ಫರ್ನಾಂಡಿಸ್ ಅಂತಿಮ ಆಸೆಯಂತೆ ದೇಹಕ್ಕೆ ಅಗ್ನಿ,ಮಣ್ಣಿಗೆ ಚಿತಾಭಸ್ಮ

ನವದೆಹಲಿ, ಜನವರಿ 29: ಮಂಗಳವಾರ ಬೆಳಿಗ್ಗೆ ನಿಧನರಾದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ (88) ಅವರ ಅಂತ್ಯಕ್ರಿಯೆ ಅವರ ಕೊನೆಯ ಆಸೆಯಂತೆಯೇ ನಡೆಯಲಿದೆ.

ಮೊದಲಿಗೆ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ, ನಂತರ ಅವರ ಚಿತಾಭಸ್ಮವನ್ನು ಮಣ್ಣಿನಲ್ಲಿ ಹೂಳುವ ಮೂಲಕ ಎರಡು ರೀತಿಯಲ್ಲಿಯೂ ತಮ್ಮ ಅಂತ್ಯಕ್ರಿಯೆ ನಡೆಸಬೇಕು ಎಂದು ಫರ್ನಾಂಡಿಸ್ ಹೇಳಿದ್ದರು.

"ಅವರಿಗೆ ಮೊದಲು ತಮ್ಮ ದೇಹವನ್ನು ಮಣ್ಣಿನಲ್ಲಿ ಹೂಳಬೇಕು ಎಂಬ ಆಸೆಯಿತ್ತು. ಆದರೆ ಕೊನೆಗೆ ತಮ್ಮ ದೇಹವನ್ನು ಸುಟ್ಟು, ನಂತರ ಚಿತಾಭಸ್ಮವನ್ನು ಹೂಳಬೇಕೆಂದು ಅವರೇ ಹೇಳಿದ್ದರು. ಅವರ ಎರಡೂ ಆಸೆಯನ್ನು ಈಡೇರಿಸುವ ಸಲುವಾಗಿ ಅವರ ಅಂತ್ಯಕ್ರಿಯೆಯನ್ನು ಹಾಗೆಯೇ ನಡೆಸುತ್ತೇವೆ" ಎಂದು ಜಾರ್ಜ್ ಫರ್ನಾಂಡಿಸ್ ಅವರ ವಿಚ್ಛೇದನದ ನಂತರ ಅವರೊಂದಿಗಿದ್ದ, ಸಾಮಾಜಿಕ ಕಾರ್ಯಕರ್ತೆ, ಸಮತಾ ಪಕ್ಷದ ಅಧ್ಯಕ್ಷೆ ಜಯಾ ಜೇಟ್ಲಿ ಹೇಳಿದ್ದಾರೆ.

George Fernandes will be cremated and ashes will be buried

ಫರ್ನಾಂಡಿಸ್ ಅವರ ಪುತ್ರ ಅಮೆರಿಕದಲ್ಲಿದ್ದು, ಅವರು ಬಂದಮೇಲೆ ಅಂತ್ಯಕ್ರಿಯೆ ನಡೆಯಲಿದೆ.

ಅಲ್ಜಮೈರ್ ಕಾಯಿಲೆಯಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್ ಇಂದು ಬೆಳಿಗ್ಗೆ ನವದೆಹಲಿಯಲ್ಲಿ ನಿಧನರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+