ದೆಹಲಿ ಕೊರೊನಾ ಕತೆ: ರ‍್ಯಾಪಿಡ್ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್, RT-PCRನಲ್ಲಿ ಪಾಸಿಟಿವ್

ನವದೆಹಲಿ, ಡಿಸೆಂಬರ್ 07: ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ವಾಯುಮಾಲಿನ್ಯ, ಹಬ್ಬಗಳ ಆಚರಣೆಯಿಂದಾಗಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ.

ಇದೀಗ ದೆಹಲಿಯಲ್ಲಿ ಶೇ.11ರಷ್ಟು ಕೊರೊನಾ ಸೋಂಕಿತರಿಗೆ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದ್ದರೂ ಆರ್‌ಟಿ ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಆತಂಕ ಹೆಚ್ಚಿದೆ.

ಸೆಪ್ಟೆಂಬರ್ 1 ರಿಂದ ನವೆಂಬರ್ 7ರವರೆಗೆ ನಡೆದ ಆರ್‌ಪಿಸಿಆರ್ ಹಾಗೂ ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯ ಕುರಿತು ಸಮೀಕ್ಷೆ ನಡೆಸಲಾಗಿದೆ.

ಎಷ್ಟು ಮಂದಿಗೆ ರ‍್ಯಾಪಿಡ್ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು

ಎಷ್ಟು ಮಂದಿಗೆ ರ‍್ಯಾಪಿಡ್ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು

56,862 ಮಂದಿ ಕೊರೊನಾ ಲಕ್ಷಣ ಇರುವವರು ರ‍್ಯಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. 32,903 ಮಂದಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಲಾಗಿದ್ದು ಅದರಲ್ಲಿ 3524 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆರ್‌ಟಿಐ ಮೂಲಕ ಈ ಮಾಹಿತಿ ಲಭ್ಯವಾಗಿದೆ.

ರ‍್ಯಾಪಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದರೂ RT-PCR ಪರೀಕ್ಷೆ ಕಡ್ಡಾಯ

ರ‍್ಯಾಪಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದರೂ RT-PCR ಪರೀಕ್ಷೆ ಕಡ್ಡಾಯ

ಕೊರೊನಾ ಲಕ್ಷಣವಿರುವವರು ರ‍್ಯಾಪಿಡ್ ಟೆಸ್ಟ್‌ನಲ್ಲಿ ಒಂದೊಮ್ಮೆ ನೆಗೆಟಿವ್ ಬಂದರೂ ಆರ್‌ಟಿ ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ದೆಹಲಿಯಲ್ಲಿ RT-PCRನಲ್ಲಿ ಶೇ.20.97ರಷ್ಟು ಪಾಸಿಟಿವ್

ದೆಹಲಿಯಲ್ಲಿ RT-PCRನಲ್ಲಿ ಶೇ.20.97ರಷ್ಟು ಪಾಸಿಟಿವ್

ದೆಹಲಿಯಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಶೇ.20.97ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ರ‍್ಯಾಪಿಡ್ ಟೆಸ್ಟ್‌ ಮಾಡಿದವರಲ್ಲಿ ಶೇ.4.77 ಮಂದಿಗೆ ಮಾತ್ರ ಕೊರೊನಾ ಪಾಸಿಟಿವ್ ಬಂದಿದೆ.

ಅಕ್ಟೋಬರ್‌ನಲ್ಲಿ ದೆಹಲಿ ಪರಿಸ್ಥಿತಿ ಹೇಗಿತ್ತು?

ಅಕ್ಟೋಬರ್‌ನಲ್ಲಿ ದೆಹಲಿ ಪರಿಸ್ಥಿತಿ ಹೇಗಿತ್ತು?

ಅಕ್ಟೋಬರ್ ತಿಂಗಳಲ್ಲಿ ಶೇ.16.76ರಷ್ಟು ರ‍್ಯಾಪಿಡ್ ಟೆಸ್ಟ್‌ ನಡೆದಿತ್ತು. ಶೇ.4.58ರಷ್ಟು ಆರ್‌ಟಿಪಿಸಿಆರ್ ಪರೀಕ್ಷೆ ನಡೆದಿತ್ತು. ನವೆಂಬರ್ 1 ರಿಂದ 7ರವರೆಗೆ ರ‍್ಯಾಪಿಡ್ ಟೆಸ್ಟ್‌ ಪಾಸಿಟಿವಿಟಿ ಪ್ರಮಾಣ ಶೇ.8.6 ಹಾಗೂ ಆರ್‌ಟಿಪಿಸಿಆರ್ ಪರೀಕ್ಷೆ ಪ್ರಮಾಣ ಶೇ.27.2ರಷ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+