ಮೋದಿ ಸರ್ಕಾರಕ್ಕೆ ರೈತರು ಖಾಲಿಸ್ತಾನಿಗಳು, ಬಂಡವಾಳ ಶಾಹಿಗಳೇ ಆಪ್ತರು :ರಾಹುಲ್
ನವದೆಹಲಿ, ಡಿಸೆಂಬರ್ 15: ಮೋದಿ ಸರ್ಕಾರಕ್ಕೆ ರೈತರು ಖಾಲಿಸ್ತಾನಿಗಳು, ಬಂಡವಾಳ ಶಾಹಿಗಳೇ ಆಪ್ತರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳೆಂದು ಘೋಷಿಸಲಾಗಿದ್ದು ಅದು ಮಧ್ಯವರ್ತಿಗಳನ್ನು ತೆಗೆದುಹಾಕುತ್ತದೆ ಮತ್ತು ರೈತರಿಗೆ ದೇಶದಲ್ಲಿ ಎಲ್ಲಿಯಾದರೂ ಮಾರಾಟ ಮಾಡಲು ಅವಕಾಶ ನೀಡುತ್ತದೆ.

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕಳೆದ ಹಲವು ದಿನಗಳಿಂದ ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಮಸೂದೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ಪ್ರತಿಭಟಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
For Modi Govt:
— Rahul Gandhi (@RahulGandhi) December 15, 2020
Dissenting students are anti-nationals.
Concerned citizens are urban naxals.
Migrant labourers are Covid carriers.
Rape victims are nobody.
Protesting farmers are Khalistani.
And
Crony capitalists are best friends.
ಪ್ರತಿಭಟನಾ ರೈತರು ಖಾಲಿಸ್ತಾನಿಗಳು ಮತ್ತು ಕ್ಯಾಪಿಟಲಿಸ್ಟ್‌ಗಳು ಉತ್ತಮ ಸ್ನೇಹಿತರು ಆಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮೋದಿ ಸರ್ಕಾರಕ್ಕೆ ಭಿನ್ನಾಭಿಪ್ರಾಯ ಇರುವ ವಿದ್ಯಾರ್ಥಿಗಳು ದೇಶ ವಿರೋಧಿಗಳು, ನಾಗರಿಗರು ಅರ್ಬನ್ ನಕ್ಸಲರು, ವಲಸೆ ಕಾರ್ಮಿಕರು ಕೋವಿಡ್ ವಾಹಕಗಳು. ಅತ್ಯಾಚಾರಕ್ಕೊಳಗಾದವರು ಯಾರೂ ಅಲ್ಲ.












Click it and Unblock the Notifications