Get Updates
Get notified of breaking news, exclusive insights, and must-see stories!

ನಾನು ಪಾಕ್ ನ ISI ಏಜೆಂಟ್, ಆದ್ರೆ ಭಾರತದಲ್ಲಿರೋಕೆ ಇಷ್ಟ!

ನಾನು ಪಾಕ್ ನ ISI ಏಜೆಂಟ್, ಆದ್ರೆ ಭಾರತದಲ್ಲಿರೋಕೆ ಇಷ್ಟ! ಎಂದು ವ್ಯಕ್ತಿಯೊಬ್ಬಏರ್ ಪೋರ್ಟ್ ಸಿಬ್ಬಂದಿಯ ಬಳಿ ಅಲವತ್ತುಗೊಂಡ ಘಟನೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ನವದೆಹಲಿ, ಏಪ್ರಿಲ್ 29: ನಾನು ಪಾಕಿಸ್ತಾನದ ISI ಏಜೆಂಟ್, ಆದ್ರೆ ನಂಗೆ ಅಲ್ಲಿ ಮುಂದುವರಿಯೋಕೆ ಇಷ್ಟ ಇಲ್ಲ. ಅದಕ್ಕೇ ಭಾರತಕ್ಕೆ ಬಂದಿದೀನಿ ಎಂದು ವ್ಯಕ್ತಿಯೊಬ್ಬಏರ್ ಪೋರ್ಟ್ ಸಿಬ್ಬಂದಿಯ ಬಳಿ ಅಲವತ್ತುಗೊಂಡ ಘಟನೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಮೊಹ್ಮದ್ ಅಹ್ಮದ್ ಶೇಖ್ ಮೊಹ್ಮದ್ ರಫಿಕ್ ಎಂಬ ಪಾಕಿಸ್ತಾನಿ ಪಾಸ್ ಪೋರ್ಟ್ ಹೊಂದಿದ್ದ ವ್ಯಕ್ತೊಯೊಬ್ಬ ದುಬೈನಿಂದ ಹೊರಟು ದೆಹಲಿಗೆ ಬಂದಿದ್ದ.

ದೆಹಲಿಗೆ ಬಂದಿಳಿದವನೇ ಇಲ್ಲಿನ ಇನ್ಫರ್ಮೇಶನ್ ಡೆಸ್ಕ್ ನಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರ ಬಳಿ, ನಾನು ನಿಮ್ಮ ಬಳಿ ಪಾಕಿಸ್ತಾನದ ಗೂಢಾಚಾರ ದಳದ ಕುರಿತು ಮಾಹಿತಿ ಹಂಚಿಕೊಳ್ಳಬೇಕು, ನಾನು ಪಾಕಿಸ್ತಾನದ ISI ಏಜೆಂಟ್ ಎಂದು ಪರಿಚಯಿಸಿಕೊಂಡು, ಸಿಬ್ಬಂದಿ ಆತಂಕಗೊಳ್ಳುವಂತೆ ಮಾಡಿದ್ದಾನೆ. ಈ ಬಗ್ಗೆ ತಕ್ಷಣವೇ ಸಿಬ್ಬಂದಿ ಮೇಲಧಿಕಾರಿಗಳಿಗೆ, ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.[ನಮ್ಮ ವಿಮಾನ ಹೈಜಾಕ್ ಆಗಿದೆ, ಮೋದೀಜಿ, ಕಾಪಾಡಿ!]

I am an ISI agent: a man in Delhi airport tells

ಏರ್ ಪೋರ್ಟ್ ಅಧಿಕಾರಿಗಳು ಆತನನ್ನು ಕೇಂದ್ರ ತನಿಖಾ ದಳದ ವಶಕ್ಕೆ ಒಪ್ಪಿಸಿದ್ದಾರೆ. ದುಬೈನಿಂದ ಭಾರತಕ್ಕೆ ಬಂದು ಇಲ್ಲಿಂದ ಕಟ್ಮಂಡುವಿಗೆ ಹೋಗಬೇಕಿದ್ದ ಈತ ತನ್ನ ಪ್ರಯಾಣವನ್ನು ಭಾರತದದಲ್ಲೇ ನಿಲ್ಲಿಸಿದ್ದಾನೆ. ಇಲ್ಲಿಯೇ ಉಳಿಯುವುದಾಗಿ ಹೇಳಿಕೊಂಡಿದ್ದಾನೆ. ಸದ್ಯಕ್ಕೆ ಆತನನ್ನು ಕೇಂದ್ರ ತನಿಖಾ ದಳ ವಿಚಾರಣೆಗೊಳಪಡಿಸುತ್ತಿದ್ದು, ಆತನ ಹಿನ್ನೆಲೆಯ ಸತ್ಯಾಸತ್ಯತೆಯನ್ನು ಪತ್ತೆ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+