ಅವರು ಕಮಲ್ ನಾಥ್ ಅಲ್ಲ, ಕಮಿಷನ್ ನಾಥ್: ಸಂಬಿತ್ ಪಾತ್ರ
ನವದೆಹಲಿ, ನವೆಂಬರ್ 23: "ಅವರು ಕಮಲ್ ನಾಥ್ ಅಲ್ಲ, ಕಮಿಷನ್ ನಾಥ್" ಹಾಗಂತ ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರನ್ನು ಲೇವಡಿ ಮಾಡಿದ್ದಾರೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರ.
"ಕಮಲ್ ನಾಥ್ ಅವರಿಗೆ ಈ ವೇದಿಕೆಯಲ್ಲೇ ನಾವು ಹೊಸ ನಾಮಕರಣ ಮಾಡುತ್ತಿದ್ದೇವೆ. ಅವರು ಇನ್ನು ಮೇಲೆ ಕಮಲ್ ನಾಥ್ ಅಲ್ಲ, ಕಮಿಷನ್ ನಾಥ್" ಎಂದು ಪಾತ್ರ ಅಣುಕಿಸಿದರು.
ಇತ್ತೀಚೆಗಷ್ಟೇ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.90 ರಷ್ಟು ಮುಸ್ಲಿಮರು ಮತದಾನ ಮಾಡದೆ ಇದ್ದರೆ ಕಾಂಗ್ರೆಸ್ ಖಂಡಿತ ಅಧಿಕಾರಕ್ಕೆ ಬರುವುದಿಲ್ಲ ಎಂಬ ಹೇಳಿಕೆ ನೀಡಿದ್ದ ಕಮಲ್ ನಾಥ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಮುಸ್ಲಿಮರ ವೋಟು ಎಲ್ಲಿದೆ ಎಂಬುದು ನಿಮಗೆ ಗೊತ್ತು. ಆ ಮತಗಳು ಚಲಾವಣೆಯಾಗುತ್ತವೆ ಎಂಬುದನ್ನು ನೀವು ನೋಡಿಕೊಳ್ಳಬೇಕು ಎಂದು ಗೌಪ್ಯ ಸಭೆಯೊಂದರಲ್ಲಿ ಕಮಲ್ ನಾಥ್ ಅವರು ಮಾತನಾಡುತ್ತಿದ್ದ ವಿಡಿಯೋವೊಂದು ಬಿಡುಗಡೆಯಾಗಿದ್ದು, ಸಾಕಷ್ಟು ವಿವಾದ ಸೃಷ್ಟಿಸಿತ್ತು.












Click it and Unblock the Notifications