ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಗಯುತ ದ್ವಿಚಕ್ರ ವಾಹನಗಳಿಗೆ ಬ್ರೇಕ್ ಹಾಕುತ್ತಾ ಸರ್ಕಾರ?

By Vanitha
|
Google Oneindia Kannada News

ನವದೆಹಲಿ,ನವೆಂಬರ್, 30: ರಾಷ್ಟ್ರಾದ್ಯಂತ ಸಂಭವಿಸುವ ಅಪಘಾತಗಳಿಗೆ 500 ಸಿಸಿ ಹಾಗೂ 1500 ಸಿಸಿ ವೇಗ ಹೊಂದಿದ ದ್ವಿಚಕ್ರ ವಾಹನಗಳೇ ಪ್ರಮುಖ ಕಾರಣ ಎಂದು ಅಧ್ಯಯನದಿಂದ ತಿಳಿದ ಸರ್ಕಾರ ಆತಂಕ ವ್ಯಕ್ತಪಡಿಸಿದ್ದು, ಎರಡು ರೀತಿಯ ಲೈಸೆನ್ಸ್ ಪದ್ಧತಿ ಜಾರಿಗೆ ತರಲು ನಿರ್ಧರಿಸಿದೆ.

ಹುಡುಗ, ಹುಡುಗಿಯರು ಕೆಲವೊಮ್ಮೆ ಸೂಪರ್ ಬೈಕ್ ಗಳನ್ನು ಓಡಿಸಲು ಸಮರ್ಥರಾಗಿಲ್ಲದಿದ್ದರೂ ಕೈಯಲ್ಲಿ ಲೈಸೆನ್ಸ್ ಇದೆ ಎಂಬ ಕಾರಣಕ್ಕೆ ಸೂಪರ್ ಬೈಕ್ ಓಡಿಸಲು ಮುಂದಾಗಿ ತಮ್ಮ ಪ್ರಾಣಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.[ಅಡ್ಡಾದಿಡ್ಡಿ ವಾಹನ ಚಲಾವಣೆಯಲ್ಲಿ ಬೆಂಗಳೂರು ನಂ.1]

ಯಾಕೆ ಸರ್ಕಾರದ ಈ ನಿರ್ಧಾರ?

ಅಪಘಾತಗಳು ದ್ವಿಚಕ್ರ ವಾಹನ ಸವಾರರ ವೇಗಯುತ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಸಂಭವಿಸುತ್ತಿದೆ ಎಂದು ಸರ್ಕಾರ ಮನಗಂಡಿದೆ. ಈ ಕುರಿತು ಅಧ್ಯಯನ ಕೈಗೊಂಡಾಗ ಕಳೆದ ವರ್ಷಕ್ಕಿಂತ ಈ ವರ್ಷ ಅಪಘಾತ ಸಂಖ್ಯೆ ಹೆಚ್ಚಳವಾಗಿದ್ದು, ಸುಮಾರು ಶೇ. 27ರಷ್ಟು ಅಂದರೆ 4.89 ಲಕ್ಷ ಅಪಘಾತಗಳು ಸಂಭವಿಸಿರುವ ಮಾಹಿತಿ ದೊರೆತಿದೆ.[ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯಕ್ಕೆ ಅಡ್ಡಿಯೇ ಇಲ್ಲ!]

ಅಪಘಾತಗಳು ಹೆಚ್ಚುತ್ತಿರುವ ಕುರಿತಾಗಿ ಆತಂಕ ವ್ಯಕ್ತಪಡಿಸಿದ ಸರ್ಕಾರ ಗೇರ್ ಇರುವ ಬೈಕ್ ಹಾಗೂ ಗೇರ್ ಇಲ್ಲದಿರುವ ದ್ವಿಚಕ್ರ ವಾಹನಗಳು ಎಂದು ವಿಂಗಡಿಸಿ ಎರಡು ರೀತಿಯ ಲೈಸೆನ್ಸ್ ನೀಡಲು ಮುಂದಾಗಿದೆ.

ಭಾರತದಲ್ಲಿ ಸುಮಾರು 72ಕ್ಕಿಂತ ಹೆಚ್ಚಿನ ಆಟೋಮೊಬೈಲ್ಸ್ ಕಂಪನಿಗಳಿದ್ದು ಅದರಲ್ಲಿ 500ಸಿಸಿ ಹಾಗೂ 1500 ಸಿಸಿ ವೇಗ ಹೊಂದಿರುವ ಬೈಕ್ ಗಳ ತಯಾರಿಕೆ ನಡೆಯುತ್ತದೆ. ಇತ್ತೀಚೆಗೆ 1500 ಸಿಸಿ ಗಿಂತ ಹೆಚ್ಚಿನ ವೇಗ ಹೊಂದಿರುವ ಬೈಕ್ ಗಳು ರಸ್ತೆಗಿಳಿಯುತ್ತಿವೆ.[ಅಪಘಾತ ತಡೆಯಲು ಎಚ್ ಡಿ ಕ್ಯಾಮರ ಅಳವಡಿಸಿದ ಪೊಲೀಸರು]

ಹಾಗಾಗಿ 500 ಸಿಸಿ ಹಾಗೂ ಅದಕ್ಕೂ ಮೇಲ್ಪಟ್ಟ ವೇಗ ಹೊಂದಿರುವ ಬೈಕ್ ಹಾಗೂ 1500 ಸಿಸಿ ಹಾಗೂ ಅದಕ್ಕೂ ಮೇಲ್ಪಟ್ಟ ಬೈಕ್ ಗಳು ಎಂದು ವಿಂಗಡಿಸಿ ಲೈಸೆನ್ಸ್ ನೀಡಲಾಗುತ್ತಿದೆ.

English summary
The government is planning to introduce a separate category of licence for those riding two-wheelers with over-500 cc engine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X