ಏಕೆ ಕೋವಿಡ್ ಬೂಸ್ಟರ್ ಬೇಡ?: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನೆ
ನವದೆಹಲಿ, ನವೆಂಬರ್ 26: ಕೋವಿಡ್ 19 ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ನೀಡುವ ನಿರ್ಧಾರವು ಆರ್ಥಿಕತೆಯನ್ನು ಆಧರಿಸಿರಬಾರದು ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಈ ಕುರಿತು ನ್ಯಾಯಾಲಯಕ್ಕೆ ತನ್ನ ನಿಲುವನ್ನು ತಿಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗಿದೆ. ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ಇಂತಹ ಇನಾಕ್ಯುಲೇಷನ್‌ಗೆ ಅನುಮತಿ ನೀಡಿ ಪ್ರೋತ್ಸಾಹ ನೀಡುತ್ತಿರುವಾಗ ಭಾರತದಲ್ಲಿ ಕ್ಷೀಣಿಸುತ್ತಿರುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ಬೂಸ್ಟರ್ ಡೋಸ್‌ಗಳನ್ನು ನೀಡಲು ಏಕೆ ಹಿಂಜರಿಕೆ ಎಂದು ಪ್ರಶ್ನಿಸಿದೆ.
ನ್ಯಾ. ವಿಪಿನ್ ಸಂಘಿ ಹಾಗೂ ಜಸ್ಮೀತ್ ಸಿಂಗ್ ಅವರ ವಿಭಾಗೀಯ ಪೀಠವು ಮಾಧ್ಯಮ ವರದಿಗಳನ್ನಾಧರಿಸಿ ಬೂಸ್ಟರ್‌ಡೋಸ್‌ಗಳು ಹಾಗೂ ಅದರ ಪರಿಣಾಮಕಾರಿತ್ವದ ಬಗ್ಗೆ ವೈದ್ಯರ ಅಭಿಪ್ರಾಯವನ್ನು ಕೂಡ ಗಮನಿಸಿದೆ.

ಬೂಸ್ಟರ್ ಡೋಸ್‌ಗಳನ್ನು ನೀಡುವುದರಿಂದ ಕೊರೊನಾ ಸೋಂಕಿನಿಂದ ದೂರ ಉಳಿಯವಹುದು ಎಂತಾದರೆ ಕೇವಲ ಆರ್ಥಿಕತೆ ದೃಷ್ಟಿಯಿಂದ ನೋಡದೆ ಸರ್ಕಾರವು ಜನರಿಗೆ ಈ ಡೋಸ್‌ಗಳನ್ನು ನೀಡಬೇಕಾಗಿದೆ.
ಹಲವು ರೋಗಗಳಿಂದ ಬಳಲುತ್ತಿರುವವರು, ವಯಸ್ಸಾದವರಿಗೆ ಈ ಬೂಸ್ಟರ್ ಡೋಸ್‌ನ ಅಗತ್ಯವಿದೆ ಹೀಗಾಗಿ ಇದಕ್ಕೆ ಅನುಮತಿ ನೀಡಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇಲ್ಲಿಯವರೆಗೆ ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮೂರನೇ ಡೋಸ್ ಅಂದರೆ (ಬೂಸ್ಟರ್ ಡೋಸ್) ಲಸಿಕೆ ಬೇಕಾಗಿಲ್ಲ ಎಂದು ದೆಹಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್)ನ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಇದೀಗ ದೇಶಾದ್ಯಂಭಾತ ನಡೆಯುತ್ತಿರುವ ಕೊರೊನಾ ಲಸಿಕೆ ಅಭಿಯಾನವನ್ನು ಶ್ಲಾಘಿಸಿದ ಅವರು, ಭಾರತ ಕೊವಿಡ್ 