ಚೀನಾ-ಭಾರತ ಘರ್ಷಣೆ: ಇನ್ನೂ ನಾಲ್ಕು ಭಾರತೀಯ ಯೋಧರ ಸ್ಥಿತಿ ಗಂಭೀರ

ಲಡಾಖ್, ಜೂನ್ 17: ಸೋಮವಾರ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಭಾರತ ಮತ್ತು ಚೀನಾ ಯೋಧರ ಘರ್ಷಣೆ ಹಿನ್ನೆಲೆ ಇನ್ನೂ ನಾಲ್ಕು ಭಾರತೀಯ ಯೋಧರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ ಎಂದು ಎಎನ್ಐ ವರದಿ ಮಾಡಿದೆ.

Recommended Video

      The sovereignty of the Galwan valley area always belonged to China:Zhao Lijian | Oneindia Kannada

      ಈ ಘರ್ಷಣೆಯಲ್ಲಿ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ನಾಲ್ಕು ಜನ ಯೋಧರು ಬದುಕುಳಿದಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಎಎನ್ಐ ಹೇಳಿದೆ. ಹಿಂಸಾತ್ಮಕ ಚಕಮಕಿಯಲ್ಲಿ 43 ಚೀನಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ತಿಳಿಸಿದೆ.

      ಚೀನಾದಲ್ಲಿ ಸಾವು ನೋವು ಸಂಭವಿಸಿದೆ ಎಂದು ಮೂಲಗಳು ಹೇಳಿದ್ದರೂ, ಈ ಕುರಿತು ಚೀನಾ ಸೇನೆ ಅಥವಾ ಸರ್ಕಾರ ಅಧಿಕೃತವಾಗಿ ಸಾವಿನ ಸಂಖ್ಯೆ ಹೇಳುತ್ತಿಲ್ಲ.

      Four Indian soldiers are in critical condition after the violent face-off with Chinese troops

      ''ಜೂನ್ 15-16ರ ರಾತ್ರಿ ನಡೆದ ಘರ್ಷಣೆ ಬಳಿಕ ಭಾರತೀಯ ಮತ್ತು ಚೀನಾದ ಸೈನ್ಯವನ್ನು ಬೇರ್ಪಡಿಸಲಾಗಿದೆ. ಭಾರತವು ಕರ್ನಲ್ ಸೇರಿದಂತೆ 20 ಸೈನಿಕರನ್ನು ಕಳೆದುಕೊಂಡರೆ, ಅನೇಕರು ಗಾಯಗೊಂಡಿದ್ದಾರೆ. ಹಾಗಾಗಿ, ಅಪಘಾತ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿವೆ'' ಎಂದು ಭಾರತೀಯ ಸೇನೆಯ ಹೇಳಿಕೆ ತಿಳಿಸಿದೆ.

      ಕಬ್ಬಿಣದ ಸರಳುಗಳು ಸುತ್ತಿರುವ ಆಯುಧ ಮತ್ತು ಕಲ್ಲುಗಳಿಂದ ಈ ದಾಳಿಯಾಗಿದ್ದು, ಈ ಘಟನೆಯಲ್ಲಿ ಕೆಲವು ಸೈನಿಕರು ಇನ್ನೂ ಕಾಣೆಯಾಗಿದ್ದಾರೆ ಎನ್ನಲಾಗಿದೆ. ಸೆರೆಹಿಡಿಯಲಾದ ಕೆಲವರನ್ನು ಎರಡೂ ಕಡೆಯ ಮಾತುಕತೆಯ ನಂತರ ಬಿಡುಗಡೆ ಮಾಡಲಾಗಿದೆ. ಈ ಘರ್ಷಣೆಯಲ್ಲಿ ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು ಎಂದು ತಿಳಿದು ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+