ಮೊದಲ ಹಂತದಲ್ಲಿ ಯಾವ ವಯಸ್ಸಿನವರಿಗೆ ಕೊರೊನಾ ಲಸಿಕೆ ಸಿಗಬಹುದು?

ನವದೆಹಲಿ, ಡಿಸೆಂಬರ್ 09: ಕೊರೊನಾ ಲಸಿಕೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಆ ಲಸಿಕೆಗಳನ್ನು ಮೊದಲು ಯಾರಿಗೆ, ಎಷ್ಟು ವಯಸ್ಸಿನವರಿಗೆ ಕೊಡಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಸಾಕಷ್ಟು ಪರಿಣತರು ಸರ್ಕಾರಕ್ಕೆ ಸಲಹೆಗಳನ್ನೂ ನೀಡುತ್ತಿದ್ದಾರೆ. ಇದೀಗ ಉನ್ನತ ಮಟ್ಟದ ತಜ್ಞರ ಸಮಿತಿಯು ಸರ್ಕಾರದ ಮುಂದೆ ಸಲಹೆಯೊಂದನ್ನು ಇಟ್ಟಿದೆ.

ಒಂದು ಕೋಟಿ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸೇನೆ ಒಳಗೊಂಡಂತೆ ಸಮಾಜದ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಎರಡು ಕೋಟಿ ಸಿಬ್ಬಂದಿ ಹಾಗೂ 50 ವಯೋಮಾನದ ಮೇಲ್ಪಟ್ಟ 27 ಕೋಟಿ ಜನರಿಗೆ ಏಕಕಾಲದಲ್ಲಿ ಲಸಿಕೆ ನೀಡಬೇಕು ಎಂದು ಸಲಹೆ ನೀಡಿದೆ. ಇದರೊಂದಿಗೆ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಅವರ ಆರೋಗ್ಯ ಸ್ಥಿತಿ ಕ್ಷೀಣವಾಗಿದ್ದಲ್ಲಿ ಅಂಥವರಿಗೂ ಬೇಗನೇ ಲಸಿಕೆ ನೀಡಬೇಕು ಎಂದಿದೆ. ಕೊರೊನಾ ಲಸಿಕೆ ಪಡೆಯುವ ಮೊದಲ ಆದ್ಯತೆಯ ಗುಂಪಿನ ಕುರಿತು ಈ ತಜ್ಞರ ತಂಡ ಮಾಹಿತಿ ಕಲೆ ಹಾಕಿದ್ದು, ಅವನ್ನು ಸರ್ಕಾರದ ಮುಂದಿಟ್ಟಿದೆ.

 ಭಾರತದಲ್ಲಿ ಜನವರಿ ಕೊನೆಯಲ್ಲಿ ಲಸಿಕೆ?

ಭಾರತದಲ್ಲಿ ಜನವರಿ ಕೊನೆಯಲ್ಲಿ ಲಸಿಕೆ?

ಭಾರತದಲ್ಲಿ ಮೊದಲ ಹಂತದ ಕೊರೊನಾ ಸೋಂಕಿನ ಲಸಿಕೆಯು 2021ರ ಜನವರಿ ಕೊನೆಯಲ್ಲಿ ಅಥವಾ ಫೆಬ್ರುವರಿ ಆರಂಭದಲ್ಲಿ ಸಿಗಲಿದೆ. ವೈದ್ಯರು, ನರ್ಸ್ ಗಳು, ನಗರ ಪಾಲಿಕೆ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ದೊರೆಯುವುದು ಎಂದು ತಿಳಿದುಬಂದಿದೆ.

 ಸೆರಂ ಇನ್ ಸ್ಟಿಟ್ಯೂಟ್ ನಿಂದ ಮನವಿ

ಸೆರಂ ಇನ್ ಸ್ಟಿಟ್ಯೂಟ್ ನಿಂದ ಮನವಿ

ಆಸ್ಟ್ರಾ ಜೆನೆಕಾ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ನೀಡುವಂತೆ ಸೋಮವಾರ ಸೆರಂ ಇನ್‌ಸ್ಟಿಟ್ಯೂಟ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಕೇಂದ್ರ ಸರ್ಕಾರವು ಕೊರೊನಾ ಲಸಿಕೆ ಉತ್ಪಾದಕರೊಂದಿಗೆ ಡೋಸ್ ಕುರಿತು ಒಪ್ಪಂದವನ್ನು ಅಂತಿಮಗೊಳಿಸುತ್ತಿರುವುದಾಗಿ ತಿಳಿದುಬಂದಿದೆ. ಆನಂತರ ಲಸಿಕೆ ನೀಡಬೇಕಾದ ಕುರಿತು ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು.

