ತಂಬಾಕು ಪ್ಯಾಕ್ ಮೇಲೆ ಹೊಸ ಎಚ್ಚರಿಕೆ ಮುದ್ರಣಕ್ಕೆ ಸರ್ಕಾರ ಆದೇಶ

ದೆಹಲಿ, ಮೇ 4: ತಂಬಾಕು ಪ್ಯಾಕ್ ಮೇಲಿನ ಎಚ್ಚರಿಕೆ ಸಂದೇಶದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಎಲ್ಲ ತಂಬಾಕು ಮೇಲಿನ ಪ್ಯಾಕ್‌ಗಳನ್ನು ಹೊಸದಾಗಿ ಮುದ್ರಿಸಬೇಕು ಮತ್ತು ಅದರ ಮೇಲಿನ ಸಂದೇಶ ಬದಲಿಸಬೇಕು ಎಂದು ಸೂಚನೆ ನೀಡಿದೆ.

ಈ ಹಿಂದೆ ತಂಬಾಕು ಪ್ಯಾಕ್ ಮೇಲೆ 'tobacco causes cancer' ಎಂದು ಬರಹ ಮುದ್ರಣವಾಗಿತ್ತು. ಇನ್ಮುಂದೆ 'tobacco causes painful death' ಎಂದು ಮುದ್ರಣವಾಗಲಿದೆ.

ಹೊಸದಾಗಿ ಮಾಡಿರುವ ಆದೇಶ ಸೆಪ್ಟೆಂಬರ್ 1, 2020 ರಿಂದ ಜಾರಿಯಾಗಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ತಿದ್ದುಪಡಿ ನಿಯಮಗಳು, 2020ರಲ್ಲಿ ಸರ್ಕಾರ ತಿದ್ದುಪಡಿ ಮಾಡಿದೆ ಸೆಪ್ಟೆಂಬರ್‌ನಿಂದ ಹೊಸ ತಿದ್ದುಪಡಿಯಂತೆ ಪ್ಯಾಕಿಂಗ್ ಆಗಬೇಕಿದೆ.

ಕೇಂದ್ರ ಆರೋಗ್ಯ ಇಲಾಖೆ ಹೊಸದಾಗಿ ಸೂಚಿಸಿರುವ ಪ್ರಮುಖ ಅಂಶಗಳು ಈ ಕೆಳಕಂಡತಿವೆ:

New Health Warnings On Tobacco Packs

* ತಂಬಾಕು ಉತ್ಪನ್ನಗಳ ಮೇಲಿನ ಮೊದಲ ಚಿತ್ರವು ಸೆಪ್ಟೆಂಬರ್ 1, 2020 ರಿಂದ ಪ್ರಾರಂಭವಾದ ನಂತರ 12 ತಿಂಗಳ ಅವಧಿಗೆ ಮಾನ್ಯವಾಗಿರುತ್ತದೆ.

* ತಂಬಾಕು ಉತ್ಪನ್ನಗಳ ಮೇಲಿನ ಮೊದಲ ಚಿತ್ರದ ನಿರ್ದಿಷ್ಟ ಅವಧಿ ಮುಗಿದ ನಂತರ ಎರಡನೇ ಚಿತ್ರವು ಜಾರಿಗೆ ಬರಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸರ್ಕಾರದ ನಿಬಂಧನೆಯ ಉಲ್ಲಂಘನೆಯೂ ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು ಎಂದು ಅಧಿಸೂಚನೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+