GATE 2022: ಪರೀಕ್ಷೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ

ನವದೆಹಲಿ, ಫೆಬ್ರವರಿ 3: ಸ್ನಾತಕೋತ್ತರ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸಲು ನಡೆಸಲಾಗುವ ಗೇಟ್‌ 2022 ಪರೀಕ್ಷೆ ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ವಜಾಗೊಳಿಸಿದೆ.

"ಗೇಟ್‌ ಪರೀಕ್ಷೆಗಳು ಫೆ. 5ರಿಂದ ಆರಂಭವಾಗಲಿದ್ದು ಅದಕ್ಕಿಂತ ಕೇವಲ 48 ಗಂಟೆಗಳ ಮೊದಲು ಪರೀಕ್ಷೆಯನ್ನು ಮುಂದೂಡಲು ಮನವಿ ಮಾಡಿರುವುದು ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಜೀವನದಲ್ಲಿ ಅನಿಶ್ಚಿತತೆ ಹಾಗೂ ಗೊಂದಲಕ್ಕೆ ಕಾರಣವಾಗಲಿದೆ. ಈ ನ್ಯಾಯಾಲಯವು ಪ್ರಾಧಿಕಾರದ ಅಧಿಕಾರವನ್ನು ಸಂವಿಧಾನ 32ನೇ ವಿಧಿಯಡಿ ಏಕೆ ಆಕ್ರಮಿಸಬೇಕು ಎನ್ನುವುದಕ್ಕೆ ವ್ಯಾಪಕ ಕಾರಣಗಳು ಇಲ್ಲ," ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯದ ಮೇಲೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

GATE 2022: Supreme Court Refuses to Postpone Exams Scheduled For February 5

ಯಾವಾಗ ಪರೀಕ್ಷೆ ನಡೆಸಬೇಕೆಂಬುದು ಶೈಕ್ಷಣಿಕ ನೀತಿಯಾಗಿದ್ದು ಅದರಂತೆ ಪರೀಕ್ಷೆ ನಡೆಸಬೇಕು, ಈ ವಿಷಯದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಕೂಡ ನ್ಯಾಯಪೀಠ ಹೇಳಿದೆ.

ಈ ಬಾರಿಯ ಗೇಟ್ ಪರೀಕ್ಷೆಯಲ್ಲಿ 9 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, ಸುಮಾರು 20 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಆನ್ ಲೈನ್ ನಲ್ಲಿ ಸಹಿ ಹಾಕಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ದೇಶದ ಸುಮಾರು 200 ಕೇಂದ್ರಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳು ಭೌತಿಕವಾಗಿ ಪರೀಕ್ಷೆಗೆ ಹಾಜರಾಗಬೇಕಿದ್ದು ಸಂಬಂಧಪಟ್ಟ ಆಡಳಿತ ಅಧಿಕಾರಿ ವರ್ಗ ಸೂಕ್ತ ಕೋವಿಡ್ ನಿಬಂಧನೆಗಳು, ಮಾರ್ಗಸೂಚಿಗಳನ್ನು ಹೊರಡಿಸಿಲ್ಲ, ಈ ಸನ್ನಿವೇಶದೊಳಗೆ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ ಎಂದು ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಕೋರಿದ್ದರು.

ಗೇಟ್‌ 2022 ಫೆಬ್ರುವರಿ 4, 5, 6, 11, 12, 13, ಒಟ್ಟು 6 ದಿನ ಪರೀಕ್ಷೆ ಇರುತ್ತದೆ. ಎರಡು ಸೆಷನ್‌ಗಳಲ್ಲಿ ಗೇಟ್‌ 2022 ಪರೀಕ್ಷೆಯು ನಡೆಯಲಿದ್ದು, ಮೊದಲನೆಯದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಎರಡನೆಯದು ಮಧ್ಯಾಹ್ನ 2:30 ರಿಂದ ಸಂಜೆ 5:30 ರವರೆಗೆ ನಡೆಯಲಿದೆ.

