ಇಟಾಲಿಯನ್ ಮಹಿಳೆಗೆ 24/7 ಭದ್ರತೆ ನೀಡಲು ಸೂಚಿಸಿದ್ದೇಕೆ ಹೈಕೋರ್ಟ್?

ನವದೆಹಲಿ, ಜನವರಿ.31: ಭಾರತೀಯ ಯೋಗ ತರಬೇತುದಾರನ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಆರೋಪ ಮಾಡಿರುವ ಇಟಾಲಿಯನ್ ಮಹಿಳೆಗೆ 24/7 ಭದ್ರತೆ ನೀಡುವಂತೆ ದೆಹಲಿ ಪೊಲೀಸರಿಗೆ ಪಟಿಯಾಲಾ ಹೌಸ್ ಕೋರ್ಟ್ ಖಡಕ್ ಸೂಚನೆ ನೀಡಿದೆ.

ಇಟಲಿಯ ಮಿಲನ್ ಮೂಲದ ನಿವಾಸಿಯಾಗಿರುವ ಮಹಿಳೆಗೆ ಭಾರತೀಯ ಮೂಲದ ಯೋಗ ತರಬೇತಿದಾರ ಅಭಿಶೇಕ್ ಸಿಂಗ್ ಹಣ ವಂಚಿಸಿದ್ದಲ್ಲದೇ ಮದುವೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಮಹಿಳೆಯು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಜನವರಿ.08ರಂದು ಮಹಿಳೆಯ ಪರ ವಕೀಲ ಅಲಕ್ ಅಲೋಕ್ ಶ್ರೀವಸ್ತ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಇಟಾಲಿಯನ್ ಮಹಿಳೆಗೆ 24/7 ಭದ್ರತೆ ಒದಗಿಸಲು ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.

HC Directs Delhi Police To Provide 24/7 Security To An Italian Woman

ಇಟಾಲಿಯನ್ ಮಹಿಳೆಯ ವೀಸಾ ಅವಧಿ ವಿಸ್ತರಣೆ:

ದೆಹಲಿ ಪೊಲೀಸರು ಭದ್ರತೆ ನೀಡುವುದರ ಜೊತೆಗೆ ಅರ್ಜಿ ಇತ್ಯರ್ಥವಾಗುವವರೆಗೂ ಮಹಿಳೆಯ ವೀಸಾ ಅವಧಿ ವಿಸ್ತರಣೆಗೊಳಿಸಬೇಕು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಯೋಗ ತರಬೇತುದಾರನ ವಿರುದ್ಧ ಆರೋಪವೇನು?:

2018ರಲ್ಲಿ ಇಟಲಿ ಮೂಲದ ಮಹಿಳೆ ಮತ್ತು ಭಾರತೀಯ ಮೂಲದ ಯೋಗ ತರಬೇತುದಾರ ಅಭಿಷೇಕ್ ಸಿಂಗ್ ಪರಿಚಯವಾಗುತ್ತದೆ. ಭಾರತದಲ್ಲಿ ಯೋಗ ತರಬೇತಿ ಕೇಂದ್ರ ಆರಂಭಿಸಲು ಹಣ ಹೂಡಿದರೆ ಉತ್ತಮ ಆದಾಯ ಗಳಿಸಬಹುದು ಎಂದು ಮಹಿಳೆಗೆ ಆಸೆ ತೋರಿದ್ದಾನೆ. ಅಲ್ಲದೇ 5 ಲಕ್ಷ ರೂಪಾಯಿ ಹಣ ಪಡೆದು ಯೋಗ ಕೇಂದ್ರ ಆರಂಭಿಸಿದ ಅಭಿಷೇಕ್ ಸಿಂಗ್, ಮಹಿಳೆಯ ಜೊತೆಗೆ ಪ್ರೀತಿ ಪ್ರೇಮದ ನಾಟಕ ಆಡಿದ್ದಾನೆ. ನಂತರ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಕೆ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+