Daily Horoscope May 19: ಈ ರಾಶಿಯವರು ವೃತ್ತಿರಂಗದಲ್ಲಿ ತಾಳ್ಮೆ ವಹಿಸಿ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ

Horoscope May 19: ಮೇ 19ರ ಮಂಗಳವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ವಿವರ ಇಲ್ಲಿದೆ. ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಬರೆದ ದಿನ ಭವಿಷ್ಯ ಇದಾಗಿದೆ. ಮೇ 19ರ ದಿನ ಭವಿಷ್ಯ: 12 ರಾಶಿಗಳ ಇಂದಿನ ಫಲಾಫಲಗಳು ಹೇಗಿರುತ್ತವೆ. ಈ ದಿನ ನಿಮ್ಮ ಪರವಾಗಿದೆಯೋ ಅಥವಾ ವಿರುದ್ಧವಾಗಿದೆಯೋ ಎಂಬ ಮಾಹಿತಿ ಇಲ್ಲಿದೆ.

ದ್ವಾದಶ ರಾಶಿಗಳ ಭವಿಷ್ಯ ಹೀಗಿದೆ

ಮೇಷ ರಾಶಿ:

ಇಂದು ನೀವು ಮಾನಸಿಕವಾಗಿ ಚೈತನ್ಯಶೀಲರಾಗಿರಬಹುದು. ಆದರೆ, ಯಾವುದೇ ವಿಚಾರವಿರಲಿ ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನೀವಾಡುವ ಮಾತು ಕೆಲಸ, ಹಣಕಾಸು ಅಥವಾ ಭವಿಷ್ಯದ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಬಹಿರಂಗಪಡಿಸಬಹುದು, ತಾಳ್ಮೆಯಿಂದಿರಿ.

Horoscope May 19

ವೃಷಭ ರಾಶಿ:

ದೃಢನಿಶ್ಚಯ ತೆಗೆದುಕೊಳ್ಳುವಿರಿ. ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಸಾಧ್ಯವಾಗುವುದು. ಆರ್ಥಿಕ ಸ್ಥಿರತೆ, ವೈಯಕ್ತಿಕ ಗುರಿಗಳನ್ನು ಸಾಧಿಸುವುದು ಸಹಾಯವಾಗುವುದು. ಸ್ಥಿರ ಪ್ರಯತ್ನವು ಅರ್ಥಪೂರ್ಣ ಪ್ರಗತಿಯಾಗುವುದು.

Daily Horoscope May 18: ಮುಕ್ತ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ, ಇಂದಿನ 12 ರಾಶಿ ಭವಿಷ್ಯ
Daily Horoscope May 18: ಮುಕ್ತ ಮಾತುಕತೆಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ, ಇಂದಿನ 12 ರಾಶಿ ಭವಿಷ್ಯ

ಮಿಥುನ ರಾಶಿ:

ಮನಸ್ಸು ಸಕ್ರಿಯವಾಗಿರುವುದು. ಪ್ರಮುಖ ಸಂಭಾಷಣೆಗಳು ಅಥವಾ ಹೊಸ ವಿಚಾರಗಳು ಪರಿಸ್ಥಿತಿಯನ್ನು ವಿಭಿನ್ನವಾಗಿ ನೋಡಲು ಸಹಾಯ ಮಾಡುವುದು. ಆದ್ಯತೆಯ ಮೇರೆಗೆ ನಿಮ್ಮ ಕೆಲಸಗಳನ್ನು ಮುಗಿಸಿ.

ಕರ್ಕಾಟಕ ರಾಶಿ:

ಕೆಲವು ಸನ್ನಿವೇಶಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು. ಒತ್ತಡದಿಂದ ಮುಕ್ತರಾಗುವಿರಿ. ಹೊಸ ಜವಾಬ್ದಾರಿ ಸಿಗುವುದು. ಹಣಕಾಸಿನ ಲಾಭವಾಗುವುದು.