ಗೇಟ್ 2022 ಪರೀಕ್ಷೆಯನ್ನು ಈ ಬಾರಿ ಪಶ್ಚಿಮ ಬಂಗಾಳದ ಖರಗ್‌ಪುರ (Kharagpur)ದಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆ (Indian Institutes of Technology -IIT)ಆಯೋಜನೆ ಮಾಡುತ್ತಿದೆ.

GATE 2022 ಬ್ರಾಂಚ್ ವೈಸ್ ಪರೀಕ್ಷಾ ದಿನಾಂಕದ ಪ್ರಕಾರ ಫೆಬ್ರವರಿ 5, ಫೆಬ್ರವರಿ 6, ಫೆಬ್ರವರಿ 12 ಮತ್ತು ಫೆಬ್ರವರಿ 13 ರಂದು ಆಪ್ಟಿಟ್ಯೂಡ್‌ ಪರೀಕ್ಷೆ(Aptitude Test) ನಡೆಸಲಾಗುತ್ತದೆ.

ಫೆಬ್ರವರಿ 4 ಮತ್ತು ಫೆಬ್ರವರಿ 11 ರಂದು ಸ್ಕ್ರೈಬ್‌ಗಳ ಆಯ್ಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ದಿನವನ್ನು ಮೀಸಲಿಡಲಾಗಿದೆ. ನೈರ್ಮಲ್ಯೀಕರಣ ಮತ್ತು ಇತರ ಚಟುವಟಿಕೆಗಳನ್ನು ಒಳಗೊಂಡಂತೆ ಪರೀಕ್ಷಾ ಕೇಂದ್ರದ ತಯಾರಿ (ಪೋಸ್ಟರ್‌ಗಳು, ಸೈನ್‌ಬೋರ್ಡ್, ಆಸನ ವ್ಯವಸ್ಥೆಗಳು ಇತ್ಯಾದಿ) ಮತ್ತು ಪರೀಕ್ಷಾ ಕೇಂದ್ರವನ್ನು ಪರೀಕ್ಷಿಸಲು ಅಭ್ಯರ್ಥಿಗಳು ಇಚ್ಚಿಸಿದಲ್ಲಿ ಭೇಟಿ ನೀಡಲು ಅವಕಾಶವಿದೆ.

ಗೇಟ್ ಪರೀಕ್ಷೆ: ಎಂಜಿನಿಯರಿಂಗ್ ಪದವಿ ತರಗತಿಗಳಲ್ಲಿನ ವಿಷಯಗಳು ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅಧ್ಯಯನ ಮಾಡಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ ತರಗತಿಗಳ ಪ್ರವೇಶಕ್ಕೆ ಮತ್ತು ಕೆಲವು ಸಾರ್ವಜನಿಕ ವಲಯ ಘಟಕಗಳಲ್ಲಿ ನೇಮಕಾತಿಗೆ ಗೇಟ್ ಪರೀಕ್ಷೆ ನಡೆಸಲಾಗುತ್ತದೆ. ಇದು ಸರ್ಕಾರದ ನೀತಿನಿರೂಪಣೆಯ ಭಾಗವಾಗಿದ್ದು ಸರ್ಕಾರದ ಪ್ರಾಧಿಕಾರಿಗಳು ಈ ಬಗ್ಗೆ ನಿರ್ಧರಿಸಬೇಕಿದೆ.

ಇದರಲ್ಲಿ ನ್ಯಾಯಾಲಯದ ಮಧ್ಯಪ್ರವೇಶವು ಗೊಂದಲಕ್ಕೆ ಕಾರಣವಾಗಲಿದೆ ಎಂದು ನ್ಯಾ. ಡಿ ವೈ ಚಂದ್ರಚೂಡ್‌, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ವಿಕ್ರಂನಾಥ್‌ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಗೇಟ್‌ 2022 ಪರೀಕ್ಷೆಗಳು ಇದೇ ಫೆಬ್ರವರಿ 5, 6, 12 ಮತ್ತು 13ರಂದು ಭೌತಿಕವಾಗಿ ನಡೆಯಲಿವೆ. (ಮಾಹಿತಿ ಕೃಪೆ: ಬಾರ್ & ಬೆಂಚ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+