ದೆಹಲಿಯಲ್ಲಿ ಹೆಚ್ಚುತ್ತಿರುವ ಶೀತ ಗಾಳಿ; ಆರೆಂಜ್ ಅಲರ್ಟ್ ಘೋಷಣೆ
ನವದೆಹಲಿ, ಡಿಸೆಂಬರ್ 18; ದೇಶದ ರಾಜಧಾನಿ ದೆಹಲಿಯಲ್ಲಿ ಚಳಿ, ಶೀತ ಗಾಳಿ ಹೆಚ್ಚಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಡಿ.17ರ ಗುರುವಾರ ಈ ಋತುವಿನ ಕನಿಷ್ಠ ತಾಪಮಾನ ದಾಖಲಾಗಿದೆ. ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಕಡು ಚಳಿ, ಶೀತದ ಅನುಭವವಾಗಿದೆ. ಶುಕ್ರವಾರವೂ ಕನಿಷ್ಠ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ ಇದ್ದು, ಪಾಲಂ ಹವಾಮಾನ ಕೇಂದ್ರದಲ್ಲಿ 3.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಶನಿವಾರವೂ ದೆಹಲಿಯಲ್ಲಿ ಇದೇ ವಾತಾವರಣ ಮುಂದುವರೆಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಸೋಮವಾರದವರೆಗೂ ಚಳಿ, ಶೀತ ಗಾಳಿ ಹೆಚ್ಚಾಗಲಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಪಶ್ಚಿಮ ಹಿಮಾಲಯದಲ್ಲಿ ಅತಿಯಾದ ಹಿಮಪಾತವಾಗುತ್ತಿರುವುದಾಗಿ ಇಲಾಖೆ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾರೆ. ದೆಹಲಿಯ ಎನ್ ಸಿ ಆರ್ ಪ್ರದೇಶಗಳಾದ ಚಾಣಕ್ಯಪರಿ, ಡೆಲ್ಲಿ ಕೆಂಟ್ ಪ್ರದೇಶಗಳಲ್ಲಿ ಚಳಿತ ತೀವ್ರತೆ ಹೆಚ್ಚಿದ್ದು, ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಗೆ ಜಾರಿರುವುದಾಗಿ ಇಲಾಖೆ ತಿಳಿಸಿದೆ.

ಡಿಸೆಂಬರ್ ನಲ್ಲಿ, ಕ್ರಿಸ್ ಮಸ್ ಸಮೀಪಿಸುತ್ತಿದ್ದಂತೆ ದೆಹಲಿಯಲ್ಲಿ ಚಳಿಗಾಳಿ, ಶೀತ ಪ್ರಮಾಣ ಹೆಚ್ಚಾಗುತ್ತದೆ. ಈ ಬಾರಿಯೂ ಚಳಿಗಾಳಿಯಿದ್ದು, ಸದ್ಯಕ್ಕೆ ರಾಜಧಾನಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.












Click it and Unblock the Notifications