ಸಿಂಹ ರಾಶಿ:

ವೃತ್ತಿ ವಿಷಯಗಳಲ್ಲಿ ತಾಳ್ಮೆ ಮತ್ತು ಶಿಸ್ತು ಅಗತ್ಯವಾಗಬಹುದು. ಅನಗತ್ಯ ಮಾತುಕತೆ ಸಮಸ್ಯೆಯನ್ನು ಹುಟ್ಟಿಹಾಕಬಹುದು. ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ. ಮಾತನಾಡುವಾಗ ಎಚ್ಚರಿಕೆ ಅಗತ್ಯ.

ಕನ್ಯಾರಾಶಿ:

ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಆತುರದ ತೀರ್ಮಾನ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಬಹುದು. ಸಂಬಂಧಗಳು ಗಟ್ಟಿಯಾಗಬಹುದು.

ತುಲಾ ರಾಶಿ:

ಪ್ರಾಮಾಣಿಕ ಸಂಭಾಷಣೆಗಳು ಭಾವನಾತ್ಮಕ ಗೊಂದಲವನ್ನು ನಿವಾರಿಸಲು ಸಹಾಯವಾಗುವುದು. ಹೊಸ ಜನರ ಪರಿಚಯವಾಗುವುದು. ಖರ್ಚುಗಳಿಗೆ ಕಡಿವಾಣ ಬೀಳುವುದು. ಮನದ ಆಸೆ ಈಡೇರುವುದು.

ವೃಶ್ಚಿಕ ರಾಶಿ:

ಆರೋಗ್ಯದ ಬಗ್ಗೆ ಎಚ್ಚರ ಅಗತ್ಯ. ಒತ್ತಡ ಹೆಚ್ಚಾಗುವುದು. ಎಲ್ಲಾ ಪರಿಸ್ಥಿತಿಯಲ್ಲಿಯೂ ಶಾಂತವಾಗಿರಿ. ಖರ್ಚು ವೆಚ್ಚಗಳ ಬಗ್ಗೆ ಎಚ್ಚರ ಇರಲಿ.

ಧನು ರಾಶಿ:

ಅನಿರೀಕ್ಷಿತವಾಗಿ ಹೊಸ ಅವಕಾಶಗಳು ಸಿಗಬಹುದು. ಮುಕ್ತ ಮನಸ್ಸಿನಿಂದ ಮಾತನಾಡಿ. ನಿಮ್ಮ ಮಾತಿನ ಪರಿಣಾಮ ದೀರ್ಘಾವಧಿಯವರೆಗೆ ಇರುವುದು. ಮುಂದಿನ ಪರಿಣಾಮಗಳನ್ನು ಯೋಚಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಮಕರ ರಾಶಿ:

​​ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಂತಸ ಇರುವುದು. ಹೊಸ ಜವಾಬ್ದಾರಿ ಸಿಗುವುದು. ಕೆಲಸ ಕಾರ್ಯಗಳಲ್ಲಿ ಪ್ರಗತಿಯಾಗುವುದು. ಸ್ನೇಹಿತರ ಬೆಂಬಲ ಸಿಗುವುದು.

ಕುಂಭ ರಾಶಿ:

ವಿದ್ಯಾರ್ಥಿಗಳಿಗೆ ದಿನ ಶುಭವಾಗಿರುವುದು. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ಹಣಕಾಸಿನ ಸಮಸ್ಯೆಯೂ ನಿವಾರಣೆಯಾಗುವುದು. ನಿಮ್ಮ ಗುರಿಗಳನ್ನು ಸಾಧಿಸುವತ್ತ ಹೆಜ್ಜೆ ಇಡುವಿರಿ.

ಮೀನ ರಾಶಿ:

ಇಂದು ನಿಮ್ಮ ಅಂತಃಪ್ರಜ್ಞೆ ಪ್ರಬಲವಾಗಿರುವುದು. ಆದರೆ ಪ್ರಾಯೋಗಿಕ ಚಿಂತನೆಯು ಅಷ್ಟೇ ಮುಖ್ಯವಾಗಿದೆ. ಗಂಭೀರ ಸಂದರ್ಭಗಳಲ್ಲಿ ಭಾವನಾತ್ಮಕ ಸ್ಪಷ್ಟತೆ, ಚಿಂತನಶೀಲ ಸಂವಹನ ಮುಖ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+