ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬಿಎಗಿಂತ ನೌಕರಿಗೆ ಎಂಜಿನಿಯರಿಂಗ್ ಬೆಸ್ಟ್: ಸಮೀಕ್ಷೆ

|
Google Oneindia Kannada News

Recommended Video

ನೌಕರಿಗೆ ಎಂಬಿಎಗಿಂತ ಎಂಜಿನಿಯರಿಂಗ್ ಬೆಸ್ಟ್: ಸಮೀಕ್ಷೆ | Oneindia Kannada

ನವದೆಹಲಿ, ನವೆಂಬರ್ 21: ದೇಶದ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಬಿಟ್ಟು ಮೂಲ ವಿಜ್ಞಾನದ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ, ಹಾಗೆಯೇ ಎಂಜಿನಿಯರಿಂಗ್ ಸೇರ ಬಯಸುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಆದರೆ ಈಗ ಸಮೀಕ್ಷೆಯೊಂದು ಹೇಳುತ್ತಿದೆ ಜಾಬ್ ಮಾಡಲು ಎಂಬಿಎಗಿಂತ ಎಂಜಿನಿಯರಿಂಗ್ ಸೂಕ್ತ.

'ರಾಷ್ಟ್ರೀಯ ಕೌಶಲ ಸಮೀಕ್ಷೆ 2019'ರಲ್ಲಿ ಈ ವಿಷಯ ಬಹಿರಂಗಗೊಂಡಿದೆ.ಈ ವರ್ಷ ದೇಶದಲ್ಲಿ ಪದವೀಧರರಿಗೆ ಹೆಚ್ಚು ಉದ್ಯೋಗಾರ್ಹತೆಯನ್ನು ಸೃಷ್ಟಿಸಿದ ರಾಜ್ಯಗಳಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದ್ದು, ಪಶ್ಚಿಮ ಬಂಗಾಳ, ದೆಹಲಿ ನಂತರದ ಸ್ಥಾನದಲ್ಲಿದೆ.

ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್! ಎಂಜಿನಿಯರಿಂಗ್ ಕಾಲೇಜುಗಳಿಂದಲೇ ವಿದ್ಯಾರ್ಥಿಗಳ ಹುಡುಕಾಟ, ನಾನಾ ಆಫರ್!

ಹೆಚ್ಚಿನ ಉದ್ಯೋಗಾರ್ಹತೆ ಪಡೆದವರಲ್ಲಿ ಎಂಜಿನಿಯರ್‌ಗಳೇ ಮುಂಚೂಣಿಯಲ್ಲಿದ್ದಾರೆ. ಉದ್ಯೋಗಾರ್ಹತೆ ವಿಷಯದಲ್ಲಿ ಎಂಬಿಎಗಿಂತಲೂ ಎಂಜಿನಿಯರಿಂಗ್ ಪದವೀಧರರೇ ಮುಂದಿದ್ದಾರೆ.

ಉದ್ಯೋಗಾರ್ಹತೆ ಶೇ.46ಕ್ಕೆ ಏರಿಕೆಯಾಗಿದೆ

ಉದ್ಯೋಗಾರ್ಹತೆ ಶೇ.46ಕ್ಕೆ ಏರಿಕೆಯಾಗಿದೆ

ಸಮೀಕ್ಷೆ ಪ್ರಕಾರ ವಿದ್ಯಾರ್ಥಿನಿಯರ ಉದ್ಯೋಗಾರ್ಹತೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.38ರಿಂದ 46ಕ್ಕೆ ಏರಿಕೆಯಾಗಿದೆ.

ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ ಸೀಟ್‌ ಮ್ಯಾಟ್ರಿಕ್ಸ್‌ ಪ್ರಕಟ: 2878 ಎಂಜಿನಿಯರಿಂಗ್‌ ಸೀಟು ಹೆಚ್ಚಳ

ಹೊಸಬರು 2 ಲಕ್ಷ ವೇತನ ಅಪೇಕ್ಷೆ

ಹೊಸಬರು 2 ಲಕ್ಷ ವೇತನ ಅಪೇಕ್ಷೆ

ಪದವಿಯನ್ನು ಆಗಸ್ಟೇ ಮುಗಿಸಿದ ಹೊಸಬರಲ್ಲಿ ಶೇ.70ರಷ್ಟು ಮಂದಿ ವಾರ್ಷಿಕ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪ್ಯಾಕೇಜ್ ಅಪೇಕ್ಷೆ ಮಾಡುತ್ತಿದ್ದಾರೆ.

ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು? ಎಂಜಿನಿಯರಿಂಗ್‌ ಶುಲ್ಕ ನಿಗದಿಯಾಯ್ತು: ವಾರ್ಷಿಕ ಶುಲ್ಕವೆಷ್ಟು?

ನೇಮಕ ಬಗ್ಗೆ ಸಕಾರಾತ್ಮಕ ಅಭಿಪ್ರಾಯ

ನೇಮಕ ಬಗ್ಗೆ ಸಕಾರಾತ್ಮಕ ಅಭಿಪ್ರಾಯ

ನೇಮಕದ ಬಗ್ಗೆ ಶೇ.64ರಷ್ಟು ಮಂದಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಏರಿಕೆಯಾಗುವ ವಿಶ್ವಾಸವಿದೆ.

ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ! ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!

ಬೇಡಿಕೆ ಕಳೆದುಕೊಳ್ತಿದೆ ಎಂಜಿನಿಯರಿಂಗ್: ಮೂಲ ವಿಜ್ಞಾನಕ್ಕೆ ಡಿಮ್ಯಾಂಡ್

ಬೇಡಿಕೆ ಕಳೆದುಕೊಳ್ತಿದೆ ಎಂಜಿನಿಯರಿಂಗ್: ಮೂಲ ವಿಜ್ಞಾನಕ್ಕೆ ಡಿಮ್ಯಾಂಡ್

ರಾಜ್ಯದಲ್ಲಿ ಎಂಜಿನಿಯರಿಂಗ್ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಎಂಜಿನಿಯರಿಂಗ್ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಮೂಲ ವಿಜ್ಞಾನ ಅಂದರೆ ಬಿಎಸ್‌ಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಆರೇಳು ವರ್ಷಗಳ ಹಿಂದೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡರೆ ಸಾಕು ನಂತರ ಎಂಜಿನಿಯರಿಂಗ್ ಗೆ ಸೇರುವುದು ಪಕ್ಕಾ ಆಗಿತ್ತು. ಆದರೆ ವಿದ್ಯಾರ್ಥಿಗಳ ಆಯ್ಕೆ ಬೇರೆಯಾಗಿದೆ. ಅಪ್ಲೈಡ್ ಸೈನ್ಸ್‌ನ್ನು ಎಂಜಿನಿಯರಿಂಗ್ ತಾಂತ್ರಿಕ ಕೋರ್ಸ್‌ಗಳಾದ ಏರೋಸ್ಪೇಸ್ ಎಂಜಿನಿಯರಿಂಗ್, ಆಟೋಮಡಿವ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಗಳಲ್ಲಿ ಕಲಿಸಲಾಗುತ್ತಿದೆ.

English summary
A study revealed that employment engineering is better than MBA. incidentally Karnataka stood 7th in the employment qualifies list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X