ಮೊದಲು ರೋಗಿಗಳಿಗೆ ಆಮ್ಲಜನಕ ನೀಡಿ, ಕೈಗಾರಿಕೆಗಳಿಗಲ್ಲ: ಕೇಂದ್ರಕ್ಕೆ ಹೈಕೋರ್ಟ್ ತರಾಟೆ
ನವದೆಹಲಿ, ಏಪ್ರಿಲ್ 20: ಕೋವಿಡ್ ವಿರುದ್ಧದ ದೆಹಲಿಯ ಹೋರಾಟಕ್ಕೆ ಆಕ್ಸಿಜನ್ ಕೊರತೆ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿನ ತಾರತಮ್ಯ ಕಾರಣ ಎಂಬ ಆರೋಪಗಳನ್ನು ಪರಿಗಣಿಸಿರುವ ದೆಹಲಿ ಹೈಕೋರ್ಟ್, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಔಷಧಗಳನ್ನು ನಿಜಕ್ಕೂ ತೀರಾ ಅಗತ್ಯ ಇರುವವರಿಗೆ ತಲುಪಿಸದೆ ಇದ್ದರೆ ಅವರ ಕೈಗೆ ರಕ್ತ ಅಂಟಿಕೊಳ್ಳಲಿದೆ ಎಂದು ಕೋರ್ಟ್ ಹೇಳಿದೆ.
ದೆಹಲಿಯಲ್ಲಿ ಸೋಮವಾರ ಒಂದೇ ದಿನ 32 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ರಾಜಧಾನಿಯಲ್ಲಿ ಆಮ್ಲಜನಕ, ಔಷಧಗಳು, ಲಸಿಕೆ ಡೋಸ್‌ಗಳು ಮತ್ತು ಹಾಸಿಗೆಗಳ ಕೊರತೆ ಬಿಕ್ಕಟ್ಟು ಹೆಚ್ಚಲು ಕಾರಣವಾಗುತ್ತಿವೆ ಎಂದು ಹೈಕೋರ್ಟ್‌ಗೆ ದೆಹಲಿ ಸರ್ಕಾರ ತಿಳಿಸಿದೆ.
ಪೆಟ್ರೋಲಿಯಂ ಮತ್ತು ಸ್ಟೀಲ್‌ನಂತಹ ಕೈಗಾರಿಕೆಗಳಿಗೆ ಬಳಸುತ್ತಿರುವ ಆಕ್ಸಿಜನ್ ಪ್ರಮಾಣವನ್ನು ಕಡಿತಗೊಳಿಸುವ ಮೂಲಕ ಕೋವಿಡ್ ರೋಗಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 'ಮನುಷ್ಯದ ಜೀವಕ್ಕಿಂತ ಆರ್ಥಿಕ ಹಿತಾಸಕ್ತಿ ಎಂದಿಗೂ ಮುಖ್ಯವಾಗದು. ಇಲ್ಲದೆ ಹೋದರೆ, ನಾವು ವಿನಾಶದತ್ತ ಸಾಗುತ್ತೇವೆ' ಎಂದು ಕೋರ್ಟ್ ತೀಕ್ಷ್ಣವಾಗಿ ಹೇಳಿತು.

'130 ಕೋಟಿ ಜನಸಂಖ್ಯೆಯಲ್ಲಿ 2 ಕೋಟಿಗಿಂತಲೂ ಕಡಿಮೆ ಅಧಿಕೃತ ಪ್ರಕರಣಗಳಿವೆ. ಅದು ಐದು ಪಟ್ಟು ಜಾಸ್ತಿಯಾದರೂ 10 ಕೋಟಿ ಪ್ರಕರಣಗಳಾಗುತ್ತವೆಯಷ್ಟೇ. ನಾವು ಉಳಿದ ಜನರನ್ನು ಕಾಪಾಡಬೇಕು. ಈ ಪ್ರಮಾಣದಲ್ಲಿ ನಾವು ಒಂದು ಕೋಟಿ ಜನರನ್ನು ಕಳೆದುಕೊಳ್ಳಬಹುದು. ನಾವು ವೇಗವಾಗಿ ಕೆಲಸ ಮಾಡಬೇಕು' ಎಂದು ಸರ್ಕಾರಕ್ಕೆ ಸಲಹೆ ನೀಡಿತು.
'ನಾವು ಇಲ್ಲಿ ಸರ್ಕಾರ ನಡೆಸಲು ಇಲ್ಲ. ಆದರೆ ಪರಿಸ್ಥಿತಿಯ ಕುರಿತು ನಿಮ್ಮಲ್ಲಿ ಸಂವೇದನೆ ಇರಬೇಕು. ಔಷಧಗಳ ಲಭ್ಯತೆ ಇದ್ದರೂ ಅದನ್ನು ಎಲ್ಲಿ ಔಷಧದ ಅಗತ್ಯವಿದೆಯೋ ಅಲ್ಲಿಗೆ ಕಳುಹಿಸದೆ ಬೇರೆಡೆ ರವಾನಿಸಲಾಗುತ್ತಿದೆ. ಖಂಡಿತವಾಗಿಯೂ ಅವರ ಕೈಗೆ ರಕ್ತ ಅಂಟಿಕೊಂಡಿದೆ' ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
'ಕೈಗಾರಿಕೆಗಳು ಬೇಕಾದರೆ ಕಾಯಬಹುದು, ಆದರೆ ರೋಗಿಗಳಲ್ಲ. ಮನುಷ್ಯರ ಜೀವಗಳು ಅಪಾಯದಲ್ಲಿದೆ' ಎಂದು ಕೋರ್ಟ್ ಕಿಡಿಕಾರಿತು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications