ಕಾಂಗ್ರೆಸ್ ಸೇರಿದ ಎನ್ ಸಿಪಿ ಮಾಜಿ ಮುಖಂಡ ತಾರಿಖ್ ಅನ್ವರ್
ನವದೆಹಲಿ, ಅಕ್ಟೋಬರ್ 27: ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಎನ್ ಸಿಪಿ ಮಾಜಿ ಮುಖಂಡ ತಾರಿಖ್ ಅನ್ವರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.
ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ತಾರಿಖ್ ಅನ್ವರ್, ನಂತರ ಕಾಂಗ್ರೆಸ್ಸಿಗೆ ಸೇರುವ ತಮ್ಮ ನಿರ್ಧಾರವನ್ನು ಪ್ರಕಟಿಸಿ, ಪಕ್ಷದ ನಾಯಕರೊಂದಿಗೆ ಕೈಜೋಡಿಸಿದರು.
ಸಂಸದರಾಗಿದ್ದ ಅನ್ವರ್, ತಮ್ಮ ಲೋಕಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಇತ್ತೀಚೆಗಷ್ಟೇ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಫೇಲ್ ಡೀಲ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರದು ತಪ್ಪಿಲ್ಲ, ಅವರು ಈ ಹಗರಣದಲ್ಲಿ ಭಾಗಿಯಾಗಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟಿದ್ದನ್ನು ಅನ್ವರ್ ಬಲವಾಗಿ ಖಂಡಿಸಿದ್ದರು. ಬದ್ಧವೈರಿ ಬಿಜೆಪಿಯ ಮೋದಿ ಅವರ ಬಗ್ಗೆ ಎನ್ ಪವಾರ್ ಉತ್ತಮ ಮಾತುಗಳನ್ನಾಡಿದ್ದು ಅನ್ವರ್ ಅವರಿಗೆ ಸಹ್ಯವಾಗಿರಲಿಲ್ಲ. ಇದೇ ಕಾರಣ ನೀಡಿ ಅವರು ಎನ್ ಸಿಪಿಗೆ ಗುಡ್ ಬೈ ಹೇಳಿದ್ದರು.

ಮೊದಲು ಕಾಂಗ್ರೆಸ್ಸಿನಲ್ಲೇ ಇದ್ದ ಅನ್ವರ್ 1980 ರಲ್ಲಿ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿದ್ದರು. ಇಲ್ಲಿನ ಕತಿಯಾರ್ ಕ್ಷೇತ್ರವನ್ನು ಅವರು ಹಲವು ಅವಧಿಗಳಿಗೆ ಪ್ರತಿನಿಧಿಸಿದ್ದರು. ನಂತರ 1999 ರಲ್ಲಿ ಪವಾರ್ ಜೊತೆ ಕೈಜೋಡಿದಿದ್ದರು.












Click it and Unblock the Notifications