ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋಸ್ಟ್‌ ವಾಂಟೆಡ್ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡ ಪಾಕಿಸ್ತಾನ

|
Google Oneindia Kannada News

ನವದೆಹಲಿ, ಆಗಸ್ಟ್‌ 22: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕರಾಚಿಯಲ್ಲೇ ವಾಸಿಸುತ್ತಿದ್ದಾನೆ ಎಂದು ಪಾಕಿಸ್ತಾನ ಸರ್ಕಾರ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ.

1993 ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೂತ್ರದಾರಿ ಭೂಗತ ದೊರೆಗೆ ಆಶ್ರಯ ನೀಡಿದೆ ಎಂದು ನಿರಾಕರಿಸಿದ್ದ ಪಾಕಿಸ್ತಾನ, ದಶಕಗಳಲ್ಲಿ ಇದೇ ಮೊದಲಿಗೆ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿದೆ.

Dawood ibrahim

ವಿಶ್ವಸಂಸ್ಥೆಯ ಅನುಮೋದನೆ ನಿರ್ಣಯದಡಿ 88 ಭಯೋತ್ಪಾದಕರನ್ನು ನಿಷೇಧಿಸಿ ಪಾಕಿಸ್ತಾನ ಸರ್ಕಾರ ಆಗಸ್ಟ್ 18 ರಂದು ಹೊರಡಿಸಿದ ಅನುಮತಿ ಆದೇಶದಲ್ಲಿ ಇಬ್ರಾಹಿಂ ಎಂದು ಹೆಸರಿಸಲಾಗಿದೆ ಎಂದು ಹೇಳಲಾಗಿದೆ. ಭಯೋತ್ಪಾದಕರಿಗೆ ಸಹಾಯ ಮಾಡಲು ಕಠಿಣ ಆರ್ಥಿಕ ನಿರ್ಬಂಧಗಳಿಂದ ಹೊರಬರಲು ತನ್ನ ಪ್ರಯತ್ನಗಳ ಭಾಗವಾಗಿ ಬಹಿರಂಗಪಡಿಸಿದ 88 ನಿಷೇಧಿತ ಭಯೋತ್ಪಾದಕ ಗುಂಪುಗಳ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ರಾಹಿಂ ಹೆಸರು ಸೇರಿಸಿದೆ.

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಬೇಡಿ: ಚೀನಾ-ಪಾಕಿಸ್ತಾನಕ್ಕೆ ಭಾರತದ ತಿರುಗೇಟುಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಬೇಡಿ: ಚೀನಾ-ಪಾಕಿಸ್ತಾನಕ್ಕೆ ಭಾರತದ ತಿರುಗೇಟು

ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಅವರ ಮೇಲೆ ಅವರ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸುವ ಮೂಲಕ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಪಾಕ್ ಹೇಳಿದೆ.

English summary
For the first time in decades, Pakistan has admitted that Dawood Ibrahim, who India accuses of being the mastermind behind the 1993 Mumbai bomb blasts, is in Pakistan, a news report said Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X