ಋಣಮುಕ್ತ ಪರಿಹಾರ ಸುಗ್ರೀವಾಜ್ಞೆ: ರಾಷ್ಟ್ರಪತಿಗೆ ಮನವಿ ಮಾಡಿದ ಎಚ್ಡಿಕೆ
ನವದೆಹಲಿ, ಆಗಸ್ಟ್ 30: ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಗುರುವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದರು.
ಭೇಟಿ ಮಾಡಿ ಋಣಮುಕ್ತ ಪರಿಹಾರ ಸುಗ್ರೀವಾಜ್ಞೆ ಸಾಧಕ ಬಾಧಕಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಣೆ ನೀಡಿದರು, ಸುಗ್ರೀವಾಜ್ಞೆಗೆ ಸಮ್ಮತಿ ಸೂಚಿಸುವಂತೆ ರಾಷ್ಟ್ರಪತಿಗೆ ಸಿಎಂ ಮನವಿ ಮಾಡಿದರು.
ಋಣಭಾರ ಪೀಡಿತ ಸಣ್ಣ ರೈತರು, ದುರ್ಬಲ ವರ್ಗದವರಿಗೆ ಲೇವಾದೇವಿ ದಾರರು ಕಿರುಕುಳ ನೀಡದಂತೆ ಕ್ರಮ ವಹಿಸಲು ಎಲ್ಲ ಪ್ರಾದೇಶಿಕ ಆಯುಕ್ತರು, ಎಲ್ಲ ವಲಯಗಳ ಪೊಲೀಸ್ ಮಹಾನಿರೀಕ್ಷಕರು, ಎಲ್ಲ ಜಿಲ್ಲಾಧಿಕಾರಿ ಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಗಳಿಗೆ ಸರ್ಕಾರ ಈಗಾಗಲೇ ಸೂಚಿಸಿದೆ.

ಈಗಾಗಲೇ ಋಣಭಾರ ಪೀಡಿತ ಸಣ್ಣರೈತರಿಗೆ ಭೂರಹಿತ ರೈತ ಕೃಷಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗದ ಜನರಿಗೆ ಸಾಲ ನೀಡಿದರೆ ಲೇವಾದೇವಿಗಾರ ರಿಂದ ಸಾಲ ಪಡೆದವರ ಮೇಲೆ ವಿವಿಧ ರೀತಿಯ ಕಾನೂನುಬಾಹಿರ ಒತ್ತಡಗಳು ವರದಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಸುಗ್ರೀವಾಜ್ಞೆಗೆ ಸಮ್ಮತಿ ಸೂಚಿಸುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.ಜತೆಗೆ ಸಚಿವ ಬಂಡೆಪ್ಪ ಕಾಶೆಂಪುರ ಉಪಸ್ಥಿತರಿದ್ದರು.












Click it and Unblock the Notifications