19 ಲಸಿಕೆ ಉತ್ಪಾದನೆಯಲ್ಲಿ ಮೈಲಿಗಲ್ಲು ಸ್ಥಾಪಿಸಿದೆ. ಲಸಿಕೆ ಡೋಸ್‌ಗಳನ್ನು ಆಮದು ಮಾಡಿಕೊಳ್ಳುವುದರಿಂದ ಹಿಡಿದು, ಇತರ ದೇಶಗಳಿಗೆ ರಫ್ತು ಮಾಡಿ, ಸಹಾಯ ಮಾಡುವಲ್ಲಿ ತುಂಬ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ. ಸದ್ಯದವರೆಗೆ ಮೂರನೇ ಡೋಸ್ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೊವಿಡ್ 19 ಪ್ರಕರಣಗಳಲ್ಲಿ ಈಗೇನೂ ಏರಿಕೆಯಾಗುತ್ತಿಲ್ಲ. ಹೀಗಾಗಿ ದೇಶದಲ್ಲಿ ಜನರಿಗೆ ಮತ್ತೆ ಬೂಸ್ಟರ್ ಡೋಸ್ ನೀಡುವ ಪರಿಸ್ಥಿತಿಯಿಲ್ಲ ಎಂದಿದ್ದಾರೆ. ಮೊದಲ ದೇಶೀಯ ಕೊವಿಡ್ 19 ಲಸಿಕೆ ಕೊವ್ಯಾಕ್ಸಿನ್ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳ ಅನುಭವಗಳನ್ನೊಳಗೊಂಡ ಗೋಯಿಂಗ್ ವೈರಲ್ ಎಂಬ ಶೀರ್ಷಿಕೆಯ ಈ ಪುಸ್ತಕವನ್ನು ಪ್ರೊ.ಬಲರಾಮ್ ಭಾರ್ಗವ್ ಬರೆದಿದ್ದಾರೆ.
ಭಾರತಕ್ಕೆ ಎಚ್1ಎನ್1 ಸೋಂಕು ಕಾಲಿಟ್ಟಾಗ ವಿದೇಶಗಳಿಂದ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಯಿತು. ಅಂದು ಲಸಿಕೆ ಆಮದು ಮಾಡಿಕೊಳ್ಳುತ್ತಿರುವ ಕಾಲದಿಂದ, ಈಗ ವ್ಯಾಕ್ಸಿನ್ ಉತ್ಪಾದನೆ ಮಾಡುವಷ್ಟು ಮುಂದುವರಿದಿದ್ದೇವೆ.
ಸಾಗಿ ಬಂದ ಹಾದಿ ದೊಡ್ಡದಿದೆ. ಈಗ ನಮ್ಮಲ್ಲಿ ತಯಾರಾದ ಕೊರೊನಾ ಲಸಿಕೆ ಬೇರೆ ದೇಶಗಳಿಗೆ ರಫ್ತಾಗುವುದು ತುಂಬ ಸಂತೋಷದ ವಿಚಾರ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ವೈರಸ್ ಇನ್ನೂ ಕಡಿಮೆಯಾಗಿಲ್ಲ. ಬರುಬರುತ್ತ ಇದು ಸ್ಥಳೀಯ ಮಟ್ಟಕ್ಕೆ ವ್ಯಾಪಿಸಬಹುದು. ಹಾಗಾಗಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನೂ ಮರೆಯುವಂತಿಲ್ಲ ಎಂದು ಪೌಲ್ ಎಚ್ಚರಿಕೆ ನೀಡಿದ್ದಾರೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್, ಭಾರತದಲ್ಲಿ ಮೂರನೇ ಡೋಸ್ ಕೊರೊನಾ ಲಸಿಕೆ ಅಗತ್ಯ ಇದೆಯಾ ಎಂಬ ಬಗ್ಗೆ ಮಾತನಾಡಿ ವೈಜ್ಞಾನಿಕ ಸಂಶೋಧನೆ ನಡೆಯುತ್ತಿದೆ. ಅದರ ವರದಿಯ ಆಧಾರಮೇಲೆ ಬೂಸ್ಟರ್ ಡೋಸ್ ಕೊಡಬೇಕಾ ಬೇಡವಾ ಎಂಬುದು ನಿರ್ಧರಿತವಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications