ ಫೆಂಟ್ರಿಯು ಪಥಸಂಚಲನ ನಡೆಸಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಈ ಪರೇಡ್‌ಗೆ ಸಾಕ್ಷಿಯಾಗಿದ್ದರು.

English summary
French soldiers to participate in Republic Day parade on January 26, 2016 at Rajpath in New Delhi. President of France Francois Hollande chief guest at India's 67th Republic day. Here is a pictures of French soldiers march during a rehearsal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X