 ಸಾರ್ವಜನಿಕರಿಗೆ ಲಸಿಕೆ ಸಿಗುವುದು ಯಾವಾಗ?

ಸಾರ್ವಜನಿಕರಿಗೆ ಲಸಿಕೆ ಸಿಗುವುದು ಯಾವಾಗ?

ಲಸಿಕೆ ಉತ್ಪಾದನೆ ಮಾಡುವ ಸೆರಂ ಇನ್‌ಸ್ಟಿಟ್ಯೂಟ್ ಶೀಘ್ರವೇ ಲಸಿಕೆಯ ಪೂರೈಕೆ ಕುರಿತು ಕೇಂದ್ರ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಿದ್ದು, ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಹಿರಿಯರ ಬಳಕೆಗೆ ತುರ್ತಾಗಿ ಲಸಿಕೆ ಉಪಯೋಗಿಸಲು ಅನುಮತಿಯನ್ನು ಕೋರಿದೆ. ಲಸಿಕೆಯನ್ನು ಮೊದಲ ಆದ್ಯತೆಯ ಗುಂಪಿನವರಿಗೆ ನೀಡಿದ ನಂತರ, ಅಂದರೆ ಮಾರ್ಚ್-ಏಪ್ರಿಲ್ ಬಳಿಕ ಸಾರ್ವಜನಿಕರಿಗೆ ಲಭ್ಯವಾಗುವ ಸೂಚನೆಯಿದೆ.

 ಕಡಿಮೆ ಬೆಲೆಗೆ ಲಸಿಕೆ?

ಕಡಿಮೆ ಬೆಲೆಗೆ ಲಸಿಕೆ?

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು ಅತಿ ಕಡಿಮೆ ಬೆಲೆಗೆ ಭಾರತಕ್ಕೆ ಕೊರೊನಾ ಲಸಿಕೆ ಕೋವಿಡ್ ಶೀಲ್ಡ್ ಒದಗಿಸಲು ಮುಂದಾಗಿದೆ. ಒಂದು ಡೋಸ್ ‌ಗೆ 250 ರೂ.ನಂತೆ ಕೇಂದ್ರ ಸರ್ಕಾರಕ್ಕೆ ಲಸಿಕೆಯನ್ನು ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಸೋಮವಾರ ಸೆರಂ ಇನ್‌ಸ್ಟಿಟ್ಯೂಟ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು, ಇದರ ಬೆನ್ನಲ್ಲೇ ಅತಿ ಕಡಿಮೆ ಬೆಲೆಗೆ ಲಸಿಕೆಯನ್ನೂ ಕೂಡ ನೀಡಲಿದೆ ಎನ್ನುವ ಮಾಹಿತಿ ದೊರೆತಿದೆ. ಭಾರತದ ಖಾಸಗಿ ಮಾರುಕಟ್ಟೆಯಲ್ಲಿ ಕೊರೊನಾ ಲಸಿಕೆ 1 ಸಾವಿರ ರೂಗೆ ಲಭ್ಯವಾಗಲಿದ್ದು, ಸರ್ಕಾರ ದೊಡ್ಡ ಪ್ರಮಾಣದಲ್ಲಿ ಲಸಿಕೆ ತರಿಸಿಕೊಳ್ಳುವುದರಿಂದ ಸರ್ಕಾರಕ್ಕೆ 250ರೂಗೆ ಕೊರೊನಾ ಲಸಿಕೆಯನ್ನು ನೀಡಲಿದೆ ಎಂಬ ಮಾಹಿತಿ ಇದೆ.

Recommended Video

      ಮುಂದಿನ 3 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+