ಅರ್ಜಿ ಸಲ್ಲಿಸಿದ 15 ದಿನದೊಳಗೆ ಜಿಪಿಎಫ್ ಹಣ ಪಾವತಿಗೆ ಆದೇಶ

ನವದೆಹಲಿ, ಮಾರ್ಚ್ 8: ಕೇಂದ್ರ ಸರಕಾರದ ಐವತ್ತು ಲಕ್ಷ ಉದ್ಯೋಗಿಗಳಿಗೆ ಒಳ್ಳೆ ಸುದ್ದಿಯೊಂದಿದೆ. ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಹಣ ಪಡೆಯುವುದು ಇನ್ನು ಸಲೀಸಾಗಲಿದೆ. ಅರ್ಜಿ ಸಲ್ಲಿಸಿದ ಹದಿನೈದು ದಿನದೊಳಗಾಗಿ ಜಿಪಿಎಫ್ ಹಣ ಪಡೆಯಬಹುದಾಗಿದೆ. ಈ ಹಿಂದೆ ಆಯ್ದ ಕಾರಣಗಳಿಗೆ ಹಣ ವಿಥ್ ಡ್ರಾ ಮಾಡಲು 15 ವರ್ಷ ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಅದೀಗ 10 ವರ್ಷಕ್ಕೆ ಇಳಿಸಲಾಗಿದೆ.

ಜಿಪಿಎಫ್ ಹಣವನ್ನು ಈ ಹಿಂದೆ ಪ್ರೌಡಶಾಲೆ ಮೇಲ್ಪಟ್ಟ ಶಿಕ್ಷಣಕ್ಕಾಗಿ ಮಾತ್ರ ವಿಥ್ ಡ್ರಾ ಮಾಡಬಹುದಿತ್ತು. ಇನ್ನು ಮುಂದೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಉನ್ನತ ಶಿಕ್ಷಣಕ್ಕಾಗಿಯೂ ಡ್ರಾ ಮಾಡಬಹುದು. "ಕಾಲದಿಂದ ಕಾಲಕ್ಕೆ ನಿಯಮದಲ್ಲಿ ಬದಲಾವಣೆ ಮಾಡಿದ್ದರೂ ಉದ್ಯೋಗಿಗಳಿಗೆ ತುಂಬ ಅನುಕೂಲ ಅಂತೇನೂ ಆಗುತ್ತಿರಲಿಲ್ಲ. ಆದರೆ ಈ ಸಲ ಮಹತ್ತರ ಬದಲಾವಣೆ ಮಾಡಲಾಗಿದೆ" ಎಂದು ಸಚಿವಾಲಯ ತಿಳಿಸಿದೆ.[ಸರ್ಕಾರಿ ನೌಕರರಿಗೆ ಶೇ2ರಷ್ಟು ತುಟ್ಟಿ ಭತ್ಯೆ ಏರಿಕೆ ಸಾಧ್ಯತೆ!]

General Provident Fund withdrawal: Payments within 15 days

ನಿಶ್ಚಿತಾರ್ಥ, ಮದುವೆ, ಅಂತ್ಯಸಂಸ್ಕಾರ ಮತ್ತು ಇತರ ಕಾರ್ಯಗಳಿಗೂ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಸ್ವತಃ ಅನಾರೋಗ್ಯಕ್ಕೆ ಈಡಾದಾಗ ಅಥವಾ ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ತುತ್ತಾದಾಗ ಕೂಡ ಜಿಪಿಎಫ್ ನ ಹಣ ಪಡೆಯಬಹುದು. "ಹನ್ನೆರಡು ತಿಂಗಳ ಸಂಬಳ ಅಥವಾ ಜಿಪಿಎಫ್ ನ ಒಟ್ಟು ಮೊತ್ತದ 3/4 ಭಾಗ, ಇವೆರಡರಲ್ಲಿ ಯಾವುದೋ ಕಡಿಮೆಯೋ ಅಷ್ಟು ಡ್ರಾ ಮಾಡಬಹುದು".

ಅನಾರೋಗ್ಯದ ಕಾರಣವಾದರೆ ಜಿಪಿಎಫ್ ನ ಶೇ 90ರಷ್ಟು ಹಣ ಡ್ರಾ ಮಾಡಬಹುದು. ಆದರೆ 10 ವರ್ಷ ಸೇವೆ ಸಲ್ಲಿಸಿರಬೇಕು. ಗೃಹಬಳಕೆ ವಸ್ತುಗಳ ಖರೀದಿಗೂ ಜಿಪಿಎಫ್ ಹಣ ಡ್ರಾ ಮಾಡಬಹುದು. ಆದರೆ ಸದ್ಯದ ನಿಯಮಗಳ ಪ್ರಕಾರ ವಿಥ್ ಡ್ರಾಗೆ ಅರ್ಜಿ ಸಲ್ಲಿಸಿದರೆ ಎಷ್ಟು ಸಮಯದಲ್ಲಿ ಹಣ ಪಾವತಿಸಬೇಕು ಎಂಬ ಬಗ್ಗೆ ಉಲ್ಲೇಖ ಇರಲಿಲ್ಲ.[ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!]

ಆದರೆ, ಈಗ ಗರಿಷ್ಠ ಸಮಯ ಎಂದು ಹದಿನೈದು ದಿನ ಎಂದು ನಿಗದಿಪಡಿಸಲಾಗಿದೆ. ಅದರಲ್ಲೂ ಅನಾರೋಗ್ಯ ಎಂದಾದರೆ ಏಳು ದಿನದೊಳಗೆ ಹಣ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+