ಚುನಾವಣೆ ನಡೆಯುವ 5 ರಾಜ್ಯಗಳಲ್ಲಿ ಮೋದಿ ಭಾವಚಿತ್ರದ ಪೋಸ್ಟರ್ ತೆಗೆಸಿ

Posted By:
Subscribe to Oneindia Kannada

ನವದೆಹಲಿ, ಜನವರಿ 9: ಪೆಟ್ರೋಲ್ ಬಂಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಸರಕಾರಿ ಜಾಹೀರಾತು ಪೋಸ್ಟರ್ ಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ತೆಗೆಸಬೇಕು ಎಂದು ಕಾಂಗ್ರೆಸ್ ಪಕ್ಷ ಮನವಿ ಮಾಡಿದೆ. ಐದು ರಾಜ್ಯಗಳ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸೋಮವಾರ ಚುನಾವಣೆ ಆಯೋಗದ ಬಳಿ ಕೇಳಿದೆ.

ಎಐಸಿಸಿ ಕಾರ್ಯದರ್ಶಿ ಕೆ.ಸಿ.ಮಿತ್ತಲ್, ತೈಲ ಕಂಪನಿಗಳ ಅಡುಗೆ ಅನಿಲ ವಿತರಣೆ ಪೋಸ್ಟರ್ ಗಳಲ್ಲಿ ನರೇಂದ್ರ ಮೋದಿ ಭಾವಚಿತ್ರ ಇರುವುದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾ ಖಂಡ್ ಹಾಗೂ ಮಣಿಪುರದಲ್ಲಿ ಮೋದಿ ಭಾವಚಿತ್ರವಿರುವ ಪೋಸ್ಟರ್ ಗಳನ್ನು ತೆಗೆಸಬೇಕು ಎಂದಿದ್ದಾರೆ.[5 ರಾಜ್ಯಗಳ ಚುನಾವಣೆ, ಕೇಂದ್ರ ಬಜೆಟ್ ಮುಂದೆ ಹೋಗಬಹುದಾ?]

Narendra Modi

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಸರಕಾರಿ ಜಾಹೀರಾತುಗಳನ್ನು ಚುನಾವಣೆ ಘೋಷಣೆಯಾದ ರಾಜ್ಯಗಳಲ್ಲಿ ತೆಗೆಸಬೇಕು. ಇಲ್ಲದಿದ್ದರೆ ನ್ಯಾಯಯುತ ಚುನಾವಣೆ ಸಾಧ್ಯವಾಗುವುದಿಲ್ಲ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಪೋಸ್ಟರ್ ಗಳನ್ನು ಚುನಾವಣೆ ನೀತಿ ಸಂಹಿತೆ ಘೋಷಣೆ ಆದ ತಕ್ಷಣ ಹೇಗೆ ತೆಗೆಸುತ್ತಾರೋ ಅದೇ ರೀತಿ ಪ್ರಧಾನಿ ಭಾವಚಿತ್ರವಿರುವ ಹೋರ್ಡಿಂಗ್, ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ತೆಗೆಸಬೇಕು ಎಂದು ದೂರಲಾಯಿತು.

ಐದು ರಾಜ್ಯಗಳಲ್ಲಿನ ಚುನಾವಣೆ ಫೆಬ್ರವರಿಯಿಂದ ಅರಂಭವಾಗುತ್ತದೆ. ಕೊನೆ ಹಂತದದ ಚುನಾವಣೆ ಮಾರ್ಚ್ 8ರಂದು ನಡೆಯಲಿದ್ದು. ಮತ ಎಣಿಕೆಯನ್ನು ಮಾರ್ಚ್ 11ರಂದು ನಿಗದಿ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Congress on Monday moved the Election Commission (EC) demanding removal of Prime Minister Narendra Modi’s photograph from government posters at public places, including petrol pumps, ahead of the Assembly polls in five States.
Please Wait while comments are loading...