ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ ನಾಟಕ ಮುಂದುವರಿಕೆ: ಕೇಜ್ರಿವಾಲ್ ರಾಜೀನಾಮೆ

By Mahesh
|
Google Oneindia Kannada News

ನವದೆಹಲಿ, ಮಾ.4: ಆಮ್ ಆದ್ಮಿ ಪಕ್ಷದ ನಾಟಕ ಮುಂದುವರೆದಿದೆ. ರಾಷ್ಟ್ರೀಯ ಕಾರ್ಯಕಾರಿ ಸಭೆ ಆರಂಭಕ್ಕೂ ಕೆಲವೇ ಗಂಟೆಗಳಿಗೂ ಮುನ್ನ ಪಕ್ಷದ ರಾಷ್ಟ್ರೀಯ ಸಂಚಾಲಕ ಸ್ಥಾನಕ್ಕೆ ಎಎಪಿ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ಸಲ್ಲಿಸಿರುವ ಸುದ್ದಿ ಬಂದಿದೆ.

ದೆಹಲಿಯ ಅಭಿವೃದ್ದಿ ನನ್ನ ಮೊದಲ ಆದ್ಯತೆ, ನಾನು ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಲಿದ್ದೇನೆ ಎಂದಿರುವ ಕೇಜ್ರಿವಾಲ್, ಅವರು ರಾಷ್ಟ್ರೀಯ ಕಾರ್ಯಕಾರಿ ಸಭೆಗೂ ಗೈರು ಹಾಜರಾಗಿದ್ದಾರೆ. ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಾಯಕರ ನಡಾವಳಿಯಿಂದ ಎಎಪಿ ಕಾರ್ಯಕರ್ತರು ಕಕ್ಕಾಬಿಕ್ಕಿಯಾಗಿದ್ದಾರೆ.

AAP's drama continues: Arvind Kejriwal quits as party convener just before national executive meet

ಆಮ್ ಆದ್ಮಿ ಪಕ್ಷದ 21 ಪ್ರಮುಖ ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಕಾರ್ಯಕಾರಿ ಸಭೆ ಬುಧವಾರ ಮಧ್ಯಾಹ್ನ ನಿಗದಿಯಾಗಿದೆ. ಪ್ರಶಾಂತ್ ಭೂಷಣ್ ಹಾಗೂ ಯೋಗೇಂದ್ರ ಯಾದವ್ ನಡುವಿನ ಜಟಾಪಟಿಗೆ ಈ ಸಭೆ ಅಂತಿಮ ಹಾಡುವ ನಿರೀಕ್ಷೆಯಿದೆ.[ಎಎಪಿ ಆಂತರಿಕ ಕಲಹದ ವರದಿ]

ಈ ಹಿಂದೆ ಕೂಡಾ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ಸಲ್ಲಿಸಿದ್ದರು ಎಂಬ ಸತ್ಯವನ್ನು ಯೋಗೇಂದ್ರ ಯಾದವ್ ಇತ್ತೀಚೆಗೆ ಬಹಿರಂಗಗೊಳಿಸಿದ್ದರು. ಆದರೆ ಅರವಿಂದ್ ಅವರ ರಾಜಿನಾಮೆಯನ್ನು ರಾಷ್ಟ್ರೀಯ ಕಾರ್ಯಕಾರಣಿ ತಿರಸ್ಕರಿಸಿತ್ತು ಎಂದು ಆಪ್ ಮುಖಂಡ ಆಶುತೋಷ್ ಅವರು ಹೇಳಿದ್ದರು.

ಎನ್ನಾರೈಗಳ ಕರೆ: ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಆಂತರಿಕ ಕಲಹ, ಭಿನ್ನಮತಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಆಪ್ ಬೆಂಬಲಿಗರು, ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಂಡು ಪಕ್ಷದಲ್ಲಿ ಐಕ್ಯತೆ ಕಾಯ್ದುಕೊಳ್ಳುವಂತೆ ನಾಯಕತ್ವಕ್ಕೆ ಸಲಹೆ ನೀಡಿದ್ದಾರೆ.

English summary
Barely few hours before national executive meeting of Aam Aadmi Party (AAP) was scheduled to begin, party convener Arvind Kejriwal has reportedly tendered his resignation from party's national convener's post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X